Middle Birth Collapse: ರೈಲಿನ ಮಿಡಲ್‌ ಬರ್ತ್‌ ಕುಸಿದು ಪ್ರಯಾಣಿಕ ಸಾವು

Share the Article

Middle Birth Collapse: ರೈಲಿನಲ್ಲಿ ಮಿಡಲ್‌ ಬರ್ತ್‌ ಸೀಟ್‌ ಕುಸಿದ ಪರಿಣಾಮ ಕೇರಳದ ವಡಮುಕ್ಕು ನಿವಾಸಿ 62 ವರ್ಷದ ವ್ಯಕ್ತಿ ಅಲಿ ಖಾನ್‌ ಅವರು ದಾರುಣವಾಗಿ ಸಾವಿಗೀಡಾಗಿದ್ದಾರೆ.

ಚಲಿಸುತ್ತಿರುವ ರೈಲಿನಲ್ಲಿ ಕಳೆದ ವಾರ ಖಾನ್‌ ಅವರು ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಲಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾದರೂ ಅವರಿಗೆ ತೀವ್ರ ರೂಪದ ಗಾಯವಾಗಿದ್ದರಿಂದ ಸಾವು ಕಂಡಿದ್ದಾರೆ.

ಮಿಲೇನಿಯಮ್‌ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ (ರೈಲು 12645 ಎರ್ನಾಕುಲಂ-ಎಚ್‌ ನಿಜಾಮುದ್ದೀನ್‌) ರೈಲು ತೆಲಂಗಾಣದ ವಾರಂಗಲ್‌ ತಲುಪುವ ವೇಳೆ ಈ ಅವಘಡ ಸಂಭವಿಸಿದೆ. ಮಿಡ್ಲ್‌ಬರ್ತ್‌ನಲ್ಲಿ ಮಲಗಿಕೊಂಡಿದ್ದ ಪ್ರಯಾಣಿಕ ಹಾಗೂ ಮಿಡ್ಲ್‌ ಬಿರ್ತ್‌ ಸೀಟ್‌ ಎರಡೂ ಕೂಡಾ ಲೋವರ್‌ ಬರ್ತ್‌ನಲ್ಲಿ ಮಲಗಿದ್ದ ಅಲಿ ಖಾನ್‌ ಅವರ ಮೇಲೆ ಬಿದ್ದು ಭೀಕರ ಅವಘಡ ಸಂಭವಿಸಿದೆ.

ರೈಲಿನ ಮಿಡ್ಲ್‌ಬರ್ತ್‌ ಕುಸಿದಿರುವುದು ಹೇಗೆ ಎನ್ನುವುದು ಇನ್ನೂ ಕಾರಣ ತಿಳಿದು ಬಂದಿಲ್ಲ. ಭಾರತೀಯ ರೈಲ್ವೇ ಈ ಘಟನೆಯ ಕುರಿತು ಮಾಹಿತಿ ನೀಡಿದೆ.

Leave A Reply