NEET UG 2024: ನೀಟ್‌ ಹೊಸ ಫಲಿತಾಂಶ ಬಿಡುಗಡೆ; ಹೊಸ ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

NEET UG 2024: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೂನ್ 23 ರಂದು 1,563 ಅಭ್ಯರ್ಥಿಗಳಿಗೆ ನಡೆದ NEET UG 2024 ಮರುಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. 1563 ವಿದ್ಯಾರ್ಥಿಗಳಿಗೆ NEET ಮರು ಪರೀಕ್ಷೆಯ ಫಲಿತಾಂಶಗಳ ಜೊತೆಗೆ, NEET ಹೊಸ ಸ್ಕೋರ್ ಕಾರ್ಡ್ 2024 ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಪ್ರತಿ NEET ಅಭ್ಯರ್ಥಿಗೆ ಇದನ್ನು ಡೌನ್‌ಲೋಡ್ ಮಾಡುವುದು ಅವಶ್ಯಕ.

ಮರುಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು:
wbsite link ಇಲ್ಲಿದೆ; exams.nta.ac.in/NEET/. NEET ಪರಿಷ್ಕೃತ ಸ್ಕೋರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವ ವಿಧಾನವನ್ನು ಸಹ ವಿವರಿಸಲಾಗಿದೆ.

NEET ಪರೀಕ್ಷೆಯನ್ನು 1563 ವಿದ್ಯಾರ್ಥಿಗಳಿಗೆ ಮಾತ್ರ ತೆಗೆದುಕೊಳ್ಳಲಾಗಿದ್ದರೂ ಮತ್ತು 813 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆದರೆ ಇದು ಎಲ್ಲಾ ವಿದ್ಯಾರ್ಥಿಗಳ NEET UG ಫಲಿತಾಂಶ 2024 ರ ಮೇಲೆ ಪರಿಣಾಮ ಬೀರಿದೆ. ಶ್ರೇಣಿಯ ವಿಷಯದಲ್ಲಿ ಮತ್ತೆ ಪರೀಕ್ಷೆಗೆ ಹಾಜರಾದ ಹಲವು ವಿದ್ಯಾರ್ಥಿಗಳ ಅಂಕಗಳು ಬದಲಾಗಿದ್ದು, ನಿಸ್ಸಂಶಯವಾಗಿ ನೀಟ್ ರ್ಯಾಂಕ್‌ ಕೂಡ ಬದಲಾಗಲಿದೆ. ಇನ್ನು ಕೆಲವು ಮಕ್ಕಳ ನೀಟ್ ರ್ಯಾಂಕ್‌ ಕೂಡ ಬದಲಾದರೆ ಉಳಿದವರ ರ್ಯಾಂಕ್ ಕೂಡ ಏರು-ಪೇರಾಗುವುದು ಖಚಿತ.

ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡಲು ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ;
ಮೊದಲಿಗೆ ನೀಟ್‌ ಅಧಿಕೃತ ವೆಬ್‌ಸೈಟ್‌ exams.nta.ac.in/NEET ಗೆ ಭೇಟಿ ನೀಡಿ
ಮುಖಪುಟದಲ್ಲಿ ‘NEET UG ಮರು ಪರೀಕ್ಷೆಯ ಫಲಿತಾಂಶಗಳು 2024’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ಅಪ್ಲಿಕೇಶನ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಭದ್ರತಾ ಪಿನ್ ಅನ್ನು ನಮೂದಿಸಿ.
ನಿಮ್ಮ ಸ್ಕೋರ್‌ಕಾರ್ಡ್ ಅನ್ನು ಪ್ರದರ್ಶಿಸುವ ಹೊಸ ವಿಂಡೋ ತೆರೆಯುತ್ತದೆ.
ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಉಳಿಸಿ.

Ujire: ಕೊಟ್ಟ ಸಾಲ ಕೇಳಿದ್ದಕ್ಕೆ ಅಂಗಡಿಗೆ ನುಗ್ಗಿ ಮಹಿಳೆಗೆ ಥಳಿತ – ಬಿಜೆಪಿ ಕಾರ್ಯಕರ್ತನ ಬಂಧನ !!

Leave A Reply

Your email address will not be published.