TDP: JDU ಬೆನ್ನಲ್ಲೇ ಬಾಲ ಬಿಚ್ಚಿದ TDP – ಈ ಬೇಡಿಕೆ ಈಡೇರಿಕೆಗೆ ಮೋದಿಗೆ ಆಗ್ರಹ- ಸಂಕಷ್ಟದಲ್ಲಿ ಕೇಂದ್ರ !!
TDP: 3ನೇ ಅವಧಿಯಲ್ಲಿ ಪ್ರಧಾನಿ ಮೋದಿಗೆ ಆಡಳಿತ ನಡೆಸುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಮಿತ್ರ ಪಕ್ಷಗಳ ನಾಯಕರು ಯಾವಾಗ ಬೇಕಾದರೂ ಆಟ ಶುರು ಮಾಡಬಹುದು. ಅಂತೆಯೇ ನಿನ್ನೆ ತಾನೆ NDA ಮಿತ್ರ ಪಕ್ಷವಾದ JDU ನಾಯಕ, ಮೋದಿ ಪ್ರಧಾನಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್(Nithish Kumar) ರಾಜ್ಯಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ ಇಟ್ಟು ಆಟ ಶುರು ಮಾಡಿದ್ದರು. ಈ ಬೆನ್ನಲ್ಲೇ TDP ನಾಯಕ ಚಂದ್ರಬಾಬು ನಾಯ್ಡು ಕೂಡ ಬಾಲ ಬಿಚ್ಚಿದ್ದಾರೆ.
Ujire: ಕೊಟ್ಟ ಸಾಲ ಕೇಳಿದ್ದಕ್ಕೆ ಅಂಗಡಿಗೆ ನುಗ್ಗಿ ಮಹಿಳೆಗೆ ಥಳಿತ – ಬಿಜೆಪಿ ಕಾರ್ಯಕರ್ತನ ಬಂಧನ !!
ಹೌದು, NDA ಸರ್ಕಾರ ರಚನೆಯಾಗುವಾಗ ಬೆಂಬಲ ಘೋಷಿಸಿದ್ದ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು(Chandrababu Naidu) ಅವರು ಯಾವುದೇ ಷರತ್ತುಗಳಿಲ್ಲದೆ, ನಗುನಗುತ್ತಾ ಬಂದು ಮೋದಿ ಕೈ ಕುಲುಕಿ ನಮ್ಮ ಬೆಂಬಲ ನಿಮಗೆ, ಯಾವತ್ತೂ ಯಾವುದಕ್ಕೂ ಹಸ್ತಕ್ಷೇಪ ಮಾಡಲ್ಲ ಎಂದು ಹೇಳಿದ್ದರು. ಆದರೀಗ ಸರ್ಕಾರ ರಚನೆಯಾಗಿ ಒಂದು ತಿಂಗಳು ಆಗುವ ಮೊದಲೇ ತಮ್ಮ ಆಪ ಶುರುಹಚ್ಚಿಕೊಂಡು, NDA ಸರ್ಕಾರಕ್ಕೆ ಆತಂಕ ಶುರುಮಾಡಿದ್ದಾರೆ.
ನಿನ್ನೆ ತಾನೆ 12 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಜೆಡಿಯು, ಬಿಹಾರ(Bihar)ಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಅಲ್ಲದೆ ಈ ಬಗ್ಗೆ ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲೂ ನಿರ್ಧರಿಸಿದೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಬೆನ್ನಲ್ಲೇ TDP ಕೂಡ ಸೆಟೆದು ನಿಂತಿದ್ದು ತನ್ನ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ. ಮೋದಿಗೆ ಹೊಸ ಪ್ರಸ್ತಾಪ ಸಲ್ಲಿಸಿ ಮುಂದಾಗಿದೆ. ಈ ಬಗ್ಗೆ ಟಿಡಿಪಿಯ ಸಂಸದೀಯ ಪಕ್ಷದ ನಾಯಕ ಕೃಷ್ಣ ದೇವರಾಯಲು ಅವರು ಮಾತನಾಡಿ, ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ಸಾಧ್ಯವಾದಷ್ಟು ಹಣವನ್ನು ಪಡೆಯಲು ಪಕ್ಷವು ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ. ಆದರೆ ನೆಮ್ಮದಿಯ ವಿಚಾರ ಅಂದ್ರೆ ಕೇಂದ್ರದ ಮುಂದೆ ವಿಶೇಷ ಪ್ಯಾಕೇಜ್ ಅಥವಾ ವಿಶೇಷ ಸ್ಥಾನಮಾನದಂತಹ ಆಗ್ರಹ ಇಡಲು ಬಯಸುವುದಿಲ್ಲ. ಆದರೆ, ರಾಜ್ಯಕ್ಕೆ ಹೆಚ್ಚಿನ ನೆರವು ಪಡೆಯುವುದು ನಮಗೆ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಅಂದಹಾಗೆ ವಿಶೇಷ ವರ್ಗದ ಸ್ಥಾನಮಾನದ ವಿಚಾರದಲ್ಲಿ ಟಿಡಿಪಿ 2018 ರಲ್ಲಿ ಎನ್‌ಡಿಎ ಸರ್ಕಾರದಿಂದ ದೂರ ಸರಿದಿತ್ತು. ಎನ್‌ಡಿಎ ತೊರೆಯುವ ಮುನ್ನ ಪಕ್ಷವು ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಆದರೀಗ ತಾವೇ ಕಿಂಗ್ ಮೇಕರ್ ಎಂದು ಗೊತ್ತಿದ್ದರೂ ವಿಶೇಷ ಸ್ಥಾನಮಾನೋ ಬೇಡಿಕೆ ಸಲ್ಲಿಸಿಲ್ಲ. ಆದರೆ ಇದೇನು ಆಶ್ಚರ್ಯ ಅಲ್ಲ. ಯಾಕೆಂದರೆ ಸರ್ಕಾರ ರಚನೆಯಾಗಿ ಇನ್ನೂ 1 ತಿಂಗಳೂ ಕಳೆದಿಲ್ಲ. ಮುಂದೆ 4 ವರ್ಷ 11 ತಿಂಗಳು ಬಾಕಿ ಇದೆ. ಇದರ ನಡುವೆ ಯಾವಾಗ ಬೇಕಾದರೂ, ಸರಿಯಾದ ಸಮಯ ನೋಡಿ ಬಾಣ ಹೂಡಬಹುದು !!