KSRTC: ಕೆಎಸ್ಆರ್ಟಿಸಿ ಯಿಂದ ಕಂಡಕ್ಟರ್ ಹಾಗೂ ಪ್ರಯಾಣಿಕರಿಗೆ ಗುಡ್ ನ್ಯೂಸ್!
KSRTC: ಲಕ್ಷಾಂತರ ಜನ ಪ್ರತಿದಿನ ಕೆಎಸ್ಆರ್ಟಿಸಿ ಬಸ್ಗಳಲ್ಲಿ ವಿವಿಧ ಸ್ಥಳಗಳಿಗೆ ಪ್ರಯಾಣ ಮಾಡುತ್ತಾರೆ. ಆದ್ರೆ ಜನರು ಇಂದು ಆನ್ಲೈನ್ ಪೇಮೆಂಟ್ ಅನ್ನು ಜನ ಹೆಚ್ಚಾಗಿ ಬಳಕೆ ಮಾಡುವ ಕಾರಣ ಜನರು ಕೈಯಲ್ಲಿ ಚಿಲ್ಲರೆ ದುಡ್ಡು ಇಟ್ಟುಕೊಳ್ಳುವುದಿಲ್ಲ. ಈ ಕಾರಣದಿಂದಲೇ ಈಗಾಗ್ಲೇ ಪ್ರಯಾಣಿಕರು ಹಾಗೂ ಕಂಡಕ್ಟರ್ ನಡುವೆ ಚಿಲ್ಲರೆಗಾಗಿ ಗಲಾಟೆ ನಡೆಯುವ ವಿಚಾರ ನೀವು ಕೇಳಿರಬಹುದು ಅಥವಾ ನೋಡಿರಬಹುದು. ಆದ್ರೆ ಇನ್ಮುಂದೆ ಈ ಸಂಭವ ತಪ್ಪುತ್ತೆ. ಇನ್ಮುಂದೆ ಪ್ರಯಾಣಿಕರು ಹಣ ಪಾವತಿಸಿಯೇ ಟಿಕೆಟ್ ಪಡೆಯಬೇಕು ಎಂದಿಲ್ಲ. ಅದಕ್ಕಾಗಿ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಗೂಗಲ್ ಪೇ, ಫೋನ್ ಪೇ ಮೂಲಕ ಟಿಕೆಟ್ ಹಣ ಪಾವತಿಸುವ ವ್ಯವಸ್ಥೆಯನ್ನು ಕೆಎಸ್ಆರ್ಟಿಸಿ ಜಾರಿಗೆ ತರಲು ನಿರ್ಧರಿಸಿದೆ.
ಹೌದು, ಪ್ರಯಾಣಿಕರು ಮತ್ತು ಕಂಡಕ್ಟರ್ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕೆಎಸ್ಆರ್ಟಿಸಿ (KSRTC) ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಾವತಿಸುವ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ವ್ಯವಸ್ಥೆ ಜಾರಿಗೆಯಾದರೆ ಕ್ಯಾಶ್ ಬದಲು ಪ್ರಯಾಣಿಕರು ಸಲೀಸಾಗಿ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಾವತಿಸಬಹುದು.
ಇದಕ್ಕಾಗಿ ಕೆಎಸ್ಆರ್ಟಿಸಿ ಖಾಸಗಿ ಕಂಪನಿಯೊಂದರಿಂದ 10245 ಸಾವಿರ ಇಟಿಎಂ ಟಿಕೆಟ್ ಮಷೀನ್ಗಳನ್ನು ಖರೀದಿಸಲು ಮುಂದಾಗಿದೆ. ಒಂದು ಮಷೀನ್ಗೆ ಪ್ರತಿ ತಿಂಗಳು 645 ರೂಪಾಯಿ ಬಾಡಿಗೆ ಆಧಾರದ ಮೇಲೆ ಖರೀದಿಸಲಾಗುತ್ತದೆ. ಈ ಮಷಿನ್ಗಳಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಸಿ ಪ್ರಯಾಣಿಕರು ಟಿಕೆಟ್ ಪಡೆಯಬಹುದಾಗಿದೆ. ಇದರಿಂದ ಕಂಡಕ್ಟರ್ಗಳಿಗೂ ಅನುಕೂಲವಾಗಲಿದೆ. ತಮ್ಮ ಬಳಿ ಚಿಲ್ಲರೆ ಇಲ್ಲದೇ ಇದ್ದಾಗ ಪ್ರಯಾಣಿಕರೊಂದಿಗೆ ಜಗಳವಾಡುವುದು ತಪ್ಪುತ್ತದೆ.
Love Jihad: ಲವ್ಜಿಹಾದ್ ಅಭಿಯಾನ; ಶ್ರೀರಾಮಸೇನೆಗೆ ಕೊಲೆ ಬೆದರಿಕೆ, ಫೇಸ್ಬುಕ್ ಖಾತೆ ಬಂದ್