Belthangady: ನಾಪತ್ತೆಯಾಗಿದ್ದ ಬೆಳ್ತಂಗಡಿ ಆಟೋ ಚಾಲಕ – ಕಾರ್ಕಳದಲ್ಲಿ ಶವವಾಗಿ ಪತ್ತೆ

Share the Article

Belthangady: ಉಜಿರೆಯ ಆಟೋ ಚಾಲಕ ಸುಧಾಕರ ಮಾಚಾರ್ ಎಂಬವರು ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಇದೀಗ ಕಾರ್ಕಳದ ನಲ್ಲೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Hassan: ಪೊಲೀಸ್‌ ಗಂಡನ ವಿರುದ್ಧ ದೂರು ನೀಡಲೆಂದು ಹೋದ ಹೆಂಡತಿ; ಎಸ್ಪಿ ಕಚೇರಿ ಎದುರಲ್ಲೇ ಪೊಲೀಸ್‌ ಗಂಡನಿಂದ ಪತ್ನಿಯ ಕಗ್ಗೊಲೆ

35 ವರ್ಷದ ಸುಧಾಕರ್ ಅವರು ಶುಕ್ರವಾರ ಜೂನ್ 28 ರಂದು ಬೆಳಗಿನ ಉಪಹಾರ ಮುಗಿಸಿ ಆಟೋರಿಕ್ಷಾ ಚಲಾಯಿಸಿಕೊಂಡು  ಬೆಳ್ತಂಗಡಿಯಿಂದ (Belthangadi) ಹೊರಟವರು ವಾಪಸ್ ಬಂದಿಲ್ಲ ಮತ್ತು ಯಾವುದೇ ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ. ಅಲ್ಲದೇ ಅವರ ಕುಟುಂಬ ಸದಸ್ಯರು, ಆಪ್ತರು, ಆಟೋ ಚಾಲಕರು ಹುಡುಕಾಟ ನಡೆಸಿದರೂ ಅವರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.

ಇದೀಗ ಶನಿವಾರ ಕಾರ್ಕಳದ ನಲ್ಲೂರು ಸಮೀಪದ ಪಾದೆಗುಡ್ಡೆ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಸದ್ಯ ಈ ಬಗ್ಗೆ ಹೆಚ್ಚಿನ ಮಾಹಿತಿ ವಿಚಾರಣೆ ನಂತರ ಇನ್ನಷ್ಟೇ ತಿಳಿದುಬರಬೇಕಿದೆ.

Financial Deadlines: ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ನಿಯಮದಲ್ಲಿ ಪರಿಷ್ಕರಣೆ; ಶುಲ್ಕ ಹೆಚ್ಚಳ ಇನ್ನಿತರ 6 ಮುಖ್ಯ ಹಣಕಾಸು ಡೆಡ್‌ಲೈನ್‌ಗಳು ಇಂದಿನಿಂದಲೇ ಜಾರಿ

Leave A Reply