Uttar Pradesh: ಹಸುವಿನ ಮೇಲೆ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯ; ವೀಡಿಯೋ ವೈರಲ್‌

ಸಿಎಂ ಯೋಗಿಗೆ ಪತ್ರ

Uttar Pradesh: ವಿಕೃತ ಕಾಮಿಗಳು ಎನ್ನುವುದು ಇದಕ್ಕೇ ಏನೋ? ಮೂಕ ಪ್ರಾಣಿಗಳನ್ನೂ ಬಿಡದೆ ತಮ್ಮ ವಿಕೃತಿ ಮೆರೆಯುವ ಜನರು ಅಲ್ಲಲ್ಲಿ ಕಾಣಸಿಗುತ್ತಾರೆ. ಇಂತಹ ಹಲವು ಪ್ರಕರಣ ಕೂಡಾ ಬೆಳಕಿಗೆ ಬರುತ್ತಲೇ ಇರುತ್ತದೆ. ಇದೀಗ ಅಂತಹುದೇ ಒಂದು ವಿಕೃತಿ ಘಟನೆ ಉತ್ತರಪ್ರದೇಶದ ಮೊರಾದಾಬಾದ್‌ ಜಿಲ್ಲೆಯಲ್ಲಿ ಕೂಡಾ ನಡೆದಿದೆ.

ವಿಕೃತ ಕಾಮಿಯೋರ್ವ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಅವರಿಗೂ ದೂರು ನೀಡಲಾಗಿದೆ.

ರಾತ್ರಿ ವೇಳೆ ಹಸುವಿನ ಮೇಲೆ ಲೈಂಗಿಕ ಕ್ರಿಯೆ ನಡೆಸುವುದನ್ನು ಈ ವೀಡಿಯೋದಲ್ಲಿ ನೋಡಬಹುದು. ಹಸು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತಿದ್ದರೂ, ಆತ ಬಿಡದೇ ಪದೇ ಪದೇ ನಿರಂತರ ಲೈಂಗಿಕ ಕ್ರಿಯೆ ನಡೆಸುತ್ತಾರೆ.

ಆರೋಪಿಯನ್ನು ಭೂರಾ ಶೇಖ್‌ ಎಂದು ಗುರುತಿಸಲಾಗಿದೆ.

ವಿಶ್ವ ಹಿಂದೂ ಪರಿಷತ್‌ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ಪೊಲೀಸರು ದಾಖಲು ಮಾಡಿದ್ದಾರೆ. ಆರೋಪಿ ಭೂರಾ ಶೇಖ್‌ನನ್ನು ಅರೆಸ್ಟ್‌ ಮಾಡಲಾಗಿದೆ.

ಸಲಿಂಗ ಲೈಂಗಿಕ ಕಿರುಕುಳ ಆರೋಪ; ಸಂತ್ರಸ್ತನ ವಿರುದ್ಧವೇ ದೂರು ದಾಖಲಿಸಿದ ಸೂರಜ್ ರೇವಣ್ಣ !!

Leave A Reply

Your email address will not be published.