Mullai Mugilan; ನಾಳೆ ಶಾಲೆಗಳು, ಪಿಯು ಕಾಲೇಜುಗಳಿಗೆ ರಜೆ ಘೋಷಣೆ; ಟಾಸ್ಕ್‌ ಪೋರ್ಸ್‌ ರಚನೆ- ಜಿಲ್ಲಾಧಿಕಾರಿ ಸೂಚನೆ

Mullai Mugilan: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಈಗಾಗಲೇ ಶಾಲೆಗಳಿಗೆ ಸೇರಿ ಪದವಿ ಪೂರ್ವ ಕಾಲೇಜಿಗೂ( ಪಿಯು ಕಾಲೇಜಿಗೂ) ನಾಳೆ ಕೂಡಾ ರಜೆ ಘೋಷಣೆ ಮಾಡಿದ್ದು, ಜೊತೆಗೆ ರೆಡ್‌ ಅಲರ್ಟ್‌ ಎಚ್ಚರಿಕೆ ನೀಡಲಾಗಿದೆ.

ಮಂಗಳೂರಿನಲ್ಲಿ ಇಂದು (ಗುರುವಾರ ಸಂಜೆ) ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡಿದ್ದು, ನಂತರ ಉತ್ತರ ಕನ್ನಡ, ಉಡುಪಿ ಜಿಲ್ಲೆಗೆ ಆರೆಂಜ್‌ ಅಲರ್ಟ್‌ ನೀಡಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಮುಂದುವರಿಸಿದೆ. ಹಾಗೆನೇ ಶುಕ್ರವಾರ ಕೂಡಾ ಭಾರೀ ಮಳೆಯಾಗುವ ಸಂಭವವಿದೆ ಎನ್ನಲಾಗಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Dakshina Kananda: ಹೆಚ್ಚಿದ ವರುಣನ ಆರ್ಭಟ; ನಾಳೆ (ಜೂ.28) ರಂದು ದ.ಕ. ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ- ಡಿಸಿ ಆದೇಶ

ಗ್ರಾಮಾಂತರ ಪ್ರದೇಶದಲ್ಲಿ ಪ್ರತಿ ಪಂಚಾಯತ್‌ ಮತ್ತು ನಗರ ಪ್ರದೇಶದಲ್ಲಿ ವಾರ್ಡ್‌ ಮಟ್ಟದಲ್ಲಿ ಟಾಸ್ಕ್‌ ಪೋರ್ಸ್‌ ಮಾಡುತ್ತಿದ್ದು, ಮಳೆಯಿಂದ ಅನಾಹುತ ಆಗಬಲ್ಲ ಮನೆ, ಕಟ್ಟಡಗಳನ್ನು ಗುರುತಿಸಲಾಗುತ್ತಿದೆ ಎಂದಿದ್ದಾರೆ.

ಕಡಲ ತೀರ, ಕಾಲು ಸಂಕ, ತೋಡು, ಅಪಾಯದ ಸ್ಥಿತಿ ಇರುವಲ್ಲಿ ಮನೆಗಳನ್ನು ಮುಚ್ಚುವುದು ಮತ್ತು ಅಲ್ಲಿಗೆ ಹೋಗದಂತೆ ತಡೆ ಹಾಕುವ ಬಗ್ಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದಾರೆ.

ಮಂಗಳೂರಿನ ಪಾಂಡೇಶ್ವರದಲ್ಲಿ ವಿದ್ಯುತ್‌ ಕಂಬ ಬಿದ್ದು ಇಬ್ಬರು ಸಾವಿಗೀಡಾದ ಪ್ರಕರಣಕ್ಕೆ ಕುರಿತಂತೆ, ವಿದ್ಯುತ್‌ ತಂತಿಗಳನ್ನು ಬಹುತೇಕ ನೆಲದಡಿಯಿಂದಲೇ ಮಾಡಲಾಗಿದೆ. ಬೀದಿ ದೀಪದ ಕಾರಣಕ್ಕೆ ಸಿಂಗಲ್‌ ಲೈನ್‌ ತಂತಿಯನ್ನು ಕಂಬದಲ್ಲಿ ನೀಡಲಾಗಿರುವ ಕಾರಣ, ಎಚ್‌ ಟಿ ಲೈನ್‌ ಕಡಿದು ಬಿದ್ದರೆ ಕೂಡಲೇ ಟ್ರಿಪ್‌ ಆಗುವಂತೆ ವ್ಯವಸ್ಥೆ ಇದೆ. ಆದರೆ ಬೀದಿ ದೀಪದಲ್ಲಿ ಅಂತಹ ವ್ಯವಸ್ಥೆ ಇಲ್ಲದೇ ಇರುವ ಕಾರಣ ತೊಂದರೆ ಉಂಟಾಗಿದೆ. ಹೀಗಾಗಿ ಟ್ರಿಪ್‌ ವ್ಯವಸ್ಥೆ ಮಾಡುವಂತೆ ಮೆಸ್ಕಾಂ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

Lucknow: ಸಾರ್ವಜನಿಕರ ಮಧ್ಯೆ ರಸ್ತೆಯಲ್ಲಿ ಬೆತ್ತಲಾಗಿ ಓಡಾಡಿದ ಮಹಿಳೆ; ವೀಡಿಯೋ ವೈರಲ್‌

Leave A Reply

Your email address will not be published.