T20 World Cup 2024: ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಕ್ಕೆ ಮೋದಿಯಿಂದ ಮರೆಯಲಾರದ ಉಡುಗೊರೆ!
T20 World Cup 2024: ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 176 ರನ್ ಗಳಿಸಿದ್ದು , ಸೌತ್ ಆಫ್ರಿಕಾ ತಂಡವು 169 ರನ್ಗಳಿಸಲಷ್ಟೇ ಗಳಿಸಿದರು. ಈ ಮೂಲಕ ಭಾರತ ತಂಡವು 7 ರನ್ಗಳಿಂದ ಜಯ ಸಾಧಿಸಿ ಟಿ20 ವಿಶ್ವಕಪ್ ಅನ್ನು ಗೆದ್ದುಕೊಂಡಿತ್ತು. ಸದ್ಯ ಟಿ20 ವಿಶ್ವಕಪ್ (T20 World Cup) ಗೆದ್ದ ಟೀಂ ಇಂಡಿಯಾ ಇಂದು ವಿಶ್ವಕಪ್ ಟ್ರೋಫಿಯೊಂದಿಗೆ (Team India) ತಮ್ಮ ತಾಯ್ನಾಡಿಗೆ ಮರಳಿದ್ದಾರೆ.
Renukaswamy Case: ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಜು.18 ರವರೆಗೆ ನ್ಯಾಯಾಂಗ ಬಂಧನ
ತಾಯ್ನಾಡಿಗೆ ಮರಳಿರುವ ಇಂಡಿಯನ್ ಟೀಮ್ ಗೋಲ್ಡನ್ ಟ್ರೋಫಿಯೊಂದಿಗೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ರೋಹಿತ್ (Rohit Sharma) ಮತ್ತು ತಂಡ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಮೋದಿ ಅವರಿಂದ ಮರೆಯಲಾರದ ನೆನಪಿನ ಉಡುಗೊರೆ ಪಡೆದುಕೊಂಡಿದ್ದಾರೆ.
ಹೌದು, ಟೀಮ್ ಇಂಡಿಯಾ ಆಟಗಾರರು ನವದೆಹಲಿಯ ಲೋಕ್ ಕಲ್ಯಾಣ್ ಮಾರ್ಗ್‌ನಲ್ಲಿರುವ ಪ್ರಧಾನಿ ನಿವಾಸಕ್ಕೆ ಆಗಮಿಸಿದ್ದು, ಭಾರತ ಕ್ರಿಕೆಟ್ ತಂಡದ ಜೊತೆ ಮಾತನಾಡುವಾಗ ಪ್ರಧಾನಿ ಮೋದಿ ತುಂಬಾ ನಗು ನಗುತ್ತಾ ಖುಷಿಯಿಂದ ಕಂಡುಬಂದಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ವಿಶ್ವಕಪ್ ಟ್ರೋಫಿಯನ್ನು ಆಟಗಾರರಿಂದ ತಮ್ಮ ಕೈಗೆ ತೆಗೆದುಕೊಂಡು ಸಂಭ್ರಮಿಸಿದರು. ಆಟಗಾರರು ಪ್ರಧಾನಿ ಮೋದಿ ಅವರ ಜೊತೆ ತಮ್ಮ ಐತಿಹಾಸಿಕ ಅನುಭವವನ್ನು ಹಂಚಿಕೊಂಡರು. ಈ ವೇಳೆ ಟೀಮ್ ಇಂಡಿಯಾ ಆಟಗಾರರ ಜೊತೆ ಕುಶಲೋಪರಿ ನಡೆಸಿದ ಪ್ರಧಾನಿ ಮೋದಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ಗಳು ಮರೆಯಲಾರದ ಉಡುಗೊರೆ ಎಂದು ಟೀಮ್ ಇಂಡಿಯಾ ಖುಷಿ ಪಟ್ಟಿದೆ. ಅಲ್ಲದೇ ಈ ಫೋಟೋಗಳು ಇದೀಗ ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
Bus Travel: ಬಸ್ ಕಿಟಕಿ ಹೊರಗೆ ಕೈ ಹಾಕಿದ್ರೆ ಏನಾಗುತ್ತೆ ಇಲ್ನೋಡಿ! ಭಯಾನಕ ವಿಡಿಯೋ ವೈರಲ್!