Lord Ganesh: ಮನೆಯ ಮುಖ್ಯದ್ವಾರದ ಮೇಲೆ ಈ ದೇವರ ಚಿತ್ರ ಹಾಕಿದರೆ ಸಕಲ ಭಾಗ್ಯವು ನಿಮ್ಮದಾಗಲಿದೆ!

Lord Ganesh: ಮನೆಯ ಮುಖ್ಯದ್ವಾರದಲ್ಲಿ ದೇವರ ಫೋಟೋ ನೇತು ಹಾಕಿದರೆ ಒಳ್ಳೆಯದು ಎಂದು ಭಾವಿಸಿರಬಹುದು. ಆದರೆ ಯಾವ ದೇವರ ಫೋಟೋ ಇದ್ದರೆ ಉತ್ತಮ ಎಂದು ಗೊಂದಲ ನಿಮ್ಮಲ್ಲಿ ಇರಬಹುದು. ಈ ಗೊಂದಲಕ್ಕೆ ಇಲ್ಲಿದೆ ಉತ್ತರ. ಹೌದು, ಮುಖ್ಯವಾಗಿ ಹಿಂದೂ ಧರ್ಮದಲ್ಲಿ ಗಣೇಶನನ್ನು (Lord Ganesh) ಆದಿ ದೇವರು ಎಂದು ಪೂಜಿಸಲಾಗುತ್ತದೆ.

Health Risk: ಪ್ರತಿ ವರ್ಷ 44 ಲಕ್ಷ ಜನರು ಈ ಕಾಯಿಲೆಯಿಂದ ಸಾಯುತ್ತಿದ್ದಾರೆ, ಈ ತಪ್ಪಿನಿಂದ ಅಪಾಯ ಹೆಚ್ಚು

ಯಾವುದೇ ಶುಭ ಕಾರ್ಯ ಪ್ರಾರಂಭಿಸಿದಾಗ ಸಿದ್ಧಿ ವಿನಾಯಕ ನನ್ನು ಪ್ರಾರ್ಥಿಸುತ್ತೇವೆ. ಏಕೆಂದರೆ ಗಣೇಶ ಯಾವುದೇ ಅಡೆತಡೆಗಳಿಲ್ಲದೆ ಕಾರ್ಯ ಮಾಡುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ಮನೆಯ ಮುಂದೆ ಗಣೇಶನ ಚಿತ್ರ ಅಥವಾ ಮೂರ್ತಿಗಳನ್ನು ಇಡುವುದು ಉತ್ತಮ. ಇದರಿಂದ ಏನೆಲ್ಲಾ ಪ್ರಯೋಜನ ಎಂದು ಕೂಡ ಇಲ್ಲಿ ತಿಳಿಸಲಾಗಿದೆ. ಬನ್ನಿ ನೋಡೋಣ.

ಮನೆಯ ಮುಖ್ಯ ದ್ವಾರದ ಮೇಲಿನ ಭಾಗದಲ್ಲಿ ಗಣಪತಿ ಚಿತ್ರ ಇಡುವುದರಿಂದ ಯಾವುದೇ ಅಡೆತಡೆಗಳಿಲ್ಲದೆ ಆ ಕುಟುಬಸ್ಥರು ಸಮೃದ್ಧಿಯನ್ನು ಹೊಂದುತ್ತಾರೆ ಎನ್ನುತ್ತಾರೆ ಪಂಡಿತರು.

ಅಲ್ಲದೇ ಮುಖ್ಯ ಬಾಗಿಲಿನ ಮೇಲೆ ಫೋಟೊ ಇಡುವುದರಿಂದ ಮನೆಯೊಳಗೆ ನಕಾರಾತ್ಮಕತೆ ಸರಿದು ಸಕಾರಾತ್ಮಕತೆ ತುಂಬುತ್ತದೆ. ಅಂದರೆ ಮನೆಯಲ್ಲಿ ಎಲ್ಲವೂ ಧನಾತ್ಮಕವಾಗಿರುತ್ತದೆ. ಕುಟುಂಬ ಸದಸ್ಯರ ನಡುವೆ ಯಾವುದೇ ಪ್ರೀತಿ ವಾತ್ಸಲ್ಯ ಹುಟ್ಟುತ್ತದೆ. ಮನೆಯಲ್ಲಿ ಶಾಂತ ವಾತಾವರಣ ನೆಲೆಸುತ್ತದೆ.

ಇನ್ನು ಮನೆಯಲ್ಲಿರುವ ಎಲ್ಲಾ ವಾಸ್ತು ದೋಷಗಳು ನಿವಾರಣೆಯಾಗುತ್ತದೆ. ಮನೆಯಲ್ಲಿ ಮನಃಶಾಂತಿ ಮನೆ ಮಾಡುತ್ತದೆ. ಜೊತೆಗೆ ಪ್ರಮುಖ ಕಾರ್ಯಕ್ಕೆ ಹೋದಾಗ ಮುಖ್ಯದ್ವಾರದಲ್ಲಿರುವ ಗಣಪತಿ ಪ್ರತಿಮೆಗೆ ನಮಸ್ಕರಿಸಿದರೆ ಯಾವುದೇ ವಿಘ್ನಗಳು ಇರುವುದಿಲ್ಲ.

Paris: ಮಹಿಳೆ ಒಬ್ಬಳಿಗೆ ಕೆಲಸ ಕಾರ್ಯ ಏನು ಇಲ್ವಂತೆ! ಖ್ಯಾತ ಕಂಪನಿ ಮಾತ್ರ 20 ವರ್ಷ ಭರ್ಜರಿ ಸಂಬಳ ಕೊಟ್ಟಿದೆ!

Leave A Reply

Your email address will not be published.