BPL Card: ಬಿಪಿಎಲ್‌ ಕಾರ್ಡ್‌ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ; ಅರ್ಜಿ ಸಲ್ಲಿಸಲು ಇಲಾಖೆ ಒಪ್ಪಿಗೆ

Share the Article

BPL Card: ಆಹಾರ ನಾಗರಿಕ ಸರಬರಾಜು ಇಲಾಖೆ ಒಂದು ವರ್ಷದ ಬಳಿಕ ಬಿಪಿಎಲ್‌ ಫಲಾನುಭವಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಅದೇನೆಂದರೆ ಬಿಪಿಎಲ್‌ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಇಲಾಖೆ ಅನುಮತಿಯನ್ನು ನೀಡಿದೆ. ನಾಗರಿಕ ವೆಬ್‌ಸೈಟ್‌ ahara.kar.nic.in ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರ ಜೊತೆಗೆ ಮೊಬೈಲ್‌, ಕಂಪ್ಯೂಟ್‌, ಸೇವಾಸಿಂಧು ಪೋರ್ಟಲ್‌ನಲ್ಲಿ ಕೂಡಾ ಅರ್ಜಿಯನ್ನು ಸಲ್ಲಿಸಬಹುದು ಎಂದು ಇಲಾಖೆ ತಿಳಿಸಿದೆ.

ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನಿಗದಿಪಡಿಸಲಾಗಿದೆ. ಇದರಲ್ಲಿ ಬಿಪಿಎಲ್‌, ತುರ್ತು ಆರೋಗ್ಯ ಸಂಬಂಧ ಬಿಪಿಎಲ್‌ ಕಾರ್ಡ್‌, ಎಪಿಎಲ್‌ ಅರ್ಜಿ ಸಲ್ಲಿಕೆ ಕೂಡಾ ಸೇರಿದೆ. ಜೊತೆಗೆ ರೇಷನ್‌ ಕಾರ್ಡ್‌ ತಿದ್ದುಪಡಿಗೂ ಅವಕಾಶ ನೀಡಲಾಗಿದೆ.

ಇದೀಗ ಫಲಾನುಭವಿಗಳು ರೇಷನ್‌ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಒಂದು ವರ್ಷದ ಬಳಿಕ ಅನುಮತಿ ನೀಡಿರುವುದರಿಂದ ಬೆಂಗಳೂರು ಒನ್‌ ಸೆಂಟರ್‌ಗೆ ಬರುತ್ತಿದ್ದು, ಅರ್ಜಿ ಸಲ್ಲಿಸಲು ಪರದಾಡುತ್ತಿದ್ದು, ವೆಬ್‌ಸೈಟ್‌ ಓಪನ್‌ ಆಗುತ್ತಿದ್ದರೂ ಅರ್ಜಿ ರವಾನೆ ಆಗುತ್ತಿಲ್ಲ.

ಪರ್ಮಿಷನ್‌ ಕೊಟ್ಟು ಆಹಾರ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Mangaluru: ಚಡ್ಡಿ ಗ್ಯಾಂಗ್‌ ದರೋಡೆ ಪ್ರಕರಣ; ನಾಲ್ವರ ಬಂಧನ, ಇನ್ನೋರ್ವ ಎಲ್ಲಿ?

Leave A Reply