Job Mela: ಉದ್ಯೋಗ ಪಡೆಯಲು ಸುವರ್ಣ ಅವಕಾಶ ನಿಮಗಾಗಿ! ಜುಲೈ 9ರಂದು ಇಲ್ಲಿ ಭೇಟಿ ನೀಡಿ!

Job Mela: ನಿರುದ್ಯೋಗಿ ಯುವಕ ಯುವತಿಯರು ಉದ್ಯೋಗ ಪಡೆಯಲು ಸುವರ್ಣ ಅವಕಾಶ ಒಂದನ್ನು ಕಲ್ಪಿಸಲಾಗಿದೆ. ಹೌದು, ಹುಬ್ಬಳ್ಳಿಯಲ್ಲಿ ವಿನಿಮಯ ಕಛೇರಿ ನಿರುದ್ಯೋಗಿ ಯುವಕರಿಗೆ ಸಿಹಿ ಸುದ್ದಿ ಕೊಟ್ಟಿದೆ. ಸದ್ಯ ನವನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಉದ್ಯೋಗ ಮೇಳವನ್ನು (Job Mela) ಜುಲೈ 9 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅದರಗುಂಚಿಯ ಸಿ.ಆಯ್.ಸಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.

 

Chanakya Neeti: ಹೆಂಡತಿಯು ದಿನಕ್ಕೆರಡು ಸಲ ಗಂಡ ಆ ಭಾಗವನ್ನು ಮುಟ್ಟಬೇಕಂತೆ – ಪ್ರೀತಿಯೂಂದಿಗೆ ಸುಖವೂ ಹೆಚ್ಚುತ್ತಂತೆ !!

ಈ ಉದ್ಯೋಗ ಮೇಳದಲ್ಲಿ 20 ಕ್ಕೂ ಹೆಚ್ಚು ಖಾಸಗಿ ವಲಯದ ಉದ್ಯೋಗದಾತರುಗಳು ಭಾಗವಹಿಸಿ, ಸಂಸ್ಥೆಗಳಲ್ಲಿ ವಿವಿಧ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ. ಅಭ್ಯರ್ಥಿಗಳು 18 ರಿಂದ 35 ವಯೋಮಿತಿಯವಾರಗಿದ್ದು, ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಹೊಂದಿರುವ ಆಸಕ್ತರು ಸಂದರ್ಶನಕ್ಕೆ ಹಾಜರಾಗಬಹುದು. ಮುಖ್ಯವಾಗಿ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ಮತ್ತು ಕನಿಷ್ಟ 5 ಪ್ರತಿಗಳ ಬಯೋಡಾಟಾ ಅಥವಾ ರೆಸ್ಯೂಮ್‌ಗಳ ಜೊತೆಗೆ ಹಾಜರಾಗಬೇಕು.

ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು https://shorturl.at/qXip9 ವೆಬ್ ಸೈಟ್ ಮುಖಾಂತರ ನೋಂದಣಿ ಮಾಡಿಕೊಂಡು ಉದ್ಯೋಗ ಮೇಳದಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0836-2225288, 9535360259, 8453208555 , 9806905751 ಕಚೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

Jeevana Sangama: ಇನ್ನೂ ಮದುವೆಯಾಗದ ಹುಡುಗರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ !!

Leave A Reply

Your email address will not be published.