Uttar Pradesh: ಹತ್ರಾಸ್ ದುರಂತ- ಕಾಲ್ತುಳಿತಕ್ಕೆ 116ಕ್ಕೂ ಅಧಿಕ ಸಾವು, ಈ ಸತ್ಸಂಗ ಯಾತ್ರೆ ಅಂದ್ರೆ ಏನು? ಇದನ್ನು ನಡೆಸೋ ಭೋಲೆ ಬಾಬಾ ಯಾರು ?!

Uttar Pradesh: ಉತ್ತರ ಪ್ರದೇಶದ ಹತ್ರಾಸ್ (Hathras Tragedy) ಜಿಲ್ಲೆಯಲ್ಲಿ ನಡೆದ ಸತ್ಸಂಗದ(Satsanga) ದುರಂತ ಇಡೀ ದೇಶವನ್ನನೇ ಬೆಚ್ಚಿಬೀಳಿಸಿದೆ. ಸಾಗರೋಪಾದಿಯಲ್ಲಿ ನೆರೆದಿದ್ದ ಜನರ ನಡುವೆ ಬರೀ ಕಾಲ್ತುಳಿತಕ್ಕೆ 100ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಹಾಗಿದ್ರೆ ಸತ್ಸಂಗ ಯಾತ್ರೆ ಅಂದ್ರೆ ಏನು? ಇದನ್ನು ನಡೆಸೋ ಬಾಬಾನ ಹಿನ್ನೆಲೆ ಏನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

Kolara: ರಾಜ್ಯದಲ್ಲೊಂದು ಶಾಕಿಂಗ್ ಪ್ರಕರಣ – ಕಾಲೇಜಲ್ಲೇ ಮಗುವಿಗೆ ಜನ್ಮ ನೀಡಿದ 1st ಪಿಯು ವಿದ್ಯಾರ್ಥಿನಿ !!

ಸತ್ಸಂಗ ಅಂದ್ರೆ ಏನು?
ಸತ್ಸಂಗ ಎಂಬುದು ಬೋಲೆ ಬಾಬ(Bhole Baba) ಅವರು ನೀಡುವ ಧರ್ಮೋಪದೇಶ ಕಾರ್ಯಕ್ರಮ. ಆರಂಭದಲ್ಲಿ ಈ ಸತ್ಸಂಗದಲ್ಲಿ ಕೇವಲ 50 ಮಂದಿಗೆ ಮಾತ್ರ ಅನುಮತಿ ಕೋರಿದ್ದರು. ಆದರೆ, ಬರ ಬರುತ್ತಾ ಈ ಬಾಬನ ಸತ್ಸಂಗಕ್ಕೆ 50 ಸಾವಿರಕ್ಕೂ ಹೆಚ್ಚು ಜನ ಸೇರುತ್ತಿದ್ದರು.

ಯಾರು ಈ ಭೋಲೆ ಬಾಬ?
ಬಾಬಾ ಮೂಲತಃ ಕಾಸ್‌ಗಂಜ್(Kasganj) ಜಿಲ್ಲೆಯ ಪಟಿಯಾಲಿಯ ಬಹದ್ದೂರ್‌ನಗರದವರು, ಅವರ ಹೆಸರು ಸಕರ್ ವಿಶ್ವ ಹರಿ. ಇವರು ಬಾಬಾ ಆಗುವುದಕ್ಕೂ ಮೊದಲು ಪೊಲೀಸ್ ಗುಪ್ತಚರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ, ಅವರು ಕೆಲಸವನ್ನು ತೊರೆದು ಕಥೆಗಾರರಾಗುವ ಮೂಲಕ ಭಕ್ತರ ಸೇವೆ ಪ್ರಾರಂಭಿಸಿದರು. ಅವರು ತಮ್ಮ ಹೆಂಡತಿಯೊಂದಿಗೆ ಸತ್ಸಂಗವನ್ನು ನಡೆಸುತ್ತಾರೆ. ಇವರು ಪಟಿಯಾಲಿದಲ್ಲಿ ಸಕರ್ ವಿಶ್ವ ಹರಿ ಬಾಬಾ ಎಂದೇ ಖ್ಯಾತರಾಗಿದ್ದಾರೆ. ಅವರ ಸತ್ಸಂಗಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಪಟಿಯಾಲದ ಬಹದ್ದೂರ್ ನಗರ ಗ್ರಾಮದಲ್ಲಿರುವ ಆಶ್ರಮದಲ್ಲಿ ಬಾಬಾ ದರ್ಬಾರ್ ನಡೆಸುತ್ತಿದ್ದಾರೆ.

ಸಾಕಾರ್ ವಿಶ್ವ ಹರಿ ಬಾಬಾ’ ಎಂದು ಹೆಚ್ಚು ಜನಪ್ರಿಯರಾಗಿರುವ ಬಾಬಾ ಅವರು ಸಾರ್ವಜನಿಕವಾಗಿ ಬಿಳಿ ಬಟ್ಟೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಧರ್ಮೋಪದೇಶಗಳಲ್ಲಿ ಅವರ ಪತ್ನಿಯೂ ಇರುತ್ತಾರೆ, ಅವರ ಅನುಯಾಯಿಗಳು ಹೆಚ್ಚಾಗಿ ಬ್ರಜ್ ಪ್ರದೇಶದ ಆಗ್ರಾ ಮತ್ತು ಅಲಿಘರ್ ವಿಭಾಗಕ್ಕೆ ಸೇರಿದ ಕೆಳಮಟ್ಟದ ಆರ್ಥಿಕ ಸ್ತರದ ಜನರಾಗಿದ್ದಾರೆ. ಯಾವುದೇ ‘ಗುರು’ಗಳ ಅನುಯಾಯಿ ಅಲ್ಲ ಎಂದು ನಂಬಿರುವ ಬಾಬಾ ಅವರು ಸರ್ವಶಕ್ತನಿಂದ ನೇರವಾಗಿ ಬೋಧಿಸಲ್ಪಟ್ಟಿದ್ದಾರೆಂದು ಹೇಳಿಕೊಳ್ಳುತ್ತಾರೆ. ಅವರು ಫೇಸ್ ಬುಕ್ ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಎನ್ನಲಾಗಿದೆ. ಮಂಗಳವಾರದಂದು ಹೆಚ್ಚಾಗಿ ಆಯೋಜಿಸಲಾಗುವ ಅವರ ‘ಸತ್ಸಂಗ’ದಲ್ಲಿ ವಿವಿಧ ಸಂಸದರು ಮತ್ತು ಶಾಸಕರು ಭಾಗವಹಿಸಿದ್ದರು ಎಂದು ನಂಬಲಾಗಿದೆ.

ಕರೋನಾ ಸಮಯದಲ್ಲಿ ಮುನ್ನೆಲೆಗೆ ಬಂದಿದ್ದ ಬಾಬಾ: ಕರೋನಾ ಸಮಯದಲ್ಲಿ, ಭೋಲೆ ಬಾಬಾ ಅವರ ಸತ್ಸಂಗ ಕಾರ್ಯಕ್ರಮವು ವಿವಾದಕ್ಕೆ ಒಳಗಾಗಿತ್ತು. ಆಗ ಅವರು ತಮ್ಮ ಸತ್ಸಂಗದಲ್ಲಿ ಕೇವಲ 50 ಮಂದಿಗೆ ಮಾತ್ರ ಅನುಮತಿ ಕೋರಿದ್ದರು. ಆದರೆ, ಬರ ಬರುತ್ತಾ ಅವರ ಸತ್ಸಂಗಕ್ಕೆ 50 ಸಾವಿರಕ್ಕೂ ಹೆಚ್ಚು ಜನ ಸೇರುತ್ತಿದ್ದರು. ಭೋಲೆ ಬಾಬಾ ಇಟಾಹ್, ಆಗ್ರಾ, ಮೈನ್‌ಪುರಿ, ಷಹಜಹಾನ್‌ಪುರ, ಹತ್ರಾಸ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿಯೂ ಹೆಸರು ವಾಸಿಯಾಗಿದ್ದಾರೆ. ಇದಲ್ಲದೇ, ಮಧ್ಯಪ್ರದೇಶದ ಪಶ್ಚಿಮ ಯುಪಿ, ರಾಜಸ್ಥಾನ, ಹರಿಯಾಣಕ್ಕೆ ಹೊಂದಿಕೊಂಡಿರುವ ಹಲವು ಜಿಲ್ಲೆಗಳಲ್ಲಿ ಅವರು ಪ್ರವಚನ ನೀಡುತ್ತಾರೆ.

ಸತ್ಸಂಗಕ್ಕೆ ಬರುವವರಿಗೆ ನೀರು ವಿತರಣೆ:
ಭೋಲೆ ಬಾಬಾ ಅವರ ಸತ್ಸಂಗಕ್ಕೆ ಹೋಗುವ ಭಕ್ತರಿಗೆ ನೀರು ವಿತರಿಸಲಾಗುತ್ತದೆ. ಈ ನೀರು ಕುಡಿಯುವುದರಿಂದ ತಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಬಾಬಾ ಅವರ ಅನುಯಾಯಿಗಳು ನಂಬುತ್ತಾರೆ.

ದುರಂತ ಸಂಭವಿಸಿದ್ದು ಹೇಗೆ?
ಸಂಘಟಕರು ‘ಭೋಲೆ ಬಾಬಾ’ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕಾರ್ಯಕ್ರಮದ ನಂತರ, ಸತ್ಸಂಗದ ಪ್ರಚಾರಕರು ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಅವರನ್ನು ಸ್ಪರ್ಶಿಸಲು ಭಕ್ತ ಸಮೂಹವು ಅವರ ಕಡೆಗೆ ನುಗ್ಗಿತು. ಸ್ವಯಂಸೇವಕರು ಅವರನ್ನು ತಡೆಯಲು ಪ್ರಯತ್ನಿಸಿದಾಗ ಈ ಕಾಲ್ತುಳಿತ ಸಂಭವಿಸಿದೆ. ಅಲ್ಲದೆ ಮಂಗಳವಾರ ಮಧ್ಯಾಹ್ನ ‘ಸತ್ಸಂಗ’ ಮುಗಿದ ನಂತರ ಅವರ ಮಹಿಳಾ ಭಕ್ತರು ಸ್ಥಳದಿಂದ ಹೊರಗೆ ಬಂದ ನಂತರ ಕಾಲ್ತುಳಿತವು ಪ್ರಾರಂಭವಾಯಿತು ಎಂದು ಆರಂಭಿಕ ವರದಿಗಳು ಸೂಚಿಸಿವೆ.

ಮೃತರ ಕುಟುಂಬಕ್ಕೆ ಮೋದಿ ಸಂತಾಪ; 2 ಲಕ್ಷ ಪರಿಹಾರ ಘೋಷಣೆ
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿದೆ. ಯುಪಿ ಸರ್ಕಾರವು ಎಲ್ಲಾ ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವಲ್ಲಿ ತೊಡಗಿದೆ. ಇದರಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಂಡವರಿಗೆ ನನ್ನ ಸಹಾನುಭೂತಿ ಇದೆ. ಇನ್ನು ಎಲ್ಲಾ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಮೃತರ ಕುಟಂಬಗಳಿಗೆ ತಲಾ 2 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ.

PM Modi: NEET ಅಕ್ರಮ ಬಗ್ಗೆ ಕೊನೆಗೂ ಮೌನ ಮುರಿದ ಮೋದಿ -ಸಂಸತ್ತಿನಲ್ಲಿ ವಿದ್ಯಾರ್ಥಿಗಳಿಗೆ ಕೊಟ್ಟ ಹೊಸ ಭರವಸೆ ಏನು ?!

Leave A Reply

Your email address will not be published.