Uppinangady: ಸಾಕು ನಾಯಿಯಿಂದ ತಪ್ಪಿತು ಮನೆಯೊಡತಿಯ ಆತ್ಮಹತ್ಯೆ; ಕುತೂಹಲಕಾರಿ ಘಟನೆ ವಿವರ ಇಲ್ಲಿದೆ

Share the Article

Uppinangady: ಪತಿಯ ಜೊತೆ ಗಲಾಟೆ ಆಗಿದ್ದರಿಂದ ಮುನಿಸಿಕೊಂಡ ಪತ್ನಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲೆಂದು ನೇತ್ರಾವತಿ ಸೇತುವೆಯ ತಡೆಗೋಡೆ ಏರಿದ್ದ ಮಹಿಳೆಯ ಜೀವವನ್ನು ಆಕೆಯ ಸಾಕು ನಾಯಿ ಉಳಿಸಿರುವ ಘಟನೆಯೊಂದು ನಡೆದಿದೆ.

ಪಿಲಿಗೂಡು ನಿವಾಸಿ ಮಹಿಳೆ (36 ವರ್ಷ) ತನ್ನ ಪತಿಯೊಂದಿಗಿನ ವಿರಸದಿಂದ ಗುರುವಾರ ರಾತ್ರಿ ನಾಲ್ಕು ಕಿ.ಮೀ. ನಡೆದು ದೂರದ ನೇತ್ರಾವತಿ ಸೇತುವೆ ಬಂದಿದ್ದು, ಹಾರಲು ಯತ್ನ ಮಾಡುತ್ತಿರುವಾಗ, ಮನೆಯಿಂದಲೇ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಸಾಕು ನಾಯಿ ಮಹಿಳೆಯ ಚೂಡಿದಾರವನ್ನು ಕಚ್ಚಿ ಹಿಡಿದು, ಬೊಗಳಲು ಪ್ರಾರಂಭಿಸಿದೆ. ಈ ಮೂಲಕ ರಸ್ತೆಯಲ್ಲಿ ಹೋಗುವವರ ಗಮನ ಸೆಳೆಯುವ ಪ್ರಯತ್ನ ಮಾಡಿದೆ.

ಈ ಸಂದರ್ಭದಲ್ಲಿ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ವ್ಯಕ್ತಿಗಳಿಬ್ಬರು ಇದನ್ನು ಕಂಡು ಇನ್ನೇನು ನದಿಗೆ ಹಾರುವಂತಿದ್ದ ಮಹಿಳೆಯನ್ನು ರಕ್ಷಣೆ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಮೂಕ ಪ್ರಾಣಿಯ ತುಡಿತ ಮತ್ತು ಪ್ರಯತ್ನದಿಂದ ಮಹಿಳೆಯ ಜೀವ ಕೊನೆಗೂ ಉಳಿಯಿತು.

Kodi Shri: ಕೇಂದ್ರ ರಾಜಕಾರಣದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಕೋಡಿ ಶ್ರೀ – ಏನಾಗುತ್ತಾ ಮೋದಿ ಸರ್ಕಾರ?!

ಬೆಂಗಳೂರು ಮೂಲದ ಈ ಮಹಿಳೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಪಿಲಿಗೂಡಿನ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದು, ನಂತರ ಪತಿಗೆ ದೊರಕಿದ ಪಿತ್ರಾರ್ಜಿತ ಆಸ್ತಿಯಲ್ಲಿ ವರ್ಷದ ಹಿಂದೆ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು. ಕೆಲವು ದಿನಗಳಿಂದ ಮೆಕಾನಿಕ್‌ ವೃತ್ತಿಯ ಪತಿ ಮತ್ತು ಪತ್ನಿಯ ನಡುವೆ ವಿರಸ ಉಂಟಾಗಿದ್ದರಿಂದ ಗುರುವಾರ ಮಹಿಲೆ ಜೀವ ತ್ಯಜಿಸಲು ಹೋಗಿದ್ದರು.

ಶುಕ್ರವಾರ ದಿನಪೂರ್ತಿ ರಾಜಿ ಮಾತುಕಗೆ ನಡೆಯಿತಾದರೂ ಮಹಿಳೆ ಗಂಡನ ಮನೆಗೆ ಹೋಗಲು ನಿರಾಕರಣೆ ಮಾಡಿದಾರೆ. ಪೊಲೀಸರು, ಸ್ಥಳೀಯರ ಮನವೊಲಿಕೆಗೂ ಮಹಿಳೆ ಜಗ್ಗಲಿಲ್ಲ. ಇದೀಗ ಇವರು ಗೆಳತಿಯ ಮನೆಯಲ್ಲಿದ್ದು, ಶನಿವಾರ ಬೆಂಗಳೂರಿನ ತಾಯಿ ಮನೆಯವರು ಕರೆದೊಯ್ಯಲು ಬರುವವರಿದ್ದಾರೆ ಎಂದು ವರದಿಯಾಗಿದೆ. ಮಕ್ಕಳು ಅಪ್ಪನೊಂದಿಗೆ ಇರುವುದಾಗಿ ಹೇಳಿರುವುದಾಗಿ ವರದಿಯಾಗಿದೆ.

Actor Darshan: ಪರಪ್ಪನ ಅಗ್ರಹಾರದಲ್ಲಿ ಜೈಲು ಅಧಿಕಾರಿಗಳು ತಲೆನೋವಾಗಿ ಪರಿಣಮಿಸಿದ ದರ್ಶನ್‌

Leave A Reply

Your email address will not be published.