Blackmail: ವಿದ್ಯಾರ್ಥಿನಿಯರ ಬೆತ್ತಲೆ ಫೋಟೋ ತೋರಿಸಿ ಲೈಂಗಿಕ ಟಾರ್ಚರ್! ಕೊನೆಗೂ ಕಾಮುಕನ ಹೆಡೆಮುರಿ ಕಟ್ಟಿದ ಪೊಲೀಸರು!
Blackmail: ಹಲವು ವಿದ್ಯಾರ್ಥಿನಿಯರ ಬೆತ್ತಲೆ ಫೋಟೋ ಕ್ಲಿಕ್ಕಿಸಿಕೊಂಡು ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕನನ್ನು ಸೆರೆಹಿಡಿಯಲಾಗಿದೆ. ಹೌದು, ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಜಕ್ಕನಹಳ್ಳಿಯಲ್ಲಿ ಒಂದೇ ಶಾಲೆಯ 10-15 ವಿದ್ಯಾರ್ಥಿನಿಯರನ್ನು ಕ್ರೀಡೆ ಮತ್ತು ಚಿತ್ರಕಲೆ ಕಲಿಸಿಕೊಡುವ ನೆಪದಲ್ಲಿ ಕರೆಸಿಕೊಂಡು ಅವರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಆತನನ್ನು ಕೂಡಲೇ ಬಂಧಿಸಲಾಗಿದೆ.
ಯೋಗಿ ಎಂಬ ಕಾಮುಕ ಜಕ್ಕನಹಳ್ಳಿ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ಶಾಲೆಯ ಸಮೀಪವೇ ಸ್ವಂತ ತರಬೇತಿ ಕೇಂದ್ರ ನಡೆಸುತ್ತಿದ್ದ. ಕೆಲ ವಿದ್ಯಾರ್ಥಿನಿಯರಿಗೆ ಕ್ರೀಡೆ, ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ಕಾರಣ ತರಬೇತಿಗೆ ಸೇರಿಕೊಂಡಿದ್ದರು.
‘ಈತ ರಾತ್ರಿವರೆಗೂ ಪಿ.ಟಿ.ರೂಂನಲ್ಲೇ ಇರುತ್ತಿದ್ದ. ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವ ಸಂದರ್ಭ ಗಳಲ್ಲಿ ಕದ್ದು ತನ್ನ ಮೊಬೈಲ್‌ನಲ್ಲಿ ಹುಡುಗಿಯರ ಬೆತ್ತಲೆ, ಅರೆ ಬೆತ್ತಲೆ ಫೋಟೋಗಳನ್ನು ತೆಗೆದು, ಪೋಷಕರಿಗೆ ಕಳುಹಿಸುವುದಾಗಿ ಹೆದರಿಸಿ ಬ್ಲ್ಯಾಕ್ ಮೇಲ್ (Blackmail) ಮಾಡುತ್ತಿದ್ದ. ತನ್ನೊಂದಿಗೆ ಮಲಗುವಂತೆ ಬಲವಂತ ಮಾಡುತ್ತಿದ್ದ. ತರಬೇತಿ ನೀಡುವ ವೇಳೆ ಕೆಟ್ಟದಾಗಿ ವರ್ತಿಸುತ್ತಿದ್ದ.
ಅಲ್ಲದೇ ಅಮೃತಹಳ್ಳಿ ಗ್ರಾಮದ ವಿದ್ಯಾರ್ಥಿನಿಯೊಬ್ಬಳಿಗೆ ಒಂದು ದಿನ ತಿನ್ನಲು ಮತ್ತಿನ ಮಾತ್ರೆ ಸೇರಿಸಿ ಐಸ್‌ಕ್ರೀಂ ಕೊಡಿಸಿ, ಅದನ್ನು ತಿಂದ ಬಳಿಕ ಆಕೆ ನಿದ್ರೆಗೆ ಜಾರಿದ್ದಳು. ಆಕೆ ಮತ್ತೆ ಎದ್ದಾಗ ಪಿ.ಟಿ.ರೂಂನಲ್ಲಿ ಇದ್ದಳು. ನಂತರ ಆಕೆಯ ಬೆತ್ತಲೆ ಫೋಟೋ ತೋರಿಸಿ ನನ್ನೊಂದಿಗೆ ಮಲಗಲಿಲ್ಲವೆಂದರೆ ನಿಮ್ಮ ತಂದೆ-ತಾಯಿಗೆ ತೋರಿಸುವು ದಾಗಿ ಬೆದರಿಸಿದ್ದ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸದ್ಯ ಲೈಂಗಿಕ ದೌರ್ಜನ್ಯ ಸಂಬಂಧ ನಾಲ್ವರು ವಿದ್ಯಾರ್ಥಿನಿಯರು ನೀಡಿದ ಹೇಳಿಕೆಯನ್ನು ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಎಸ್.ಎಂ.ಶೈಲಜಾ ನೀಡಿದ ದೂರಿನನ್ವಯ ಪೊಲೀಸರು ಆರೋಪಿಯನ್ನು ಅಮೃತಹಳ್ಳಿ ಗ್ರಾಮದ ಯೋಗಿ ಎಂಬಾತನನ್ನು ಬಂಧಿಸಿದ್ದಾರೆ. ಇದೀಗ ಆರೋಪಿ ವಿರುದ್ದ ಮೇಲುಕೋಟೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Deadly Accident: ಡಬ್ಬಲ್ ಡೆಕ್ಕರ್ ಬಸ್-ಟ್ಯಾಂಕರ್ ಬಸ್ ಮುಖಾಮುಖಿ ಡಿಕ್ಕಿ-18 ಜನ ಸಾವು