Udupi: ಬಸ್‌ನಲ್ಲೇ ಪ್ರಿಯತಮೆ ಜೊತೆ ಜಗಳ; ರಸ್ತೆಯಲ್ಲಿ ಬಸ್‌ ನಿಲ್ಲಿಸಿ ಹೋದ ಚಾಲಕ

Share the Article

Udupi: ಖಾಸಗಿ ಬಸ್‌ ಚಾಲಕ ಹಾಗೂ ಆತನ ಪ್ರಿಯತಮೆಯ ಮಧ್ಯೆ ಬಸ್‌ನಲ್ಲೇ ತೀವ್ರ ವಾಗ್ವಾದ ಉಂಟಾಗಿದ್ದು, ಸಿಟ್ಟುಗೊಂಡ ಚಾಲಕ ಬಸ್‌ ಅನ್ನು ನಿಲ್ಲಿಸಿ  ಪ್ರಯಾಣಿಕರನ್ನು ಬಿಟ್ಟು ಹೋದ ಘಟನೆಯೊಂದು ನಡೆದಿದೆ.

ಉಡುಪಿಯಿಂದ ಸಂತೆಕಟ್ಟೆ ಭಾಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ನಿಟ್ಟೂರು ಬಳಿ ಬಸ್‌ ಚಾಲಕನ ಪ್ರೇಯಸಿ ಬಸ್‌ ಹತ್ತಿದ್ದು, ಅಲ್ಲಿಂದಲೇ ಇವರಿಬ್ಬರ ವಾಗ್ವಾದ ಶುರು ಆಗಿದೆ. ನಿರ್ವಾಹಕ ಸಮಾಧಾನ ಪಡಿಸಲು ಪ್ರಯತ್ನ ಮಾಡಿದರೂ ಅದು ಆಗಿಲ್ಲ. ಕೊನೆಗೆ ಪ್ರೇಯಸಿಯ ಕಿರಿಕಿರಿ ಹೆಚ್ಚಾಗಿದ್ದು, ಸಿಟ್ಟುಗೊಂಡ ಚಾಲಕ ಆಶೀರ್ವಾದ್‌ ಚಿತ್ರಮಂದಿರದ ಸ್ವಲ್ಪ ಮುಂದಕ್ಕೆ ಬಸ್‌ ನಿಲ್ಲಿಸಿ ಓಡಿ ಹೋಗಿದ್ದಾನೆ. ಪ್ರೇಯಸಿ ತನ್ನ ಪಾಡಿಗೆ ತಾನು ಹೋಗಿದ್ದಾಳೆ.

ಪ್ರಯಾಣಿಕರು ಏನಾಯ್ತು ಎನ್ನುವಷ್ಟರಲ್ಲೇ ನೋಡಿಯೇ ಬಾಕಿಯಾಗಿದ್ದಾರೆ. ಈ ಘಟನೆ ಸಂಜೆ ಸಮಯದಲ್ಲಿ ನಡೆದಿದ್ದು, ನಂತರ ಬಸ್‌ ನಿರ್ವಾಹಕನೇ ಬಸ್‌ ಚಲಾಯಿಸಿ ಕೊಂಡು ಹೋಗಿದ್ದಾನೆ.

ಇತ್ತ ಪ್ರಯಾಣಿಕರು ಚಾಲಕನ ನಿರ್ಲಕ್ಷ್ಯತನಕ್ಕೆ ಆಕ್ರೋಶಗೊಂಡಿದ್ದಾರೆ.

Madikeri: Urgent make an accident – ʼತುರ್ತಾಗಿ ಒಂದು ಅಪಘಾತ ಮಾಡಿʼ ಎಂಬ ಸೂಚನಾಫಲಕ ನೋಡಿ ಜನ ನಕ್ಕಿದ್ದೇ ನಕ್ಕಿದ್ದು!

 

Leave A Reply