Google Map: ಇನ್ಮುಂದೆ ಟ್ರಾಫಿಕ್ ಪೋಲೀಸರಿಂದ ತಪ್ಪಿಸಿಕೊಳ್ಳಲು ಗೂಗಲ್ ಮಾಡುತ್ತೆ ಹೆಲ್ಪ್ – ಗೂಗಲ್‌ ಮ್ಯಾಪ್‌ನಲ್ಲಿ ಹೀಗೆ ಸರ್ಚ್ ಮಾಡಿ ಸಾಕು !!

Google Map: ಟ್ರಾಫಿಕ್ ಪೋಲೀಸರಿಂದ ಜನ ರೋಸಿ ಹೋಗಿದ್ದಾರೆ. ಗಡಿಬಿಡಿಯಲ್ಲಿ ಹೋಗುವಾಗಲೂ ಇವರು ಬಂದು ತೊಂದರೆ ಕೊಟ್ಟರೆ ಹೇಗಿರಬಹುದು ಹೇಳಿ? ಈ ಕಿರಿಕಿರಿ ಯಾರಿಗೂ ಬೇಡ ಮಾರ್ರೆ. ಹಾಗಿದ್ರೆ ಇನ್ನು ಈ ಚಿಂತೆ ಬೇಡ. ಯಾಕೆಂದರೆ ಈ ರಗಳೆಯಿಂದ ತಪ್ಪಿಸಿಕೊಳ್ಳಲು ಇನ್ಮುಂದೆ ನಿಮಗೆ ಗೂಗಲ್ ಹೆಲ್ಪ್ ಮಾಡುತ್ತೆ.

 

ಗೂಗಲ್ ಮ್ಯಾಪ್(Google Map) ದಾರಿ ತಪ್ಪದೇ ತಮ್ಮ ಸ್ಥಳಗಳಿಗೆ ತೆರಳಲು ಸಹಾಯ ಮಾಡಲು ಇರುವ ಬಹುಪಯೋಗಿ ಆಪ್. ಹೊಸ ಊರಿಗೆ ಹೋದಾಗ, ಯಾವುದೇ ವಿಳಾಸವನ್ನು ಪತ್ತೆ ಮಾಡಲು ಗೂಗಲ್ ಮ್ಯಾಪ್ ಸಹಾಯ ಮಾಡುತ್ತದೆ. ಆದರಿನ್ನು ಇದು ನಾವು ಹೋಗುವ ದಾರಿಯಲ್ಲಿ ಟ್ರಾಫಿಕ್ ಪೋಲಿಸ್(Traffic Police) ಇದ್ದರೆ ಅದನ್ನೂ ತಿಳಿಸಿ ಬಚಾವ್ ಮಾಡುತ್ತದೆ.

ಹೌದು, ನೀವೇನಾದರೂ ಗೂಗಲ್ ಮ್ಯಾಪ್‌ನಲ್ಲಿ police irtare… ಎಂದು ಹುಡುಕಿದರೆ ಅಂತಹ ಹಲವಾರು ಹೆಸರಿನ ಸ್ಥಳಗಳನ್ನು ನೋಡಬಹುದು. ಇದು ಟ್ರಾಫಿಕ್ ಪೊಲೀಸರು ಹೆಚ್ಚಾಗಿ ಇರುವ ಸ್ಥಳಗಳನ್ನು ಗುರುತಿಸಿದ್ದು, ಇತರೆ ವಾಹನ ಸವಾರರು ಟ್ರಾಫಿಕ್ ಪೊಲಿಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿದೆ. ಇದೇನು ಗೂಗಲ್ ಲೊಕೇಶನ್ ಮ್ಯಾಪ್‌ಗೂ ಬೆಂಗಳೂರು ಪೊಲೀಸರಿಗೂ, ವಾಹನ ಸವಾರರಿಗೂ ಏನಯ್ಯಾ ಸಂಬಂಧ ಅನ್ಕೊಳ್ತಿದ್ದೀರಾ? ಇಲ್ಲಿದೆ ನೋಡಿ.

ಬೆಂಗಳೂರಿನಲ್ಲಿ ವಾಹನ ಸವಾರರು ಗೂಗಲ್ ಮ್ಯಾಪ್‌ನಲ್ಲಿ police irtare… ಎಂದು ಸರ್ಚ್ ಮಾಡಿದರೆ ಹಲವು ಪ್ರಮುಖ ವೃತ್ತಗಳ ಹೆಸರು ಶೋ ಆಗುತ್ತದೆ. ಆಗ ಅಲ್ಲಿ Police irtare nodkond hogi… ಎಂದು ಗೂಗಲ್ ಮ್ಯಾಪ್‌ನಲ್ಲಿ ಸಲಹೆ ನೀಡಲಾಗುತ್ತದೆ. ಇನ್ನು ಗೂಗಲ್‌ ಮ್ಯಾಪ್‌ನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಲು ಟ್ರಾಫಿಕ್ ಪೊಲೀಸರು ಹೆಚ್ಚಾಗಿ ನಿಂತುಕೊಳ್ಳುವ ಸ್ಥಳಗಳನ್ನು ಗುರುತಿಸಲಾಗಿದೆ. ನೀವು ಗೂಗಲ್‌ನಲ್ಲಿ police irtare… ಎಂದು ಸರ್ಚ್‌ ಮಾಡಿದರೆ, ‘ಪೊಲಿಸ್ ಇರ್ತಾರೆ ನೋಡ್ಕೊಂಡ್ ಹೋಗಿ’ (Police irtare nodkond hogi), ‘ಪೊಲೀಸ್ ಇರ್ತಾರೆ’, ‘ಪೊಲೀಸ್ ಇರ್ತಾರೆ ಹುಷಾರು’ ಪೊಲೀಸ್ ಇರ್ತಾರೆ ನೋಡ್ಕೊಂಡು ಹೋಗು ಮಗಾ… ಎಂದೆಲ್ಲಾ ಎಚ್ಚರಿಕೆ ಸಂದೇಶಗಳನ್ನು ನೀಡುವ ಸ್ಥಳಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.

ಇದರಿಂದ ಬೆಂಗಳೂರಲ್ಲಿ ಗೂಗಲ್ ಮ್ಯಾಪ್‌ನಲ್ಲಿ ತೋರಿಸುವ ರಸ್ತೆ ಹಾಗೂ ವೃತ್ತಗಳಲ್ಲಿ ಹಾದು ಹೋಗುವ ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡು ಹೋಗಬೇಕು. ಬೆಂಗಳೂರು ಮಾತ್ರವಲ್ಲ, ಮೈಸೂರು, ಚಿಕ್ಕಮಗಳೂರು, ಹಿರಿಯೂರು, ದಾವಣಗೆರೆ, ಕೊಟ್ಟಿಗೆಹಾರ-ಚಿಕ್ಕಮಗಳೂರು ರಸ್ತೆಯಲ್ಲಿ ಕೂಡ ಪೊಲೀಸರ ತಪಾಸಣೆ ಸ್ಥಳಗಳನ್ನು ಗೂಗಲ್ ಮ್ಯಾಪ್‌ನಲ್ಲಿ ಹೀಗೆ ಗುರುತಿಸಲಾಗಿದೆ. ಈ ರೀತಿ ಮಾಡುವುದರಿಂದ ಕೆಲವೊಮ್ಮೆ ತಪ್ಪಿತಸ್ಥರು ಕೂಡ ತಪ್ಪಿಸಿಕೊಳ್ಳುವ ಅಪಾಯ ಇದೆ. ಪೊಲೀಸರು ಈ ಬಗ್ಗೆ ಕೂಡಲೇ ಗಮನ ಹರಿಸಿ, ಇದನ್ನು ಗೂಗಲ್ ಮ್ಯಾಪ್‌ನಲ್ಲಿ ಅಳಿಸುವ ಕೆಲಸ ಮಾಡಬೇಕಿದೆ.

NDA Government: ದೇಶದ ಜನರಿಗೆ ಕೇಂದ್ರದಿಂದ ಬಂಪರ್ ಘೋಷಣೆ – ಇನ್ನು ವರ್ಷಕ್ಕೆ ಪ್ರತೀ ಕುಟುಂಬಕ್ಕೆ ಸಿಗಲಿದೆ 10 ಲಕ್ಷ ರೂ !!

Leave A Reply

Your email address will not be published.