Dakshina Kannada: ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭ ಭೂ ಕುಸಿತ; ಮಣ್ಣಿನಡಿಯಲ್ಲಿ ಕಾರ್ಮಿಕರು

Dakshina Kannda: ಮಂಗಳೂರು ನಗರದ ಬಲ್ಮಠ ಬಳಿ ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಭೂಕುಸಿತ ಉಂಟಾಗಿದ್ದು, ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆಯೊಂದು ನಡೆದಿದೆ. ಸ್ಥಳಕ್ಕೆ ಎಸ್‌ಡಿಆರ್‌ಎಫ್‌, ಅಗ್ನಿಶಾಮಕದಳದ ಸಿಬ್ಬಂದಿಗಳು ಬಂದಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.

Trekking: ಇನ್ಮೇಲೆ ಚಾರಣ ಪ್ರಿಯರಿಗೆ ಹೊಸ ರೂಲ್ಸ್ ಜಾರಿ! ಜುಲೈನಿಂದ ಕರ್ನಾಟಕದ ಎಲ್ಲ ಟ್ರೆಕ್ಕಿಂಗ್ ತಾಣಗಳಿಗೂ ಆನ್​ಲೈನ್ ಬುಕಿಂಗ್ ಕಡ್ಡಾಯ!

ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ಜೊತೆ ರಕ್ಷಣಾ ತಂಡದ ಸಿಬ್ಬಂದಿಗಳು ಸಂಪರ್ಕ ಸಾಧಿಸಿದ್ದು, ಅವಶೇಷದಡಿ ಸಿಲುಕಿರುವ ಓರ್ವ ಕೂಲಿ ಕಾರ್ಮಿಕನನ್ನು ರಕ್ಷಣೆ ಮಾಡಿದ್ದಾರೆ. ವಿಷಯ ತಿಳಿದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಳೂರಿನಲ್ಲಿ ಕಳೆದ ಮೂರು ದಿನದ ಹಿಂದೆ ನಿರಂತರ ಸುರಿದ ಮಳೆಯಿಂದ ಮಣ್ಣಿನ ದಿಬ್ಬ ಸಡಿಲಗೊಂಡಿತ್ತು. ರಿಟೇನಿಂಗ್‌ ವಾಲ್‌ ಹಾಗೂ ಹಾಕಲಾದ ಶೀಟ್‌ಗಳ ಮೇಲೆ ಮಣ್ಣು ಬಿದ್ದಿದ್ದು, ಇದರಿಂದ ರಿಟೇನಿಂಗ್‌ ವಾಲ್‌ ಹಾಗೂ ಶೀಟ್‌ ಮಧ್ಯೆ ಕಾರ್ಮಿಕರು ಸಿಲುಕಿದ್ದಾರೆ.

ರಕ್ಷಣಾ ಕಾರ್ಯ ಕೋರ್‌ ಕಟ್ಟಿಂಗ್‌ ಮೂಲಕ ನಡೆಯುತ್ತಿದೆ. ಓರ್ವನ ರಕ್ಷಣೆ ಆಗಿದ್ದು, ಮತ್ತೋರ್ವನ ಕಾರ್ಯಾಚರಣೆ ಮುಂದುವರೆದಿದೆ.

Union Budget: ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆ ಯಾವಾಗ? ಬಜೆಟ್ ನಲ್ಲಿ ಏನೇನಿದೆ?!

Leave A Reply

Your email address will not be published.