Uttara Pradesh: ಶಾಲೆಯಲ್ಲಿ ಟೀಚರ್‌-ಪ್ರಿನ್ಸಿಪಾಲ್‌ ನಡುವೆ ರೋಮ್ಯಾನ್ಸ್‌; ವೀಡಿಯೋ ವೈರಲ್‌

Uttar Pradesh: ಶಿಕ್ಷಕರೆಂದರೆ ಮಕ್ಕಳಿಗೆ ಮಾರ್ಗದರ್ಶನ ನೀಡುವವರು. ಮಕ್ಕಳನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ಮಾಡುವ ಕೆಲಸದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಅಂತಿಪ್ಪ ಒಂದು ಶಾಲೆಯ ಪ್ರಿನ್ಸಿಪಾಲ್‌ ಆಟವೊಂದು ಬಯಲಾಗಿದೆ. ಅದೇನೆಂದರೆ ಈ ಪ್ರಿನ್ಸಿಪಾಲ್‌ ಶಾಲೆಯ ಟೀಚರನ್ನು ಪದೇ ಪದೇ ತನ್ನ ಕೊಠಡಿಗೆ ಕರೆಸಿ ಚಕ್ಕಂದವಾಡುತ್ತಿದ್ದಾನೆ. ಇದರ ವೀಡಿಯೋ ವೈರಲ್‌ ಆಗಿದೆ. ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಜೌನಪುರ್‌ ಕಾನ್ವೆಂಟ್‌ ಶಾಲೆಯಲ್ಲಿ.

 

School Holiday: ಮತ್ತೆ ಹೆಚ್ಚಿದ ಮಳೆ; ಜುಲೈ 8ಕ್ಕೆ ಮಂಗಳೂರಿನ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

ಈ ಘಟನೆ ಪ್ರತಿಷ್ಠಿತ ಕಾನ್ವೆಂಟ್‌ ಶಾಲೆಯಲ್ಲಿ ನಡೆದಿದು, ಪ್ರಿನ್ಸಿಪಾಲ್‌ ಹಾಗೂ ಟೀಚರ್‌ ನಡುವೆ ಸಲುಗೆ, ಆತ್ಮೀಯತೆ ಹಲವು ದಿನಗಳಿಂದ ಇತ್ತೆನ್ನಲಾಗಿದೆ. ಹಾಗಾಗಿ ಟೀಚರ್‌ ಪದೇ ಪದೇ ಟೀಚರ್‌ ಪ್ರಿನ್ಸಿಪಾಲ್‌ ಕೊಠಡಿಗೆ ಹೋಗುತ್ತಿದ್ದರೆನ್ನಲಾಗಿದೆ. ಈ ಶಾಲಾ ಶಿಕ್ಷಕಿಗೆ ಶಾಲೆಯ ಕೆಲ ಜವಾಬ್ದಾರಿಗಳನ್ನು ನೀಡಲಾಗಿದ್ದು, ಇದರ ಹಿಂದೆ ಕೂಡಾ ಪ್ರಿನ್ಸಿಪಾಲ್‌ ಕೈವಾಡ ಇತ್ತೆನ್ನಲಾಗಿದೆ.

ಬಹಳ ಗೌಪ್ಯವಾಗಿ ನಡೆಯುತ್ತಿದ್ದ ಇವರ ರೋಮ್ಯಾನ್ಸ್‌ ಕಡೆಗೆ ಅದೇನೋ ಆಗಿ ಹೊರಗಡೆ ಬಂದಿದೆ. ಇದು ಶಾಲೆಯ ಶಿಕ್ಷಕ- ಶಿಕ್ಷಕಿಯರಿಗೆ ಗೊತ್ತಾಗಿ, ಕೊನೆಗೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

ಇದೀಗ ಶಾಲಾ ಸಮಯದಲ್ಲಿ ನಡೆದ ಇವರಿಬ್ಬರ ರೊಮ್ಯಾನ್ಸ್‌ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದನ್ನು ಕಂಡ ವಿದ್ಯಾರ್ಥಿಗಳ ಪೋಷಕರಿಗೆ ತೀವ್ರ ಮುಜುಗರವಾಗಿದೆ.

ಇದೊಂದು 7 ನಿಮಿಷದ ವೀಡಿಯೋವಾಗಿದ್ದು, ಟೀಚರ್‌ , ಪ್ರಿನ್ಸಿಪಾಲ್‌ ಕೊಠಡಿಗೆ ಬರುತ್ತಿದ್ದಂತೆ ಪ್ರಿನ್ಸಿಪಾಲ್‌ ಆವೇಷಭರಿತರಾಗಿ ರೋಮ್ಯಾನ್ಸ್‌ ಮಾಡಿದ್ದಾರೆ. ಇದಕ್ಕೆ ಟೀಚರ್‌ ಕೂಡಾ ಭರಪೂರ ಸಾಥ್‌ ನೀಡಿದ್ದಾರೆ.

 

Leave A Reply

Your email address will not be published.