Pavitra Gowda: ಅಭಿಮಾನಿಗಳ ಪಾಲಿಗೆ ನಟ ದರ್ಶನ್‌ ʼಡಿ ಬಾಸ್‌ʼ! ಪವಿತ್ರಾ ಗೌಡ ಪಾಲಿಗೆ ʼಸುಬ್ಬʼ

Share the Article

Pavitra Gowda: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ನಟ ದರ್ಶನ್‌, ದರ್ಶನ್‌ ಗೆಳತಿ ಪವಿತ್ರಾ ಗೌಡ ಅವರ ಕುರಿತ ಇಂಟೆರೆಸ್ಟಿಂಗ್‌ ವಿಚಾರವೊಂದು ಹೊರಬಿದ್ದಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಪವಿತ್ರಾ ಗೌಡ ನಟ ದರ್ಶನ್‌ ಆಪ್ತೆ. ಆಪ್ತೆ ಪವಿತ್ರಾ ಗೌಡ ಅವರು ನಟ ದರ್ಶನ್‌ ಅವರಿಗೆ ಕ್ಯೂಟ್‌ ಆಗಿ ಒಂದು ನಿಕ್‌ನೇಮ್‌ ಇಟ್ಟಿದ್ದಾರಂತೆ. ಅದೇನೆಂದರೆ ಪ್ರೀತಿಯಿಂದ ದಚ್ಚುನನ್ನು ʼ ಸುಬ್ಬʼ ಎಂದು ಕರೆಯುತ್ತಿದ್ದರಂತೆ.

ಡಿ ಬಾಸ್‌ ಅಭಿಮಾನಿಗಳಿಗಾಗಿ, ಸುಬ್ಬ ಪವಿತ್ರಗಾಗಿ. ಇದು ಹೇಗೆ ರಿವೀಲ್‌ ಆಯಿತೆಂದರೆ ದರ್ಶನ್‌ ಬರ್ತ್‌ಡೇಯ ಒಂದು ಹೊಸ ಫೋಟೋ ವೈರಲ್‌ ಆಗುತ್ತಿದ್ದು, ಅದರಲ್ಲಿ ʼಸುಬ್ಬʼ ಎಂದು ಬರೆದಿದೆ. ಕೇಕ್‌ ನಲ್ಲಿ ಸುಬ್ಬ ಎಂದು ಬರೆದಿದ್ದು ಈ ಮೂಲಕ ರಿವೀಲ್‌ ಆಗಿದೆ.

ಈ ನಿಕ್‌ನೇಮ್‌ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಸಖತ್‌ ಟ್ರೋಲ್‌ ಮಾಡಲು ಪ್ರಾರಂಭ ಮಾಡಿದ್ದಾರೆ. ಸುಬ್ಬ ಸುಬ್ಬಿ ಅಂದರ್‌ ಎಂದು ಹೇಳಲು ಶುರು ಮಾಡಿದ್ದಾರೆ.

Leave A Reply