Sullia: ಸುಳ್ಯದಲ್ಲಿ ಪತಿಯಿಂದ ಪತ್ನಿಗೆ ಚೂರಿ ಇರಿತ; ಕೇಸು ದಾಖಲು

Sullia: ವ್ಯಕ್ತಿಯೋರ್ವ ತನ್ನ ಪತ್ನಿಗೆ ಚೂರಿಯಿಂದ ಹಲ್ಲೆ ನಡೆಸಿರುವ ಘಟನೆಯೊಂದು ನಡೆದಿದ್ದು, ಈ ಕುರಿತು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೀನ್‌ ಕುಮಾರ್‌ ಎಂಬುವವರು ತಮ್ಮ ಪತ್ನಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿರುವ ಕುರಿತು ಆರೋಪಿಸಲಾಗಿದೆ.

 

NEET UG 2024: ನೀಟ್‌ ಹೊಸ ಫಲಿತಾಂಶ ಬಿಡುಗಡೆ; ಹೊಸ ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ನವೀನ್‌ ಕುಮಾರ್‌ ಅವರು ಆರು ವರ್ಷಗಳ ಹಿಂದೆ ಜಾಲ್ಸೂರು ಗ್ರಾಮದ ಮಹಿಳೆಯನ್ನು ಮದುವೆಯಾಗಿದ್ದು, ಇವರಿಬ್ಬರ ದಾಂಪತ್ಯದಲ್ಲಿ ಪತಿಯು ದಿನನಿತ್ಯ ತನ್ನ ಪತ್ನಿಗೆ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.

ಇದರಿಂದ ನೊಂದ ಪತ್ನಿ ನಾಲ್ಕು ವರ್ಷಗಳ ಹಿಂದೆಯೇ ತನ್ನ ತವರು ಮನೆಯಾದ ವಿನೋಭಾ ನಗರದಲ್ಲಿ ವಾಸ ಮಾಡುತ್ತಿದ್ದಾರೆ. ಜೂ.28 ರ ರಾತ್ರಿ ನವೀನ್‌ ಕುಮಾರ್‌ ಅಲ್ಲಿಗೂ ಹೋಗಿ ಗಲಾಟೆ ಮಾಡಿ ತನ್ನ ಪತ್ನಿಗೆ ಚೂರಿಯಿಂದ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ಮಹಿಳೆ ಇದೀಗ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಈ ಘಟನೆ ಕುರಿತು ಸುಳ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Religion Conversion: ಸದ್ದಿಲ್ಲದೆ 30 ಮುಸಲ್ಮಾನರು ಹಿಂದೂ ಧರ್ಮಕ್ಕೆ ಮತಾಂತರ! ಕಾರಣ ಇದೆನಾ?

Leave A Reply

Your email address will not be published.