Kangana Ranaut Slapped: ನಟಿ, ಸಂಸದೆ ಕಂಗನಾಗೆ ಕಪಾಳಮೋಕ್ಷ ಮಾಡಿದ್ದ ಸಿಐಎಸ್‌ಎಫ್‌ ಮಹಿಳಾ ಕಾನ್ಸ್‌ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ

Share the Article

Kangana Ranaut Slapped: ನಟಿ-ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷ ಮಾಡಿದ ಆರೋಪದ ಮೇಲೆ ಅಮಾನತುಗೊಂಡಿದ್ದ ಸಿಐಎಸ್‌ಎಫ್ ಕಾನ್‌ಸ್ಟೇಬಲ್ ಕುಲ್ವಿಂದರ್ ಕೌರ್ ಅವರನ್ನು ಚಂಡೀಗಢದಿಂದ ವರ್ಗಾವಣೆ ಮಾಡಲಾಗಿದೆ. ಆಕೆಯನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಮಾಡಲಾಗಿದೆ ಎಂದು ವರದಿಯಾಗಿದೆ.

Prajwal Revanna Case: 4 ತಿಂಗಳಿಗೊಮ್ಮೆ ಎಚ್‌ಐವಿ ಟೆಸ್ಟ್‌ ಮಾಡಿಸುತ್ತಿದ್ದ ಪ್ರಜ್ವಲ್‌; ತನಿಖೆಯಲ್ಲಿ ವಿಚಾರ ಬಹಿರಂಗ

ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ. ವರದಿಯಲ್ಲಿ ಮೂಲಗಳನ್ನು ಉಲ್ಲೇಖಿಸಿ, ಕುಲ್ವಿಂದರ್ ಕೌರ್ ಅವರನ್ನು ಇನ್ನೂ ಅಮಾನತುಗೊಳಿಸಲಾಗಿದೆ ಮತ್ತು ಅವರನ್ನು ಬೆಂಗಳೂರಿನ ಸಿಐಎಸ್‌ಎಫ್‌ನ ಮೀಸಲು ಬೆಟಾಲಿಯನ್‌ಗೆ ವರ್ಗಾಯಿಸಲಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.

ಇದಕ್ಕೂ ಮುನ್ನ ಸಿಐಎಸ್ಎಫ್ ಕುಲ್ವಿಂದರ್ ಕೌರ್ ಅವರನ್ನು ಜೂನ್ 6 ರಂದು ಅಮಾನತುಗೊಳಿಸಿತ್ತು. ಇದರೊಂದಿಗೆ ಕುಲ್ವಿಂದರ್ ಕೌರ್ ವಿರುದ್ಧವೂ ತನಿಖೆ ಆರಂಭಿಸಲಾಗಿತ್ತು. ಚಂಡೀಗಢ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಕುಲ್ವಿಂದರ್ ಕೌರ್ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.

ಕುಲ್ವಿಂದರ್ ಕೌರ್ ಜೂನ್ 6 ರಂದು ದೆಹಲಿಗೆ ವಿಮಾನ ಹತ್ತಲು ಹೋಗುತ್ತಿದ್ದಾಗ ಕಂಗನಾ ರನೌತ್ ಗೆ ಕಪಾಳಮೋಕ್ಷ ಮಾಡಿದ್ದರು. ಇದಾದ ಬಳಿಕ ಕುಲ್ವಿಂದರ್ ಕೌರ್ ಹೇಳಿಕೆಯೂ ಹೊರಬಿದ್ದಿದ್ದು, ರೈತರ ಆಂದೋಲನದ ಬಗ್ಗೆ ಕಂಗನಾ ಹೇಳಿಕೆಯಿಂದ ನನಗೆ ನೋವಾಗಿದೆ ಎಂದು ಅವರು ಹೇಳಿದ್ದರು. 2021 ರಲ್ಲಿ ರೈತರ ಚಳವಳಿಯ ಸಂದರ್ಭದಲ್ಲಿ, ಚಳವಳಿಯಲ್ಲಿ ತೊಡಗಿರುವ ಮಹಿಳೆಯರು ಧರಣಿಯಲ್ಲಿ ಕುಳಿತುಕೊಳ್ಳಲು ತಲಾ 100 ರೂಪಾಯಿಗಳೊಂದಿಗೆ ಬರುತ್ತಾರೆ ಎಂದು ಕಂಗನಾ ಹೇಳಿಕೆಯೊಂದನ್ನು ಹೇಳಿದ್ದರು.

ಈ ಚಳವಳಿಯಲ್ಲಿ ತಮ್ಮ ತಾಯಿಯೂ ಭಾಗಿಯಾಗಿದ್ದರು ಹಾಗಾಗಿಯೇ ಕಂಗನಾಗೆ ಕಪಾಳಮೋಕ್ಷ ಮಾಡಿದೆ ಎಂದು ಕುಲ್ವಿಂದರ್ ಹೇಳಿದ್ದರು.

Husband – wife: ಪತ್ನಿ ಗರ್ಭಿಣಿಯಾದಳೆಂದು ತಲೆಗೆ ಶೂಟ್ ಮಾಡ್ಕೊಂಡ ಗಂಡ! ಅಷ್ಟಕ್ಕೂ ಕಾರಣ ಏನು ಗೊತ್ತಾ?

Leave A Reply

Your email address will not be published.