NEET UG 2024 ಮರು ಪರೀಕ್ಷೆ ರಿಸಲ್ಟ್ ನಂತರ ಒಟ್ಟಾರೆ ರ್ಯಾಂಕಿಂಗ್ ಏನಾಗುತ್ತೆ ? ರಾಂಕ್ ಎಷ್ಟು ಉತ್ತಮ ಆಗುತ್ತೆ ಅನ್ನೋ ಸ್ಪಷ್ಟ ಮಾಹಿತಿ !

NEET UG 2024 : ಜೂನ್ 23 ರಂದು NEET UG ಮರು ಪರೀಕ್ಷೆ ನಡೆದಿತ್ತು. ಈ ಮರು ಪರೀಕ್ಷೆಯ ಫಲಿತಾಂಶಗಳನ್ನು ಜೂನ್ 30, 2024 ರಂದು ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಮರು ಪರೀಕ್ಷೆಯ ಫಲಿತಾಂಶ ಬಿಡುಗಡೆಯಾದ ನಂತರ ಇವರಿಗೆ ಡಿಕ್ಲೇರ್ ಆಗಿರುವ ರಾಂಕ್ ಗಳು ಯಾವ ರೀತಿಯಲ್ಲಿ ಏರುಪೇರುವಾಗಬಹುದು ಎನ್ನುವ ಅಂಶವೇ ಕುತೂಹಲಕಾರಿಯಾಗಿದೆ. ಈಗಾಗಲೇ ಒಳ್ಳೆಯ ರಾಂಕ್ ಪಡೆದ ವಿದ್ಯಾರ್ಥಿಗಳು ತಮ್ಮ ಅಂಕ ಹೆಚ್ಚು ಕಮ್ಮಿ ಆಗುವ ಭಯ ಜತೆಗೆ ಕಾತುರತೆಯಲ್ಲಿ ಕಾಯುತ್ತಿದ್ದಾರೆ. ಹಾಗಾದ್ರೆ ಮರುಪರೀಕ್ಷೆ ರಿಸಲ್ಟ್ ನಂತರ ಈಗಾಗಲೇ ಘೋಷಣೆಯಾಗಿರುವ ರ್‍ಯಾಂಕುಗಳಲ್ಲಿ ಯಾವ ರೀತಿಯ ವ್ಯತ್ಯಾಸ ಆಗಬಹುದು ಗೊತ್ತಾ?
ನೀಟ್ ಮರು ಪರೀಕ್ಷೆಗೆ 1563 ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಹಿಂದೆ ಆ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಲಾಗಿತ್ತು. ನೀಟ್ ಸ್ಕ್ಯಾಮ್ ಗದ್ದಲ ಶುರುವಾದ ನಂತರ ಆ ಮಕ್ಕಳ ಎಲ್ಲಾ ಗ್ರೇಸ್ ಮಾರ್ಕ್ ಗಳನ್ನು ತೆಗೆದು ಹಾಕಿ, ಒಂದೋ ಪರೀಕ್ಷೆ ಬರೆಯಿರಿ, ಅಥವಾ ನೀವು ಈಗಾಗಲೇ ಪಡೆದುಕೊಂಡಿರುವ ಮಾರ್ಕಿನ ಆಧಾರದ ಮೇಲೆ ನಿಮ್ಮ ರಾಂಕುಗಳನ್ನು ಪಡೆದುಕೊಳ್ಳಿ ಎನ್ನುವ ಎರಡು ಆಪ್ಷನ್ ಅನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಈ 1563 ರಲ್ಲಿ ಕೇವಲ ಅರ್ಧಕ್ಕರ್ಧ ಅಂದರೆ 813 ಅಭ್ಯರ್ಥಿಗಳು ಮರು-ಪರೀಕ್ಷೆಗೆ ಹಾಜರಾಗಿದ್ದರು.
ಅಂದರೆ, ನಾಳಿದ್ದು ಜೂನ್ 31 ರಂದು ನೀಟ್ ಮರು ಪರೀಕ್ಷೆಯ ಫಲಿತಾಂಶ ಬಂದ ನಂತರ 813 ವಿದ್ಯಾರ್ಥಿಗಳ ಮಾರ್ಕುಗಳು ಬದಲಾಗಲಿವೆ. ಅಷ್ಟೇ ಅಲ್ಲ, ಈಗ ಪರೀಕ್ಷೆ ಬರೆಯದೆ ಉಳಿದುಕೊಂಡ (1563 ರಲ್ಲಿ) ವಿದ್ಯಾರ್ಥಿಗಳ ಅಂಕ ಕೂಡ ಗ್ರೇಸ್ ಮಾರ್ಕ್ ಇಲ್ಲದೆ ಈಗಾಗಲೇ ಬದಲಾಗಿದ್ದು ಒಟ್ಟಾರೆ ರಾಕಿಂಗ್ ನಲ್ಲಿ ತೀರ ಏರುಪೇರಾಗುವ ಲಕ್ಷಣಗಳು ಕಂಡುಬರುತ್ತಿವೆ. ಈ ರ್ಯಾಂಕಿಂಗ್ ಈಗಾಗಲೇ ಪ್ರಕಟಿಸಿರುವ ದೇಶದ ಒಟ್ಟಾರೆ 24 ಲಕ್ಷ ವಿದ್ಯಾರ್ಥಿಗಳ ರ್ಯಾಂಕಿಂಗ್ ನಲ್ಲೂ ಬದಲಾವಣೆ ತರಲಿದೆ.
ಒಂದು ಅಂದಾಜಿನ ಪ್ರಕಾರ ಪ್ರತಿಭಾವಂತ ವಿದ್ಯಾರ್ಥಿಯೊಬ್ಬನ ರಾಂಕಿಂಗ್ ನಲ್ಲಿ 250 ರಿಂದ 500 ಅಂಶಗಳ ಏರಿಕೆ ಕಾಣಲಿದೆ ಎನ್ನಲಾಗಿದೆ. ಅಂದರೆ ಓರ್ವ ವಿದ್ಯಾರ್ಥಿ ಇದೀಗ 5000 ರಾಂಕಿಂಗ್ ಪಡೆದಿದ್ದರೆ, ಆತನ ಅಥವಾ ಆಕೆಯ ರಾಂಕಿಂಗ್ 4500 ರಿಂದ 4750 ಆಗುವ ಸಂಭವನೀಯತೆ ಅಧಿಕ. ಹಾಗಾಗಿ ಈ ಬಾರಿ, ಒಳ್ಳೆಯ ಓದು ಓದಿದ ಹುಡುಗ ಹುಡುಗಿಯರು ಸ್ವಲ್ಪ ಮಟ್ಟಿಗೆ ತಮ್ಮ ರ್ಯಾಂಕ್ ಗಳನ್ನು ಉತ್ತಮಪಡಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ, ಈಗ 1000 ರಾಂಕ್ ಪಡೆದವರ ರಾಂಕ್ 25 ರಿಂದ 50ರ ಆಸುಪಾಸಿನಲ್ಲಿ ಮೇಲೆ ಕೆಳಗೆ ಆಗಲಿದೆ.
ಅದೇ ಈಗ 20,000 ರಾಂಕ್ ಪಡೆದವರ ರ್ಯಾಂಕ್ ನಲ್ಲಿ ತುಂಬಾನೇ ಬದಲಾವಣೆ ಕಾಣಲಿದೆ. ಅಂದರೆ, ಈಗ ಪಡೆದಿರುವ ರಾಂಕ್ ಗಳ ಸಂಖ್ಯೆ ಜಾಸ್ತಿ ಇದ್ದಷ್ಟೂ ಮುಂದಿನ ರಾಂಕ್ ಗಳ ಏರುಪೇರು ಬಲು ಜೋರಾಗಿರುತ್ತದೆ. ಅವರ ರಾಂಕಿಂಗ್ ನಲ್ಲಿ ಸಾವಿರಾರು ಸಂಖ್ಯೆಯ ವ್ಯತ್ಯಾಸ ಕಂಡು ಬರಲಿದೆ ಎನ್ನುವುದು ತಜ್ಞರೊಬ್ಬರ ಅಭಿಪ್ರಾಯ. ಏನೇ ಆಗಲಿ ನಿಖರ ರಾಂಕ್ ಗಳ ವಿವರಗಳು, ನಾಳಿದ್ದು ಅಂದರೆ ಜೂನ್ 30ನೇ ತಾರೀಕು ಸಂಜೆ ಹೊತ್ತಿಗೆ ಸ್ಪಷ್ಟವಾಗಲಿವೆ.