School Holiday: ಎಡೆಬಿಡದೆ ಸುರಿಯುತ್ತಿರುವ ಮಳೆ; ನಾಳೆ ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ ಘೋಷಣೆ

Share the Article

Udupi: ಜಿಲ್ಲೆಯಲ್ಲಿ ಭಾರೀ ಮಳೆ ಉಂಟಾಗಿದ್ದು, ನಿಲ್ಲುವ ಲಕ್ಷಣ ಕಾಣುವುದಿಲ್ಲ. ಮುಖ್ಯವಾಗಿ ಕುಂದಾಪುರ, ಬೈಂದೂರು, ಬ್ರಹ್ಮಾವರ ಭಾಗದಲ್ಲಿ ತಗ್ಗು ಪ್ರದೇಶಗಳು ನೆರೆ ನೀರಿನಿಂದ ತುಂಬಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕುಂದಾಪುರ, ಬೈಂದೂರು, ಬ್ರಹ್ಮಾವರ ವಲಯದ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿಗೆ ಜುಲೈ 5 (ಶುಕ್ರವಾರ) (ನಾಳೆ) ರಜೆ ಘೋಷಣೆ ಮಾಡಲಾಗಿದೆ.

Udupi Pejawar Seer: ಅಯೋಧ್ಯೆ ಶ್ರೀರಾಮಮಂದಿರ ಸೋರುತ್ತಿದೆಯೇ? -ಪೇಜಾವರ ಶ್ರೀ ನೀಡಿದ್ರು ಕಾರಣ

ರಜೆ ಘೋಷಣೆ ಮಾಡಿ ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಅವರು ಆದೇಶ ಹೊರಡಿಸಿರುವ ಕುರಿತು ವರದಿಯಾಗಿದೆ.

ಜೊತೆಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.

Mangaluru: ಉಳಾಯಿಬೆಟ್ಟು ದರೋಡೆ ಪ್ರಕರಣ; ಕೇರಳದ ತಂಡ ಸೇರಿ ಹತ್ತು ಮಂದಿ ಬಂಧನ

Leave A Reply