Mudigere: ನಿಷೇಧಿತ ಜಲಪಾತದಲ್ಲಿ ಯುವಕರ ಮೋಜು, ಮಸ್ತಿ; ಪೊಲೀಸರ ಎಂಟ್ರಿ, ಚಡ್ಡಿಯಲ್ಲೇ ಓಡಿದ ಪ್ರವಾಸಿ ಯುವಕರು
Moodigere: ಜಿಲ್ಲಾಡಳಿತವು ನಿಷೇಧಿತ ಜಾಗ ಎಂದು ಘೋಷಿಸಿದ್ದ ಜಲಪಾತವೊಂದರಲ್ಲಿ ಮೋಜು ಮಸ್ತಿ ಮಾಡಲೆಂದು ಹೋಗಿದ್ದ ಯುವಕರನ್ನು ಪೊಲೀಸರು ಕೇವಲ ಚಡ್ಡಿಯಲ್ಲೇ ಓಡಿಸಿದ ಘಟನೆಯೊಂದು ನಡೆದಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಫಾಲ್ಸ್ ಬಳಿ ಈ ಘಟನೆ ನಡೆದಿದೆ.
ಈ ಜಾಗದಲ್ಲಿ ನೀರು ಇಳಿಯುತ್ತಿರುವಲ್ಲಿ ಬಂಡೆ ಹತ್ತಿ ಹುಚ್ಚಾಟ ಮೆರೆಯುತ್ತಿದ್ದ ಪ್ರವಾಸಿಗರಿಗೆ ಬಿಸಿ ಮುಟ್ಟಿಸಿದ ಬಣಕಲ್ ಗಸ್ತು ಪೊಲೀಸರು. ಯುವಕರ ಬಟ್ಟೆಗಳನ್ನು ತಂದಿದ್ದು, ವಾಹನಕ್ಕೆ ತುಂಬಿದ ಪೊಲೀಸರು ಅವರ ಹಿಂದೆನೇ ಚಡ್ಡಿಯಲ್ಲೇ ಓಡಿ ಬಂದ ಯುವಕರು ಪ್ಲೀಸ್ ಸರ್, ಇನ್ನೊಂದು ಸಲ ಈ ರೀತಿ ಮಾಡುವುದಿಲ್ಲ, ದಯವಿಟ್ಟು ಬಟ್ಟೆ ಕೊಡಿ ಎಂದು ಓಡೋಡಿ ಬಂದಿದ್ದಾರೆ.
ನಂತರ ಪೊಲೀಸರೊಂದಿಗೆ ಪ್ರವಾಸಿ ಯುವಕರು ತಮ್ಮ ಬಟ್ಟೆ ಕೊಡುವಂತೆ ವಾಗ್ವಾದಕ್ಕಿಳಿದಿದ್ದಾರೆ. ನಂತರ ಪೊಲೀಸರು ಯುವಕರಿಗೆ ಎಚ್ಚರಿಕೆ ಕೊಟ್ಟಿದ್ದು, ಅವರ ಮಾತನ್ನು ಒಪ್ಪಿದ ಯುವಕರು ತಮ್ಮ ಬಟ್ಟೆಗಳನ್ನು ಪಡೆದು ಹೋಗಿದ್ದಾರೆ.
U.P: ರೋಗಿಗಳ ನೋಡವುದನ್ನು ಬಿಟ್ಟು, ಮಂಗನ ಜೊತೆ ಆಟವಾಡುತ್ತಾ, ರೀಲ್ಸ್ ಮಾಡಿದ ಆರು ನರ್ಸ್ಗಳ ಅಮಾನತು