One sided love: ಒನ್‌ ಸೈಡ್‌ ಲವ್‌ನಿಂದ ರೋಸಿ ಹೋಗಿದ್ದೀರಾ? ಹಾಗಿದ್ರೆ ಹೀಗೆ ಮಾಡಿ, ಬೇಗ ರಿಲೀಫ್‌ ಪಡೀರಿ !!

One sided love: ಪ್ರೀತಿ ಎನ್ನುವುದು ಎರಡು ಹೃದಯಗಳಲ್ಲಿಹುಟ್ಟಿಕೊಳ್ಳುವ ಮಧುರವಾದ ಬಂಧ. ಇಲ್ಲಿ ಪರಸ್ಪರ ಗೌರವ, ನಂಬಿಕೆ ಇರುತ್ತದೆ. ಇಬ್ಬರು ಪರಸ್ಪರ ಪ್ರೀತಿಯಿಂದ ಇದ್ದರೆ ಸಂಬಂಧ ಸುಖಕರವಾಗಿ ಸಾಗುವುದು. ಆದರೆ ಪ್ರೀತಿಯಲ್ಲಿ ಅಥವಾ ಸಂಬಂಧದಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ತನ್ನ ಸಂಗಾತಿಯ ಬಗ್ಗೆ ಕಾಳಜಿ ವಹಿಸುತ್ತಾ, ಪ್ರೀತಿ ಮಾಡುತ್ತಾ, ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡುತ್ತಾ, ಸಂಗಾತಿಯ ಪ್ರತಿಯೊಂದು ಕಾರ್ಯದಲ್ಲೂ ಬೆಂಬಲವಾಗಿ ನಿಲ್ಲುತ್ತಾನೆ. ಆದರೆ ಆತನ ಸಂಗಾತಿ ಆತನಿಗೆ ಅಥವಾ ಆಕೆಗೆ ಪ್ರೀತಿ, ಕಾಳಜಿ ಏನನ್ನೂ ತೋರದೆ ನಿರ್ಲಕ್ಷ್ಯ ತೋರಿದರೆ ಅದು ಒನ್‌ಸೈಡ್(One sided love) ಸಂಬಂಧವಾಗಿರುತ್ತದೆ.

 

ಈ ಒನ್ ಸೈಡ್ ಲವ್ ಎಂಬುದು ನಿಷ್ಠಾವಂತ ಸಂಗಾತಿಯ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರಬಹುದು. ತನ್ನ ಸಂಗಾತಿ ತನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಖಿನ್ನತೆಗೂ ಒಳಗಾಗಬಹುದು. ಹೀಗಾಗಿ ಇದರಿಂದ ಕೆಲವರು ರೋಸಿ ಹೋಗಿದ್ದಾರೆ. ಅವರ ಆರೋಗ್ಯ, ಮನಸ್ಸಿನ ಸ್ಥಿತಿಗಳ ಬಗ್ಗೆಯೂ ಇದು ಗಂಭೀರವಾದ ಪರಿಣಾಮ ಬೀರಬಹುದು. ಹೀಗಾಗಿ ಇದರಿಂದ ಹೊರ ಬುರುವುದು ಹೇಗೆ? ಎಂದು ಚಿಂತಿಸುತ್ತಾರೆ. ಅಂತವರಿಗೆ ಇಲ್ಲಿದೆ ಸುಲಭ ಟಿಪ್ಸ್.

D K Suresh: ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿ ಹೇಳಿಕೆ ವಿಚಾರ – ಅಚ್ಚರಿ ಸ್ಟೇಟ್ಮೆಂಟ್ ಕೊಟ್ಟ ಡಿ ಕೆ ಸುರೇಶ್!!

* ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಅವರೊಂದಿಗೆ ಕಾಲ ಕಳೆಯಿರಿ:
ನಿಮ್ಮ ಹೃದಯದಲ್ಲಿ ನಡೆಯುತ್ತಿರುವುದನ್ನು ನಿಮ್ಮ ಸ್ನೇಹಿತರು ಅಥವಾ ನಿಮ್ಮ ಆಪ್ತರ ಜೊತೆ ಹಂಚಿಕೊಳ್ಳಿ. ಇದು ನಿಮ್ಮ ಮನಸ್ಸನ್ನು ಹಗುರವಾಗಿಸುತ್ತದೆ. ಪ್ರತಿ ಕಷ್ಟದ ಸಮಯದಲ್ಲಿ, ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಮನಸ್ಸಿನಿಂದ ನಿಮಗೆ ನೋವುಂಟು ಮಾಡುವ ಎಲ್ಲಾ ವಿಷಯಗಳನ್ನು ತೆಗೆದುಹಾಕಬೇಕು. ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಬೇಕು.

* ನಿಮ್ಮ ಪ್ರೀತಿ, ಸಂತೋಷವನ್ನು ನಿಮಗಾಗಿ ಮೀಸಲಿಡಿ:
ಹಳೆ ಪ್ರೀತಿಯ ಬಗ್ಗೆ ಯೋಚಿಸುವ ಬದಲು ನಿಮಗಾಗಿ ಸಮಯ ತೆಗೆದುಕೊಳ್ಳಿ. ನೀವು ಬೇರೆಯವರಿಗೆ ನೀಡಲು ಬಯಸಿದ ಎಲ್ಲಾ ಸಂತೋಷವನ್ನು ನಿಮಗಾಗಿ ಇಡಿ
ನೀವು ಏನನ್ನು ಬಯಸುತ್ತಿದ್ದೀರೋ ಅದು ಸಾಧ್ಯವಿಲ್ಲ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಿ. ಅವರನ್ನು ಮರೆತು ಜೀವನದಲ್ಲಿ ಮುಂದೆ ಸಾಗಿ. ಹೊಸ ಜೀವನವನ್ನು ಪ್ರಾರಂಭಿಸಿ.

* ಮಾನಸಿಕ ವೈದ್ಯರೊಂದಿಗೆ ಮಾತನಾಡಿ:
ಕೆಲವು ಸಂದರ್ಭಗಳಲ್ಲಿ ನೀವು ಎಷ್ಟೇ ಪ್ರಯತ್ನಿಸಿದರೂ ನೀವು ಇಷ್ಟಪಟ್ಟಿರುವ ವ್ಯಕ್ತಿಯ ನೆನಪಿನಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಅವರ ನೆನಪುಗಳು ಇನ್ನಷ್ಟು ಕಾಡಲಾರಂಭಿಸುತ್ತದೆ. ಅವರಿಲ್ಲದೆ ನಿಮ್ಮ ಜೀವನವನ್ನು ಊಹಿಸಲು ಕಷ್ಟವಾಗಿಬಿಡುತ್ತದೆ. ಅಂತಹ ಸಂದರ್ಭದಲ್ಲಿ ನೀವು ಸಲಹೆಗಾರರು ಅಥವಾ ಮಾನಸಿಕ ವೈದ್ಯರೊಂದಿಗೆ ಕುಳಿತು ಮಾತನಾಡಬಹುದು. ನೀವು ಯೋಚಿಸುತ್ತಿರುವ ಎಲ್ಲವನ್ನೂ ಮತ್ತು ನಿಮಗೆ ಏನಾಗುತ್ತಿದೆ ಎಂಬುದನ್ನು ನೀವು ಅವರಿಗೆ ತಿಳಿಸಿ. ಇದರಿಂದ ವೈದ್ಯರು ನಿಮ್ಮನ್ನು ಈ ಗೊಂದಲದಿಂದ ಹೊರಬರಲು ಸಹಾಯ ಮಾಡುತ್ತಾರೆ.

* ಇವುಗಳನ್ನು ಪಾಲಿಸಿ:
ನೀವು ಇಂಥದ್ದೊಂದು ಸ್ಟೇಜಿಂದ ಹೊರಬರಲು ಬೆಸ್ಟ್ ಮಾರ್ಗ ಅಂದರೆ ನಮ್ಮನ್ನು ನಾವು ಪ್ರೀತಿಸಲು ಕಲಿಯೋದು. ಲೈಫಲ್ಲಿ ಎಲ್ಲವನ್ನೂ ಹೊಸತರಿಂದ ಶುರುಮಾಡೋದು. ದಿನಾ ಎಂಟಕ್ಕೋ ಒಂಭತ್ತಕ್ಕೋ ಏಳುತ್ತಿದ್ದವರು ಐದು ಗಂಟೆಗೆ ಎದ್ದು ಯೋಗ, ಪ್ರಾಣಾಯಾಮ ಮಾಡಬಹುದು. ಅಧ್ಯಾತ್ಮ ಚಿಂತನೆಗಳು ನಿಮಗೆ ಫ್ಯಾಕ್ಟ್‌ ಏನು ಅನ್ನೋದನ್ನು ಸುಲಭವಾಗಿ ಅರ್ಥ ಮಾಡಿಸುತ್ತವೆ.

Viral Video: ರಾತ್ರಿ ಮಲಗಿದವನ ಚಡ್ಡಿಯೊಳಗೆ ಸೇರಿದ ನಾಗರಹಾವು – ಹೊರ ಬರುವ ಮುನ್ನ ಒಳಗೆ ಮಾಡಿದ್ದೇನು?

Leave A Reply

Your email address will not be published.