BMTC Bus: ಬಿಎಂಟಿಸಿ ಬಸ್‌ಗೆ ಹತ್ತಿಕೊಂಡ ಬೆಂಕಿ, ಕ್ಷಣಮಾತ್ರದಲ್ಲಿ ಬಸ್ ಸುಟ್ಟು ಕರಕಲು! ಘಟನೆಗೆ ಕಾರಣವೇನು? ಇಲ್ಲಿದೆ ವಿವರ

BMTC Bus: ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ಎಂಜಿ ರಸ್ತೆಯ ಅನಿಲ್ ಕುಂಬ್ಳೆ ಸಿಗ್ನಲ್ನಲ್ಲಿ ಬಿಎಂಟಿಸಿ ಬಸ್ ಹೊತ್ತಿ ಉರಿದಿರುವ ಘಟನೆ ನಡೆದಿದೆ. ಬಸ್ನಲ್ಲಿ 30 ಜನರು ಪ್ರಯಾಣಿಸುತ್ತಿದ್ದು, ಚಾಲಕ ಮತ್ತು ನಿರ್ವಾಹಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರಿಗೆ ಯಾವುದೇ ಅನಾಹುತವಾಗಿಲ್ಲ.
ಹೌದು, ಎಂದಿನಂತೆ ಬೆಂಗಳೂರು ಮಹಾನಗರ ಸಾರಿಗೆ (BMTC bus ) ಬಸ್ ರಸ್ತೆಗೆ ಇಳಿದಿದ್ದು, ನಗರದ ಎಂಜಿ ರಸ್ತೆ ತಲುಪುವಷ್ಟರಲ್ಲಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಬಸ್ನಲ್ಲಿ 30 ಜನ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಮಾಹಿತಿ ಪ್ರಕಾರ, ಬಿಎಂಟಿಸಿ ಬಸ್ ರೋಸ್ ಗಾರ್ಡನ್ನಿಂದ ಶಿವಾಜಿನಗರಕ್ಕೆ (Shivajinagar) ಬರುತ್ತಿದ್ದಾಗ ಮಾರ್ಗ ಮಧ್ಯೆ ಎಂಜಿ ರಸ್ತೆಯ ಅನಿಲ್ ಕುಂಬ್ಳೆ ಸಿಗ್ನಲ್ನಲ್ಲಿ ಚಾಲಕ ಬಸ್ ಬಂದ್ ಮಾಡಿದ್ದರು. ಮತ್ತೆ ಸ್ಟಾರ್ಟ್ ಆಗಿಲ್ಲ. ಆದರೂ 2-3 ಸಲ ಸ್ಟಾರ್ಟ್ ಮಾಡಲು ಯತ್ನಿಸಿದ್ದಾರೆ. ಆದರೆ, ಸ್ಟಾರ್ಟ್ ಆಗಲಿಲ್ಲ. ಈ ವೇಳೆ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣದಲ್ಲೇ ಬೆಂಕಿಯ ಕೆನ್ನಾಲಿಗೆಗೆ ಬಸ್ ಸುಟ್ಟು ಭಸ್ಮವಾಗಿದೆ. ಸದ್ಯ ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಮತ್ತು ನಿರ್ವಾಹಕ ಪ್ರಯಾಣಿಕರನ್ನು ಕೆಳಗಿಳಿಸಿದ್ದು, ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.