Modi Government: ಅಧಿಕಾರಕ್ಕೆ ಬಂದು ತಿಂಗಳು ಆಗುತ್ತಿದ್ದಂತೆ ದೇಶದ ರೈತರಿಗೆ ಬಂಪರ್ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ !!
Modi Government: 3ನೇ ಬಾರಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯವರು(PM Modi ತಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಲವು ವರ್ಗದವರಿಗೆ ಸಿಹಿಸುದ್ದಿ ನೀಡಿದ್ದಾರೆ. ಅಂತೆಯೇ ಇದೀಗ ರೈತಾಪಿ(Farmers) ವರ್ಗಕ್ಕೂ ಸಖತ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಮುಂಬರುವ ಬಜೆಟ್ ಅಧಿವೇಶನದಲ್ಲಿ ಬಡ ಸಮುದಾಯಗಳ ಕಲ್ಯಾಣಕ್ಕಾಗಿ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದ್ದು, ಅದರಲ್ಲಿ ಜಾರಿಗೊಳಿಸುವ ಯೋಜನೆಯೊಂದು ಇದು ಪ್ರತಿ ಕುಟುಂಬಕ್ಕೆ 10 ಲಕ್ಷ ರೂ.ಗಳವರೆಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಬೆನ್ನಲ್ಲೇ ರೈರಿಗೂ ಸಿಹಿ ಸುದ್ದಿ ಸಿಗಲಿದೆ ಎನ್ನಲಾಗಿದೆ.
ಹೌದು, ಕೇಂದ್ರ ಬಜೆಟ್ ನಲ್ಲಿ ಪಿಎಂ ಕಿಸಾನ್ ಯೋಜನಾ(PM Kissan samman Yojana) ನಿಧಿಯನ್ನು 6,000 ರೂ.ಗಳಿಂದ 8,000 ರೂ.ಗೆ ಹೆಚ್ಚಿಸಲಾಗುವುದು ಎಂದು ಈಗಾಗಲೇ ವರದಿಗಳು ಬಂದಿವೆ. ಇದು ನಿಜವಾದರೆ ರೈತರಿಗೆ ಕೇಂದ್ರ ಕೊಡುವ ಬಂಪರ್ ಗುಡ್ ನ್ಯೂಸ್ ಇದಾಗಿದೆ.
ಅಂದಹಾಗೆ ಕಳೆದು ತಿಂಗಳು 3ನೇ ಸಲ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಕಚೇರಿಗೆ ಆಗಮಿಸುತ್ತಿದ್ದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ರೈತರ ಖಾತೆಗೆ ಬರೋಬ್ಬರಿ 20,000 ಕೋಟಿ ರೂಪಾಯಿ ಜಮೆ ಮಾಡಿಸಿದ್ದರು. ಈ ಮೂಲಕ ಕಿಸಾನ್(PM Kissan samman) ಸಮ್ಮಾನ್ ನಿಧಿಯ 17ನೇ ಕಂತನ್ನು ಮೋದಿ ಬಿಡುಗಡೆ ಮಾಡಿದ್ದರು.