Gibbons: ಸಂಗಾತಿಯನ್ನು ಸೆಳೆಯಲು ತನ್ನ ‘ಮಲ’ ಕೊಟ್ಟು ಪ್ರಪೋಸ್ ಮಾಡುತ್ತೆ ಈ ಪ್ರಾಣಿ !! ಯಾಕೆ, ಹೇಗೆ ಗೊತ್ತಾ?

Gibbons: ಗರ್ಲ್ ಫ್ರೆಂಡ್ ಹುಡುಕಲು ಅಥವಾ ಅವರನ್ನು ಸೆಳೆಯಲು ಅನೇಕರು ಹಲವು ತರದ ಕಸರತ್ತು ಮಾಡುತ್ತಾರೆ. ಅದರಲ್ಲೂ ಈಗಿನ ಕಾಲದ ಹುಡುಗರನ್ನು ಕೇಳಬೇಕೆ. ಹುಡುಗಿಯರನ್ನು ಸೆಳೆಯಲು ಅವರು ಮಾಡದ ಕೆಲಸವಿಲ್ಲ ಬಿಡಿ. ಆದರೆ ತನ್ನ ಮಲವನ್ನು ನೀಡಿ ಸಂಗಾತಿಯನ್ನು ಸೆಳೆಯುವ ಬಗ್ಗೆ ನೀವೇನಾದ್ರೂ ಕೇಳಿದ್ದೀರಾ? ಇದು ನಿಮಗೆ ಕೊಂಚ ಅಸಹ್ಯ ಅಥವಾ ಕಸಿವಿಸಿ ಎನಿಸಿದರೂ ಅದು ಸತ್ಯ.

 

Renukaswamy Murder Case: ರೇಣುಕಾಸ್ವಾಮಿ ಕೊಲೆ ಕೇಸ್‌; ನಟ ದರ್ಶನ್‌ ವಿರುದ್ಧ ಹೇಳಿಕೆ ನೀಡಿದ ಪವಿತ್ರಾಗೌಡ

ಹೌದು, ತಾನು ಮಾಡುವ ಕಕ್ಕಸ್ಸನ್ನು ನೀಡಿ ಸಂಗಾತಿಯನ್ನು ಸೆಳೆಯುವ ಚಾಳಿಯನ್ನು ಜೀವಿಯೊಂದು ತನ್ನ ಜೀವನದಲ್ಲಿ ರೂಢಿಸಿಕೊಂಡಿದೆ. ಹಾಗಂತ ಇದು ಮನುಷ್ಯನಲ್ಲ. ಬದಲಿಗೆ ಅದೊಂದು ಪ್ರಾಣಿ. ಹೌದು, ಮಂಗನನ್ನು ಹೋಲುವಂತಹ ಗಿಬ್ಬನ್ಸ್(Gibbons) ಎನ್ನುವ ಕಾಡು ಪ್ರಾಣಿಯೊಂದು ಪ್ರೇಯಸಿಗೆ ತನ್ನ ಮಲವನ್ನು ನೀಡಿ ಪ್ರಪೋಸ್ ಮಾಡುತ್ತದೆ. ಇದು ತನ್ನ ಸಂಗಾತಿಯನ್ನು ಪ್ರೀತಿಸುವ ಬಗೆಯೇ ಹೀಗೆ.

ಸೌತ್ ಈಸ್ಟ್ ಏಷ್ಯಾದಲ್ಲಿ(South East Asia) ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಪ್ರಾಣಿಗಳು ಬೆದೆ ಬರುವ ಸಮಯದಲ್ಲಿ ತನ್ನ ಪಾರ್ಟ್ನರ್(Partner) ಅನ್ನು ಕಂಡು ಹಿಡಿಯಲು ಎರಡು ಟೆಕ್ನಿಕ್ ಯೂಸ್ ಮಾಡುತ್ತದೆ. ಒಂದು ವಿಚಿತ್ರವಾಗಿ ಕೂಗಿ, ಶಬ್ದಮಾಡಿ ಸಂಗಾತಿಯನ್ನು ಸೆಳೆಯುತ್ತದೆ. ಇನ್ನೊಂದು ಮಲ ವಿಸರ್ಜನೆ ಮಾಡಿ ತನ್ನ ಹೆಣ್ಣು ಗಿಬ್ಬನ್ಸ್ ಮೇಲೆ ಎಸೆಯುತ್ತದೆ. ಇದು ತನ್ನ ಸ್ಟ್ರೆಂತ್ ಮತ್ತು ಪ್ರಾಬಲ್ಯವನ್ನು ತೋರಿಸಿಕೊಳ್ಳಲು ಹೀಗೆ ಮಾಡುತ್ತದೆ ಎಂದು ಪ್ರಾಣಿ ತಜ್ಞರು ಹೇಳುತ್ತಾರೆ.

ಆದರೂ ಕೂಡ ಇದೊಂದು ರೀತಿ ವಿಚಿತ್ರ ರೀತಿಯ ಲವ್ ಸ್ಟೋರಿನೇ ಸರಿ. ಪ್ರಕೃತಿ ಹೇಗೆಲ್ಲಾ ವಿಸ್ಮಯವಾಗಿದೆ, ಎಷ್ಟೊಂದು ರೀತಿಯ ಜೀವವೈವಿದ್ಯತೆಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ ಎಂಬುದನ್ನು ನಾವು ಈ ಮೂಲಕ ಗಮನಿಸಬಹುದು. ಆದರೂ ಇದೊಂದು ಅಚ್ಚರಿ ಅಲ್ಲವೇ?..

RSS: ಉತ್ತರ ಪ್ರದೇಶದಲ್ಲಿ ಬಿಜೆಪಿ ಹೀನಾಯವಾಗಿ ಸೋಲಲು ಕಾಣವೇನು? RSS ಕೊಟ್ಟ ಕಾರಣಗಳಿವು !!

Leave A Reply

Your email address will not be published.