MUDA Scam: ರಾಜ್ಯದಲ್ಲಿ ಸದ್ದು ಮಾಡ್ತರೋ ‘ಮುಡಾ ಹಗರಣ’ ಅಂದ್ರೆ ಏನು? ಸಿದ್ದರಾಮಯ್ಯ ಪತ್ನಿಗೂ ಇದಕ್ಕು ಏನು ಸಂಬಂಧ?
Muda Scam: ಕಳೆದು ಕೆಲವೊಂದಿಷ್ಟು ದಿನಗಳಿಂದ ರಾಜ್ಯದಲ್ಲಿ ಮುಡಾ ಹಗರಣ(Muda Scam) ಭಾರೀ ಸದ್ದು ಮಾಡುತ್ತಿದೆ. ಸಿದ್ದರಾಮಯ್ಯ ಸೇರಿ ಅನೇಕ ರಾಜಕೀಯ ಮಹಾಶಯರ ಹೇಸರು ಇದರಲ್ಲಿ ಕೇಳಿ ಬರುತ್ತಿದೆ. ಅಷ್ಟೇ ಏಕೆ ಸಿದ್ದರಾಮಯ್ಯ ಸಿಎಂ ಆದರೂ ಇಷ್ಟು ವರ್ಷದಲ್ಲಿ ಒಂದು ದಿನವೂ ಎಲ್ಲೂ ಕಾಣಿಸದ, ಯಾವುದಕ್ಕೂ ತಲೆ ಹಾಕದ ಸ್ವತಃ ಸಿದ್ದರಾಮಯ್ಯ ಪತ್ನಿ ಪಾರ್ವತಿ(Parvati Siddaramaiah) ಅವರ ಹೆಸರೂ ಇದರಲ್ಲಿ ತಳುಕುಹಾಕಿಕೊಂಡಿದೆ. ಹಾಗಿದ್ರೆ ಏನಿದು ಮೂಡಾ ಹಗರಣ? ಸಿದ್ದು ಪತ್ನಿ ಹೆಸರು ಇದರಲ್ಲಿ ಬಂದಿದ್ಯಾಕೆ? ಪ್ರತಿಪಕ್ಷಗಳು ರೊಚ್ಚಿಗೆದ್ದು ಪ್ರತಿಭಟಿಸುತ್ತಿರುವುದು ಏಕೆ?
ಹೌದು, ಮುಡಾ ಹಗರಣ ಚರ್ಚೆ ರಾಜ್ಯದಲ್ಲಿ ಜೋರಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(MUDA) ದಲ್ಲಿ ಸುಮಾರು 5000 ಕೋಟಿ ರೂಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಹೇಳಲಾಗಿದ್ದು ಈ ವಿಚಾರವಾಗಿ ಘಟಾನುಘಟಿಗಳ ಹೆಸರು ಕೇಳಿಬಂದಿದೆ. ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಗಿಬಿದ್ದ ಬೆನ್ನಲ್ಲೇ ಇದರ ತನಿಖೆಗಾಗಿ ಸರ್ಕಾರ ಸಮಿತಿಯನ್ನೂ ರಚಿಸಿ 15 ದಿನಗಳೊಳಗೆ ವರದಿ ನೀಡುವಂತೆ ಆದೇಶ ನೀಡಿದೆ. ಅಷ್ಟೇ ಅಲ್ಲ ಮುಡಾ ಹಗರಣ ವಿಚಾರವು ಇದೀಗ ಗೂಗಲ್ ನಲ್ಲಿ ಸಹ ಟ್ರೆಂಡ್ ಆಗಿದೆ. ಕರ್ನಾಟಕದಲ್ಲಿ ಇದು ಶೇಕಡಾ 100ರಷ್ಟು ಅಂತಾರ್ಜಾಲ ಬಳಕೆದಾರರು ಸರ್ಚ್ ಕೊಟ್ಟಿದ್ದರೆ, ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲೂ ಶೇಕಡಾ 30ರಷ್ಚು ನೆಟ್ಟಿಗರು ಈ ಬಗ್ಗೆ ಜಾಲಾಡಿದ್ದಾರೆ.
ಏನದು ಮುಡಾ ಹಗರಣ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ( Mysore Urban Development Authority- MUDA) ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. 50-50 ಅನುಪಾತದಡಿ ಸರಿಯಾಗಿ ಹಂಚಿಕೆ ಮಾಡದೆ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದ್ದು ಅಂದಾಜು 5 ಸಾವಿರ ಕೋಟಿಯಷ್ಟು ಭಾರೀ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ.
50-50 ಅನುಪಾತ ಅವ್ಯವಹಾರವೇನು?
ಯಾವುದೇ ಒಂದು ಬಡಾವಣೆ ನಿರ್ಮಾಣ ಮಾಡುವಾಗ ನಗರಾಭಿವೃದ್ಧಿ ಪ್ರಾಧಿಕಾರಿಗಳು ರೈತರನ್ನು ಒಪ್ಪಿಸಿ ಭೂಸ್ವಾಧೀನ ಮಾಡಬೇಕಾಗುತ್ತದೆ. ಹೀಗೆ ಮಾಡುವ ಸಂದರ್ಭದಲ್ಲಿ ರೈತರಿಗೆ ಪರಿಹಾರ ರೂಪದಲ್ಲಿ ಭೂಮಿಯ ಮೌಲ್ಯದಷ್ಟೇ ಹಣವನ್ನು ಅಥವಾ ಲೇಔಟ್ ಮಾಡುವಾಗ ಶೇ 50ರಷ್ಟು ನಿವೇಶನಗಳನ್ನು ನೀಡಬೇಕೆಂಬ ಒಪ್ಪಂದವಾಗುತ್ತದೆ. ಇವೆರಡೂ ಅಲ್ಲದಿದ್ದರೆ ವಶಪಡಿಸಿಕೊಂಡ ಭೂಮಿಯ ಮೌಲ್ಯದಷ್ಟೇ ಭೂಮಿಯನ್ನು ಇನ್ನೊಂದು ಕಡೆ ಗುರುತು ಮಾಡಿ ನೀಡುವುದು ಪ್ರಾಧಿಕಾರದ ಹೊಣೆಗಾರಿಕೆಯಾಗಿರುತ್ತದೆ.
ಆದರೆ ಮೈಸೂರಿನಲ್ಲಿ ನಿರ್ಮಿಸಲ್ಪಟ್ಟ ಬಡಾವಣೆಗಳಲ್ಲಿ ಆ ರೀತಿ ಯಾವುದೇ ಮಾನದಂಡವನ್ನು ಅನುಸರಿಸಲಾಗಿಲ್ಲ ಎಂಬುದು ಈಗ ಕೇಳಿ ಬಂದಿರುವ ಆರೋಪವಾಗಿದೆ. ಹಲವಾರು ಪ್ರಕಣದಲ್ಲಿ ಭೂ ಮಾಲೀಕರಿಗೆ ಪರಿಹಾರ ನೀಡಿಲ್ಲ. ಶೇಕಡಾ 50ರಷ್ಟು ನಿವೇಶನಗಳನ್ನೂ ನೀಡಿಲ್ಲ, ಬೇರೆಡೆ ಭೂಮಿಯನ್ನೂ ನಿಗದಿಪಡಿಸಿಲ್ಲ. ಅದಕ್ಕೆ ಬದಲಾಗಿ ಅರ್ಜಿಗಳಲ್ಲಿನ ಹಿರಿತನ ಪರಿಗಣಿಸದೆ ಅಕ್ರಮವಾಗಿ ಸೈಟ್ ಗಳನ್ನು ನೀಡಲಾಗಿದೆ ಎಂಬುದು ಕೇಳಿ ಬಂದಿರುವ ಆರೋಪವಾಗಿದೆ
ಸಿದ್ದು ಪತ್ನಿ-ಮಗನ ಹೆಸರು ಕೇಳಿಬಂದಿದ್ದೇಕೆ?
ಸಿದ್ದರಾಮಯ್ಯ ಅವರ ಆಪ್ತನಿಂದ ಮುಡಾಗೆ ಈ ಗತಿ ಬಂದಿದೆ. ಡಾ ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸುಮಾರು 5 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ದೂರಿದ್ದಾರೆ. 2019ರಲ್ಲಿ ಮುಡಾ ವಶದಲ್ಲಿದ್ದ 9000 ನಿವೇಶನಗಳಲ್ಲಿ 5000ಕ್ಕೂ ಅಧಿಕ ನಿವೇಶನಗಳನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಲಾಗಿದೆ ಎಂದಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿನಲ್ಲೂ ನಿವೇಶನ ವರ್ಗಾವಣೆ ಕಾರ್ಯ ನಡೆದಿದ್ದು ಯತೀಂದ್ರ ಸಿದ್ದರಾಮಯ್ಯ ಅವರೇ ಮುಂದೆ ನಿಂತು ಇದನ್ನು ಮಾಡಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರತಿಪಕ್ಷಗಳ ವಾದ ಏನು?
ಮೈಸೂರು ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. 50:50 ಅನುಪಾತದಲ್ಲಿ ನಿವೇಶನಗಳನ್ನು ಹಂಚಿ 3-4 ಸಾವಿರ ಕೋಟಿ ರೂ. ಲೂಟಿ ಮಾಡಲಾಗಿದೆ. 86 ಸಾವಿರ ಅರ್ಜಿಗಳನ್ನು ಸಲ್ಲಿಸಿದ ಬಡವರಿಗೆ ನಿವೇಶನ ನೀಡಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ನಿವೇಶನ ನೀಡಿದ್ದಾರೆ. 15 ನಿವೇಶನ ನೀಡಬೇಕಾದಲ್ಲಿ 60 ನಿವೇಶನ ನೀಡಿದ್ದಾರೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ನಿವೇಶನ ದೋಚಿದ್ದಾರೆ. ಕಾಂಗ್ರೆಸ್‌ನದ್ದು ಲೂಟಿ ಮಾಡಲ್. ಕಾಂಗ್ರೆಸ್ ಸರ್ಕಾರ ಕೂಡಲೇ ಈ ನಿವೇಶನ ಯೋಜನೆಯನ್ನು ರದ್ದು ಮಾಡಬೇಕು. ತನಿಖೆಯನ್ನು ಸಿಬಿಐಗೆ ವಹಿಸಿದರೆ ಸತ್ಯ ಹೊರಬರಲಿದೆ. ಈ ವಿಚಾರವನ್ನು ಸದನದಲ್ಲಿ ಮಾತನಾಡಿ ಸತ್ಯ ಬಯಲಿಗೆ ತರುತ್ತೇವೆ ಎಂದು ಪ್ರತಿ ಪಕ್ಷದ ನಾಯಕ ಆರ್ ಅಶೋಕ್ ಆರೋಪ ಮಾಡುತ್ತಾರೆ.
ಸಿಎಂ ಆಪ್ತರಿಗೆ ಉರುಳು:
ಸಿದ್ದರಾಮಯ್ಯ ಸರ್ಕಾರಕ್ಕೆ ಮುಡಾ ಹಗರಣ(Muda scam) ತಲೆನೋವಾಗಿದೆ. ಬಗೆದಷ್ಟು ಹರಡಿಕೊಳ್ತಾನೆ ಇದೆ ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ. ಸಿಎಂ ಹೊರತುಪಡಿಸಿ ಹಿಂಬಾಲಕರ ಎದೆಯಲ್ಲೂ ಇದೀಗ ಢವಢವ ಶುರುವಾಗಿದೆ. ಇಲ್ಲಿವರೆಗೆ ಕೇವಲ ಸಿಎಂ(Siddaramaiah) ಮತ್ತವರ ಕುಟುಂಬದ ಹೆಸರು ಮಾತ್ರ ಪ್ರಸ್ತಾಪವಾಗಿತ್ತು. ಇದೀಗ ಸಿದ್ದರಾಮಯ್ಯ ಆಪ್ತರ ಹೆಸರೂ ಹಗರಣದಲ್ಲಿ ತಳುಕು ಹಾಕಿಕೊಂಡಿದೆ. ಸಚಿವ ಭೈರತಿ ಸುರೇಶ್, ಮಾಜಿ ಸಚಿವ ಎಸ್.ಟಿ ಸೋಮಶೇಖರ್ , ಮುಡಾ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್(HV Rajiv) ಹೆಸರು ಹಗರಣದಲ್ಲಿ ತಳುಕು ಹಾಕಿಕೊಂಡಿದೆ. 2021ರಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್, ಆ ಸಮಯದಲ್ಲಿ ಮಾರ್ಪಾಡಾಗಿರುವ 50-50 ಅನುಪಾತ. ಬಿಜೆಪಿ(BJP) ಸರ್ಕಾರದಲ್ಲಿ ಮುಡಾ ಅಧ್ಯಕ್ಷ ಆಗಿದ್ದ ಎಚ್.ವಿ.ರಾಜೀವ್, ರಾಜೀವ್ ಕಾಲದಲ್ಲೂ ಹಲವು ಪ್ರಕರಣದಲ್ಲಿ 50-50 ಅನುಪಾತ ಅನುಸರಣೆ ಆಗಿದೆಯಂತೆ. ಈಗ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿರುವ ರಾಜೀವ್. ಸಿಎಂ ಆಪ್ತ, ಸಚಿವ ಭೈರತಿ ಸುರೇಶ್ ಹಾಲಿ ನಗರಾಭಿವೃದ್ಧಿ ಸಚಿವರಾಗಿದ್ದು, 2024ರ ಜೂನ್‌ವರೆಗೂ 50-50 ಅನುಪಾತದಲ್ಲಿ ಹಲವರಿಗೆ ಸೈಟ್ ಹಂಚಿಕೆ ಮಾಡಲಾಗಿದೆ. ಇದೇ ಪ್ರಕರಣದಲ್ಲಿ ಸಿಎಂ ಪರಮಾಪ್ತ ಹಿನಕಲ್ ಪಾಪಣ್ಣ ಹೆಸರು ತಳುಕು ಹಾಕಿಕೊಂಡಿದೆ.