Darshan: ಮೆಸೇಜ್ ಮಾಡಿದ್ದಕ್ಕೆ ನಡೆದಿಲ್ಲ ರೇಣುಕಾ ಸ್ವಾಮಿ ಕೊಲೆ, ಹತ್ಯೆ ಹಿಂದಿದೆ ಅದೊಂದು ರೋಚಕ ಕಾರಣ – ಏನದು?

Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಡಿ(Renukaswamy murder Case) ಆರೋಪಿಯಾಗಿ ಜೈಲು ಸೇರಿರೋ ದರ್ಶನ್(Darshan) ಪಾಡಂತೂ ಹೇಳತೀರದಾಗಿದೆ. ಬೇಲ್ ಸಿಗದೆ ಜೈಲೇ ಗತಿ ಎನ್ನುವಂತಾಗಿದೆ. ಈ ಡಿ ಗ್ಯಾಂಗ್ ವಿರುದ್ಧ ಪೋಲಿಸರು ಈಗಾಗಲೇ ಸುಮಾರು 200ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಇದೆಲ್ಲವೂ ದರ್ಶನ್ ಗೆ ಉರುಳಾಗಿರೋದಂತೂ ಸತ್ಯ.

 

Baba Vanga Prediction: ಜಗತ್ತಿನ ನಾಶ ಯಾವಾಗ ಗೊತ್ತಾ? ಭಯಾನಕವಾದ ನಿಖರ ಭವಿಷ್ಯ ನುಡಿದ ಬಾಬಾ ವಂಗಾ !!

ಆದರೆ ಅಚ್ಚರಿ ಏನೆಂದ್ರೆ ಇದೀಗ ರೇಣುಕಾ ಸ್ವಾಮಿ ಹತ್ಯೆಯ ನಿಜವಾದ ಕಾರಣ ಬಯಲಾದಂತಿದೆ. ಹೌದು, ಇದುವರೆಗೂ ನಾವು ರೇಣುಕಾ ಸ್ವಾಮಿ ಪವಿತ್ರಾ ಗೌಡಗೆ(Pavitra Gouda) ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕೆ ಸಿಟ್ಟೆದ್ದು ದರ್ಶನ್ ಅವನನ್ನು ಕೊಂದರು ಎಂದುಕೊಂಡಿದ್ವಿ. ಆದರೀಗ ಯಾಕೋ ಇದರ ಅಸಲಿ ಕಾರಣವೇ ಬೇರೆ ಇದ್ದಂತಿದೆ. ಹಾಗಿದ್ರೆ ಏನಿರಬಹುದು ಅದು.

ಪವಿತ್ರ ಗೌಡ ಕೋಪ ಶಮನಕ್ಕೆ ಕೊಲೆ?
ಪವಿತ್ರ ಗೌಡಳಿಗೆ ಅಶ್ಲೀಲ ಮೆಸೇಜ್ ಕಳುಹಿದ್ದಕ್ಕೆ ರೇಣುಕಾ ಸ್ವಾಮಿ ಕೊಲೆಯಾಗಿದ್ದು ಒಂದೆಡೆ ಸತ್ಯ. ಆದರೆ ಇದು ಕೊಲೆ ಹಂತಕ್ಕೆ ಹೋಗುತ್ತಿರಲಿಲ್ಲ. ದರ್ಶನ್ ಬೈದು, ವಾರ್ನಿಂಗ್ ಕೊಟ್ಟು ಬುದ್ಧಿಹೇಳುತ್ತಿದ್ದರು. ಆದರೆ ಇಷ್ಟು ಮಾಡಿದ್ದರೆ ಪವಿತ್ರಗೌಡಳ ಕೋಪ ಶಮನವಾಗಬೇಕಲ್ಲಾ?… ಏನಪ್ಪಾ ಇದು ಹೊಸ ಕಥೆ ಹೇಳ್ತಿದ್ದಾರೆ ಅನ್ಕೊಳ್ತಿದ್ದೀರಾ.. ಹೌದು, ನಿಜಾಂಶ ಬೇರೆಯೇ ಇದೆ. ಅದೇನೆಂದರೆ ರೇಣುಕಾಸ್ವಾಮಿ ಕೊಲೆಗೂ ಮುನ್ನ ಪವಿತ್ರಾ ಗೌಡಗೆ(Pavitra Gowda) ದರ್ಶನ್ ಮೇಲೆ ಮುನಿಸಿತ್ತು ಎನ್ನಲಾಗ್ತಿದೆ. ದರ್ಶನ್-ಪವಿತ್ರಾ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತಂತೆ. ಇದೆಲ್ಲದರ ಪರಿಹಾರಕ್ಕೆ ಕೊಲೆಯೇ ನಡೆದಿದೆ.

ಮೇ 19ರಂದು ದರ್ಶನ್ (Darshan) ವಿಜಯಲಕ್ಷ್ಮಿ ವೆಡ್ಡಿಂಗ್ ಆ್ಯನಿವರ್ಸರಿ ಇದ್ದು, ದುಬೈನಲ್ಲಿ ದರ್ಶನ್-ವಿಜಯಲಕ್ಷ್ಮಿ ಮದುವೆ ವಾರ್ಷಿಕೋತ್ಸವ (wedding anniversary) ಆಚರಿಸಿಕೊಂಡಿದ್ದರು. ಇದರ ಫೋಟೋ, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ವಿಜಯಲಕ್ಷ್ಮೀ ಪೋಸ್ಟ್ ನೋಡಿ ಪವಿತ್ರಾ ಗೌಡ ಸಿಟ್ಟಾಗಿದ್ದರು. ಒಂದು ದಿನದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಟ್ವೀಟ್ ಮಾಡಿ, ದರ್ಶನ್ ಹೇಳಿದ್ದ ಕರ್ಮ ರಿಟರ್ನ್ಸ್ ಹೇಳಿಕೆಯನ್ನು ಪೋಸ್ಟ್ ಮಾಡಿದ್ದರು. ಅಲ್ಲದೆ ದರ್ಶನ್ ಜೊತೆ ಒಂದು ವಾರ ಮಾತು ಬಿಟ್ಟಿದ್ರಂತೆ ಪವಿತ್ರಾ ಗೌಡ. ಈ ಒಂದು ವಾರದ ಮಧ್ಯದಲ್ಲೇ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದಾನೆ. ಮಾತು ಬಿಟ್ಟಿದ್ದರಿಂದ ಈ ಪವಿತ್ರ ಮೇಡಂ ದರ್ಶನ್ಗೆ ರೇಣುಕಾಸ್ವಾಮಿ ವಿಚಾರ ತಿಳಿಸಿರಲಿಲ್ಲ. ತನ್ನ ಮನೆಯ ಕೆಲಸದ ಪವನ್‌ಗೆ ವಿಚಾರವನ್ನು ಪವಿತ್ರಾ ಗೌಡ ತಿಳಿಸಿದ್ದರು. ಪವನ್ ಮೂಲಕ ರೇಣುಕಾಸ್ವಾಮಿ ವಿಚಾರ ದರ್ಶನ್ ಗಮನಕ್ಕೆ ಬಂದಿದೆ.

ಇತ್ತ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಎಂದು ಯೋಚಿಸಿದ ದರ್ಶನ್ ಪವಿತ್ರಳ ಮುನಿಸು ಶಮನ ಮಾಡಿ, ಅವಳ ಜೊತೆ ರಾಜಿ ಆಗಲು ಈ ಎಲ್ಲಾ ಪ್ಲಾನ್ ಮಾಡಿದ್ದಾರೆ. ಬಳಿಕ ಪವಿತ್ರಾಗೌಡಗೆ ಕರೆ ಮಾಡಿ ನಿನಗೊಂದು ಸರ್ಪ್ರೈಸ್ ಇದೆ ಬಾ ಎಂದಿದ್ದ ದರ್ಶನ್, ಪವಿತ್ರಾ ಬಂದ ಬಳಿಕ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆಸಿದ್ದಾರೆ. ಬಳಿಕ ಗೆಳತಿಯ ಕೋಪ ಶಮನಕ್ಕೆ, ಮತ್ತೆ ಪ್ರೀತಿ ಗಿಟ್ಟಿಸಲು ಕೊಲೆಯನ್ನೇ ಮಾಡಿದ್ದಾನೆ ಎನ್ನಲಾಗಿದೆ.

Spain: ಸಮುದ್ರಲ್ಲಿ ಸುಸ್ಸು ಮಾಡಿದ್ರೆ 67,000 ರೂ ದಂಡ ಎಂದ ಸರ್ಕಾರ – ಉಚ್ಚೆ ಹುಯ್ದವನ ಪತ್ತೆ ಹೇಗ್ ಮಾಡ್ತೀರಪ್ಪಾ ಎಂದ ನೆಟ್ಟಿಗರು !!

Leave A Reply

Your email address will not be published.