JDU: ಕೊನೆಗೂ ಆಟ ಶುರು ಮಾಡಿದ ನಿತೀಶ್ ಕುಮಾರ್- ಪ್ರಧಾನಿ ಮೋದಿ ಮುಂದೆ ಇಟ್ಟೇಬಿಟ್ರು ಆ ಹೊಸ ಬೇಡಿಕೆ !!
JDU: ಪ್ರಧಾನಿ ನರೇಂದ್ರ ಮೋದಿ(PM Modi) 3ನೇ ಅವಧಿಗೆ ಪ್ರಧಾನಿ ಆಗಿ ಹ್ಯಾಟ್ರಿಕ್ ಭಾರಿಸಿದ್ದಾರೆ. ಆದರೆ ಈ ಸಲ ಅಧಿಕಾರ ನಡೆಸುವುದು ಅಷ್ಟು ಸುಲಭವಲ್ಲ. ಯಾಕೆಂದು ನಿಮಗೆ ಗೊತ್ತೇ ಇದೆ. ಹೀಗಾಗಿ ಸರ್ಕಾರ ಐದು ವರ್ಷ ಪೂರ್ತಿ ಮಾಡುತ್ತದೆ ಎಂಬ ನಂಬಿಕೆಯೂ ಇಲ್ಲ. ಯಾಕೆಂದರೆ ಮಿತ್ರ ಪಕ್ಷಗಳ ನಾಯಕರು ಯಾವಾಗ ಬೇಕಾದರೂ ಆಟ ಶುರು ಮಾಡಬಹುದು. ಅಂತೆಯೇ ಇದೀಗ NDA ಮಿತ್ರ ಪಕ್ಷವಾದ JDU ನಾಯಕ, ಮೋದಿ ಪ್ರಧಾನಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿಲ ಬಿಹಾರ ಸಿಎಂ ನಿತೀಶ್ ಕುಮಾರ್(Nithish Kumar) ಅವರು ತಮ್ಮ ಮೊದಲ ಬಾಣ ಪ್ರಯೋಗ ಮಾಡಿದ್ದಾರೆ.
RSS: ಉತ್ತರ ಪ್ರದೇಶದಲ್ಲಿ ಬಿಜೆಪಿ ಹೀನಾಯವಾಗಿ ಸೋಲಲು ಕಾಣವೇನು? RSS ಕೊಟ್ಟ ಕಾರಣಗಳಿವು !!
NDA ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣ ಬಿಹಾರದ ನಿತೀಶ್ ಕುಮಾರ್ ಹಾಗೂ ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು. ಸ್ಪಷ್ಟ ಬಹುಮತ ಇಲ್ಲದ ಬಿಜೆಪಿಗೆ ತಮ್ಮ ಬೆಂಬಲ ಸೂಚಿಸಿ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಆರಂಭದಲ್ಲಿ ಯಾವುದೇ ಷರತ್ತುಗಳನ್ನು ವಿಧಿಸದೆ ಬೆಂಬಲ ಘೋಷಿಸಿದ ಈ ನಾಯಕರು ಮುಂದೆ ಬಾಲ ಬಿಚ್ಚುವುದಿಲ್ಲ ಎಂಬ ನಂಬಿಕೆ ಯಾರಿಗೂ ಇಲ್ಲ ಬಿಡಿ. ಯಾಕೆಂದರೆ ಇವರು ಮರದಿಂದ ಮರಕ್ಕೆ ಹಾರುವ ಮಂಗಗಳಿದ್ದಂತೆ. ಈ ಹಿಂದಿನ ಹಲವು ಸನ್ನಿವೇಶಗಳು ಇದಕ್ಕೆ ಉದಾಹರಣೆಯಾಗಿವೆ. ಅಂತೆಯೇ ಇದೀಗ ಅಚ್ಚರಿ ಎಂಬಂತೆ ಸರ್ಕಾರ ರಚನೆ ಆಗಿ ಒಂದು ತಿಂಗಳು ಕಳೆಯುವ ಮೊದಲೇ ಬಿಹಾರದ ನಿತೀಶ್ ಕುಮಾರ್ ತಮ್ಮ ಆಟ ಶುರುಮಾಡಿದ್ದಾರೆ.
ಹೌದು, ಕೇಂದ್ರದ ಎನ್‌ಡಿಎ ಸರ್ಕಾರದ ಅಳಿವು- ಉಳಿವು ನಿರ್ಧರಿಸುವ ಸಾಮರ್ಥ್ಯ ಹೊಂದಿರುವ ಕೇವಲ 12 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಜೆಡಿಯು, ಬಿಹಾರ(Bihar)ಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಅಲ್ಲದೆ ಈ ಬಗ್ಗೆ ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲೂ ನಿರ್ಧರಿಸಿದೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಅಂದಹಾಗೆ ಇಂದಿನ ಇಂಡಿಯಾ ಕೂಟದ ಭಾಗವಾಗಿದ್ದ ಜೆಡಿಯು ಜಾರಿಗೊಳಿಸಿದ್ದ ಒಬಿಸಿ, ಎಸ್ಸಿಎಸ್ಟಿ ಸಮುದಾಯಕ್ಕೆ ಶೇ.65ರಷ್ಟು ಮೀಸಲು ಆದೇಶವನ್ನು ಇತ್ತೀಚೆಗೆ ಹೈಕೋರ್ಟ್ ವಜಾ ಮಾಡಿತ್ತು. ಇದು 2025ರ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಜೆಡಿಯುಗೆ ಶಾಕ್ ನೀಡಿತ್ತು. ಹೀಗಾಗಿ ಜನರ ಮುಂದೆ ಮತ್ತೊಮ್ಮೆ ತೆರಳುವ ಮುನ್ನ ವಿಶೇಷ ಸ್ಥಾನಮಾನ ಅಥವಾ ಹಣಕಾಸು ಪ್ಯಾಕೇಜ್ ಪಡೆಯುವ ಪಟ್ಟನ್ನು ಕೇಂದ್ರದ ಮುಂದೆ ಜೆಡಿಯು ಇಡುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ವಿಶೇಷ ಸ್ಥಾನಮಾನ ಸಾಧ್ಯವಾಗದೇ ಹೋದರೆ ವಿಶೇಷ ಪ್ಯಾಕೇಜ್ ನೀಡುವ ವಿಧಾನವನ್ನೂ ಪರಿಗಣಿಸಬಹುದು ಎಂದು ಸಭೆಯು ಸಲಹೆ ನೀಡಿದೆ.
ಒಟ್ಟಿನಲ್ಲಿ ಯಾವುದೇ ಷರತ್ತುಗಳನ್ನು ನೀಡದೆ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದ ನಿತೀಶ್ ಈಗ ಒಂದೊಂದೇ ಬೇಡಿಕೆ ಇಡಲು ಶುರುಮಾಡಿದ್ದಾರೆ. ಮುಂದಿನ ವರ್ಷ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದರಲ್ಲಿ ಏನಾದರೂ ಅದೃಷ್ಟ ಚೆನ್ನಾಗಿದ್ದು ಜೆಡಿಯು ಒಂದಕ್ಕೇ ಸ್ಪಷ್ಟ ಬಹುಮತ ಬಂದರೆ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರದ ಕಥೆ ಮುಗಿದಂತೆಯೇ. ಬುಗುರಿ, ಬುಗುರಿ ಆಡಿಸದಂತೆ ನಿತೀಶ್ ಆಡಿಸಬಹುದು.
Gibbons: ಸಂಗಾತಿಯನ್ನು ಸೆಳೆಯಲು ತನ್ನ ‘ಮಲ’ ಕೊಟ್ಟು ಪ್ರಪೋಸ್ ಮಾಡುತ್ತೆ ಈ ಪ್ರಾಣಿ !! ಯಾಕೆ, ಹೇಗೆ ಗೊತ್ತಾ?