Govind Karajola: 3 ಗುಂಪುಗಳಾಗಿ ಒಡೆದುಹೋದ ರಾಜ್ಯ ಕಾಂಗ್ರೆಸ್- ಒಂದು ಸಿದ್ದರಾಮಯ್ಯದ್ದು, ಇನ್ನೊಂದು ಡಿಕೆಶಿ ಯದ್ದು, ಹಾಗಿದ್ರೆ ಮತ್ತೊಂದು ಯಾವುದು?

Govinda Karajola: ಕರ್ನಾಟಕದಲ್ಲಿ ಸರ್ಕಾರ ರಚಿಸಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಮೂರು ಗುಂಪುಗಳಾಗಿ ಒಡೆದು ಹೋಗಿದೆ. ಅದಕ್ಕೆ ಸದ್ಯದಲ್ಲಿ ಉಳಿಗಾಲವಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ಸಂಸದ ಗೋವಿಂದ ಕಾರಜೋಳ(Govinda Karajol) ಅವರು ಹೇಳಿದ್ದಾರೆ.

ಹೌದು, ಕಾಂಗ್ರೆಸ್​ನಲ್ಲಿ(Congress) ಮೂರು ಗುಂಪುಗಳಾಗಿವೆ. ಒಬ್ಬೊಬ್ಬರದು ಒಂದೊಂದು ಗುಂಪು. ಪರಮೇಶ್ವರದ್ದು(Dr G Parameshwar)ದಲಿತರ ಗುಂಪು. ಸಿದ್ದರಾಮಯ್ಯನವರದು(Siddaramaiah) ಹಿಂದುಳಿದವರ ಗುಂಪು. ಡಿಕೆಶಿಯದ್ದು(D K Shivkumar) ಗೌಡರ ಗುಂಪಾಗಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಹೇಳಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಆಡಳಿತದ ಮೇಲೆ ಹಿಡಿತ ತಪ್ಪಿದೆ. ಪಕ್ಷದ ಹೈಕಮಾಂಡಿಗೂ ತಮ್ಮದೇ ಶಾಸಕರು, ಮುಖಂಡರನ್ನು ನಿಯಂತ್ರಣದಲ್ಲಿಡಲಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪರಮೇಶ್ವರ್ ಮನೆಯಲ್ಲಿ ದಲಿತರ ಸಭೆ ಮಾಡುತ್ತಾರೆ‌. ಸಿದ್ದರಾಮಯ್ಯ ಪರವಾಗಿ ಹಿಂದುಳಿದವರ ಸಭೆ ಆಯ್ತು. ಸಿದ್ದರಾಮಯ್ಯ ಪರವಾಗಿ ಡಿನ್ನರ್ ಸಭೆ ಆಗಿತ್ತು. ಆದರೆ ಯಾರೂ ಎಚ್‌.ಕೆ.‌ ಪಾಟೀಲರನ್ನು ಕರೆದಿರಲಿಲ್ಲ. ಅವರೊಬ್ಬ ಪ್ರತಿಷ್ಠಿತ ರಾಜಕಾರಣಿ. ಸಿಎಂ ಆಗಲಿಕ್ಕೆ ಡಿಕೆಶಿ ಎಲ್ಲ ಕಡೆ ಓಡಾಡುತ್ತಿದ್ದಾರೆ. ಕುಮಾರಸ್ವಾಮಿ ಕಡೆ ಕೂಡ ಹೋಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಬಿಜೆಪಿ ಕಣ್ಣೀರು ಹಾಕಿಸಿದೆ ಅಂತಾ ಆರೋಪಿಸಿದ್ದರು. ಆದರೆ ಕಾಂಗ್ರೆಸ್‌ನಲ್ಲಿ ಲಿಂಗಾಯತರ ಪರಿಸ್ಥಿತಿ ಈಗ ಎರಡನೇ ದರ್ಜೆ ಪ್ರಜೆ ಆಗಿದೆ. ಲಿಂಗಾಯತರನ್ನು ಕಡೆಗಣಿಸಲಾಗಿದೆ’ ಎಂದು ಆರೋಪಿಸಿದರು.

ಅಲ್ಲದೆ ಕಾಂಗ್ರೆಸ್ ಸರಕಾರದಲ್ಲಿ ಮೂರು ಗುಂಪುಗಳಾಗಿ ಒಡೆದು ಹೋಗಿರುವುದರಿಂದ ರಾಜ್ಯದ ಅಭಿವೃದ್ಧಿ ಕುಂಠಿತ ಆಗುತ್ತಿದೆ. ಬರೀ ಜಾತಿ, ಜಾತಿ ಗುಂಪುಗಳಾಗಿವೆ. ಇದು ಆಡಳಿತಕ್ಕೆ ಒಳ್ಳೆಯ ಲಕ್ಷಣವಲ್ಲ. ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆ ಕರೆದು ಯಾರಿಗೆ ಬಹುಮತ ಬರುತ್ತದೋ ಅವರಿಗೆ ಸಿಎಂ ಬಿಟ್ಟು ಕೊಡಬೇಕು. ಇಲ್ಲವೇ ಎಲ್ಲರನ್ನೂ ಹದ್ದುಬಸ್ತಿನಲ್ಲಿಕೊಂಡು ಸರಕಾರ ನಡೆಸಬೇಕು ಎಂದಿದ್ದಾರೆ.

Rahul Gandhi: ಹಿಂದೂಗಳು, ಹಿಂಸಾಚಾರಿಗಳು ಹೇಳಿಕೆ ವಿಚಾರ- ರಾಹುಲ್ ಗಾಂಧಿಗೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಬೆಂಬಲ

 

Leave A Reply

Your email address will not be published.