Mangaluru: ಉಳಾಯಿಬೆಟ್ಟು ದರೋಡೆ ಪ್ರಕರಣ; ಕೇರಳದ ತಂಡ ಸೇರಿ ಹತ್ತು ಮಂದಿ ಬಂಧನ

Share the Article

Mangaluru: ಉಳಾಯಿಬೆಟ್ಟು ಸಮೀಪದ ಪೆರ್ಮಂಕಿಯ ಉದ್ಯಮಿ, ಕಾಂಗ್ರೆಸ್‌ ಮುಖಂಡ ಪದ್ಮನಾಭ ಕೋಟ್ಯಾನ್‌ ಮನೆಯಲ್ಲಿ ಜೂ.21 ರಂದು ದರೋಡೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ 10 ಮಂದಿ ಆರೋಪಿಗಳನ್ನು ಬಂಧನ ಮಾಡಲಾಗಿರುವ ಕುರಿತು ಪೊಲೀಸ್‌ ಆಯುಕ್ತ ಅನುಪಮನ್‌ ಅಗರ್‌ವಾಲ್‌ ಹೇಳಿದ್ದಾರೆ.

ಮಂಗಳೂರು ಪೊಲೀಸರು ಕೇರಳದ ನಟೋರಿಯಸ್‌ ದರೋಡೆಕೋರರು ಸೇರಿ ಹತ್ತು ಮಂದಿಯ ಬಂಧನ ಮಾಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು.‌

ಜೂ.21 ರ ರಾತ್ರಿ 10 ಕ್ಕೂ ಅಧಿಕ ಮಂದಿ ಆರೋಪಿಗಳು ಪದ್ಮನಾಭ ಕೋಟ್ಯಾನ್‌ ಮನೆಗೆ ನುಗ್ಗಿದ್ದಾರೆ. ನಂತರ ಪತ್ನಿ ಮತ್ತು ಮಗನನ್ನು ಕಟ್ಟಿ ಚಿನ್ನಾಭರಣ ಸಹಿತ 9 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

SCDCC Bank Recruitment: ದಕ್ಷಿಣ ಕನ್ನಡ ಸಹಕಾರಿ ಬ್ಯಾಂಕ್‌ನಲ್ಲಿ 123 ಹುದ್ದೆಗಳ ನೇಮಕ; ಈ ಕೂಡಲೇ ಅರ್ಜಿ ಸಲ್ಲಿಸಿ

ಮೊದಮೊದಲಿಗೆ ಬಂಟ್ವಾಳ ಮೂಲಕ ಕಾರು ತೆರಳಿರುವುದು ಎಂದು ತಿಳಿದು ಬಂತು. ನಂತರ ತನಿಖೆ ಮುಂದುವರಿದ ಹಾಗೇ, ತಲಪಾಡಿ ಮೂಲಕ ಆರೋಪಿಗಳು ಪರಾರಿಯಾಗಿರುವುದಾಗಿ ತಿಳಿದು ಬಂತು.

ನೀರುಮಾರ್ಗ ನಿವಾಸಿಗಳಾದ ವಸಂತ್‌ ಕುಮಾರ್‌ (42) ರಮೇಶ ಪೂಜಾರಿ (42), ರೇಮಂಡ್‌ ಡಿಸೋಜ (47), ಪೈವಳಿಕೆ ಕುರುಡಪದವು ನಿವಾಸಿ ಬಾಲಕೃಷ್ಣ ಶೆಟ್ಟಿ (48), ತೃಶೂರು ಜಿಲ್ಲೆಯ ಜಾಕಿರ್‌ ಯಾನೆ ಶಾಕೀರ್‌ (56), ವಿನೋಜ್‌ (38), ಸಜೀಶ್‌ (32), ಸತೀಶ್‌ ಬಾಬು (44), ಶಿಜೋ ದೇವಸ್ಸಿ (38), ತಿರುವನಂತಪುರ ಜಿಲ್ಲೆಯ ಬಿಜು (41) ಬಂಧಿತ ಆರೋಪಿಗಳು.

ಪೊಲೀಸರ ಈ ಕಳ್ಳತನದ ಜಾಡು ಹತ್ತಲು ಹೋದಾಗ ಕುತೂಹಲಕಾರಿ ಅಂಶಗಳು ಹೊರಬಿದ್ದಿದೆ. ಪದ್ಮನಾಭ್‌ ಕೋಟ್ಯಾನ್‌ ಅವರ ಲಾರಿ ಚಾಲಕನಾಗಿದ್ದ ನೀರುಮಾರ್ಗ ನಿವಾಸಿ ವಸಂತ ಪೂಜಾರಿ ಬಗ್ಗೆ ಸಂಶಯ ಉಂಟಾಗಿತ್ತು. ಕೋಟ್ಯಾನ್‌ ಮನೆಯಲ್ಲಿ ಕೋಟಿಗಟ್ಟಲೆ ಹಣ ಇದೆ ಎಂದು ಸ್ಥಳೀಯ ರೇಮಂಡ್‌ ಎಂಬುವವರ ಬಳಿ ವಸಂತ್‌ ಹೇಳಿದ್ದ. ಈ ಮೂಲಕ ಲೂಟಿ ಮಾಡಲು ಸ್ಕೆಚ್‌ ಹಾಕಿದ್ದ ರೇಮಂಡ್‌ ಸಿಕ್ಕಿಬಿದ್ದ. ಅನಂತರ ಲೂಟಿ ಮಾಡಲೆಂದು ಕೇರಳ ಮೂಲದ ಕೆಲವು ಆರೋಪಿಗಳನ್ನು ಸಂಪರ್ಕ ಮಾಡಿದ್ದ. ನಂತರ ಮನೆ ಸ್ಕೆಚ್‌ ನ್ನು ವಸಂತ ನೀಡಿದ್ದ. ಮನೆಯಲ್ಲಿ ಯಾರ್ಯಾರೆಲ್ಲ ಇದ್ದಾರೆ ಎನ್ನುವ ಮಾಹಿತಿಯನ್ನು ಕೂಡಾ ಆರೋಪಿಗಳಿಗೆ ನೀಡಿದ್ದ.

ರೇಮಂಡ್‌ ಡಿಜೋಜ ಮನೆಯಲ್ಲಿ 100 ಕೋಟಿ ಇದೆಯೆಂಬ ಮಾಹಿತಿ ನೀಡಿದ್ದ. ಇದಕ್ಕೆಂದೇ ಆರೋಪಿಗಳು ಕಳ್ಳತನ ಮಾಡುವ ಸಂದರ್ಭದಲ್ಲಿ 15ರಷ್ಟು ಚೀಲ ರೆಡಿ ಮಾಡಿ ತಗೊಂಡು ಬಂದಿದ್ದರು. ತನಿಖೆಯ ಹಾದಿ ತಪ್ಪಿಸುವ ಉದ್ದೇಶದಿಂದ ಜಾಕೀರ್‌ ಹುಸೇನ್‌ ಹಿಂದಿ ಭಾಷೆ ಮಾತನಾಡುತ್ತಾ ಪದ್ಮನಾಭ ಕೋಟ್ಯಾನ್‌ ಮೇಲೆ ಹಲ್ಲೆ ಮಾಡಿದ್ದ. ನಂತರ ಉಳಿದವರು ಮನೆಯಲ್ಲಿ ಇದ್ದವರನ್ನು ಬೆದರಿಸಿ ಹಣ ಎಲ್ಲಿದೆ ಎಂದು ಹುಡುಕಾಟ ನಡೆಸಿದ್ದಾರೆ.

ಆರೋಪಿಗಳಿಂದ 9 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ನಾಲ್ಕು ಜನರನ್ನು ನಿನ್ನೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಇಂದು ಆರು ಮಂದಿಯ ಅರೆಸ್ಟ್‌ ಆಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಮಿಷನರ್ ಅನುಪಮ್‌ ಅಗರ್ವಾಲ್‌ ಹೇಳಿದ್ದಾರೆ.

Udupi Pejawar Seer: ಅಯೋಧ್ಯೆ ಶ್ರೀರಾಮಮಂದಿರ ಸೋರುತ್ತಿದೆಯೇ? -ಪೇಜಾವರ ಶ್ರೀ ನೀಡಿದ್ರು ಕಾರಣ

Leave A Reply