Hassan: ಪೊಲೀಸ್‌ ಗಂಡನ ವಿರುದ್ಧ ದೂರು ನೀಡಲೆಂದು ಹೋದ ಹೆಂಡತಿ; ಎಸ್ಪಿ ಕಚೇರಿ ಎದುರಲ್ಲೇ ಪೊಲೀಸ್‌ ಗಂಡನಿಂದ ಪತ್ನಿಯ ಕಗ್ಗೊಲೆ

Hassan: ಒಂದು ಕಾಲವಿತ್ತು, ಅಲ್ಲಿ ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನಲಾಗಿತ್ತು. ಆದರೆ ಇದೀಗ ಗಂಡ ಹೆಂಡತಿಯ ಜಗಳ ಕೊಲೆ ಮಾಡುವ ತನಕ ಎನ್ನುವಷ್ಟರಲ್ಲಿಗೆ ಬಂದಿದೆಯೇನೋ? ಏಕೆಂದರೆ ಇದಕ್ಕೆ ಪೂರಕವಾಗಿ ಇಂತಹುದೇ ಒಂದು ಘಟನೆ ಹಾಸನದಲ್ಲಿ ನಡೆದಿದೆ.

 

TDP: JDU ಬೆನ್ನಲ್ಲೇ ಬಾಲ ಬಿಚ್ಚಿದ TDP – ಈ ಬೇಡಿಕೆ ಈಡೇರಿಕೆಗೆ ಮೋದಿಗೆ ಆಗ್ರಹ- ಸಂಕಷ್ಟದಲ್ಲಿ ಕೇಂದ್ರ !!

ತನ್ನ ವಿರುದ್ಧ ಜಿಲ್ಲಾ ಪೊಲೀಸ್‌ ವರಿಷ್ಠರಿಗೆ ದೂರು ನೀಡಲೆಂದು ಹೋದ ಪತ್ನಿಗೆ ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬ ಚೂರಿಯಿಂದ ಇರಿದು ಹತ್ಯೆಗೈದ ಪೈಶಾಚಿಕ ಘಟನೆ ನಡೆದಿದೆ. ಲೋಕನಾಥ್‌ ಇವರು ಹಾಸನ ನಗರ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್‌. ಇವರು ತನ್ನ ಪತ್ನಿಗೆ ಚೂರಿ ಇರಿದಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಗಂಡನ ಕೃತ್ಯಕ್ಕೆ ಮಮತಾ ಅವರು ಪೊಲೀಸರ ಎದುರಲ್ಲೇ ಕೊಲೆಯಾಗಿದ್ದಾರೆ.

ಗಂಡ ಹೆಂಡತಿ ಮಧ್ಯೆ ಕಳೆದ ನಾಲ್ಕು ದಿನಗಳಿಂದ ಗಲಾಟೆ ನಡೆದಿತ್ತು. ಹೀಗಾಗಿ ಮಮತ (37) ಅವರು ಗಂಡನ ವಿರುದ್ಧ ದೂರು ನೀಡಲೆಂದು ಹಾಸನದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಗೆ ಬಂದಿದ್ದರು. ಈ ವೇಳೆ ಯಮದೂತನ ತರಹ ಹಿಂಬಾಲಿಸಿಕೊಂಡು ಬಂದ ಪತಿ ಮಹಾಶಯ ಎಸ್ಪಿ ಕಚೇರಿ ಎದುರಲ್ಲೇ ತನ್ನ ಪತ್ನಿಯ ಎದೆಗೆ ಚಾಕುವಿನಿಂದ ಇರಿದಿದ್ದು, ನಂತರ ಪರಾರಿಯಾಗಲು ಯತ್ನ ಮಾಡಿದ್ದಾನೆ.

ಮಹಿಳೆಯನ್ನು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಷ್ಟರಲ್ಲಿ ಸಾವು ಕಂಡಿದ್ದಾಳೆ. ಅರೋಪಿ ಪತಿ ಲೋಕನಾಥ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Fraud News: ದೋಷ ಪರಿಹಾರ ಮಾಡುವುದಾಗಿ ನಂಬಿಸಿದ ಬುಡುಬುಡಿಕೆ ವೇಷಧಾರಿ; ಲಕ್ಷಗಟ್ಟಲೆ ಮೌಲ್ಯದ ಚಿನ್ನಾಭರಣ ತಗೊಂಡು ಎಸ್ಕೇಪ್‌

Leave A Reply

Your email address will not be published.