Actor Darshan: ದಾಸನಿಗೆ ಜೈಲುವಾಸ; ಪರಪ್ಪನ ಅಗ್ರಹಾರಕ್ಕೆ ಡಿ ಬಾಸ್‌

ಜುಲೈ 4 ರವರೆಗೆ ನಟ ದರ್ಶನ್‌ ಜೈಲುಪಾಲು

Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವ ಡಿ ಬಾಸ್‌ ಅಲಿಯಾಸ್‌ ನಟ ದರ್ಶನ್‌ ಸೇರಿ ಇತರ ನಾಲ್ವರು ಪೊಲೀಸ್‌ ಕಸ್ಟಡಿ ಇಂದಿಗೆ ಅಂತ್ಯವಾಗಲಿದ್ದು, ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಜುಲೈ 4 ರವರೆಗೆ ನಟ ದರ್ಶನ್‌ ಹಾಗೂ ಇತರ ಮೂರು ಮಂದಿಗೆ ನ್ಯಾಯಾಂಗ ಬಂಧನವನ್ನು ನೀಡಿ 24ನೇ ಎಸಿಎಂಎಂ ಕೋರ್ಟ್‌ ಆದೇಶ ನೀಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲುಪಾಲಾಗಿದ್ದಾರೆ. ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಜುಲೈ 4 ರವರೆಗೆ ನ್ಯಾಯಾಂಗ ಬಂಧನ ನೀಡಿದೆ. ಆರೋಪಿ ನಟ ದರ್ಶನ್‌ ಜೊತೆ ವಿನಯ್‌, ಪ್ರದೋಶ್‌, ಧನರಾಜ್‌ಗೆ ಕೂಡಾ ಜುಲೈ 4 ರವರೆಗೆ ನ್ಯಾಯಾಂಗ ಬಂಧನ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಎರಡನೇ ಬಾರಿ ಪರಪ್ಪನ ಅಗ್ರಹಾರಕ್ಕೆ ಹೋಗಲಿರುವ ನಟ ದರ್ಶನ್‌. ಅಂದು ಹೆಂಡತಿಗೆ ಹಲ್ಲೆ ಪ್ರಕರಣಕ್ಕೆ, ಇಂದು ಕೊಲೆ ಪ್ರಕರಣದ ಆರೋಪಿಯಾಗಿ.

ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ವರ್ಗಾಯಿಸುವಂತೆ ಪೊಲೀಸರು ಮನವಿ ಮಾಡಿದ್ದು, ಆದರೆ ಪೊಲೀಸರ ಮನವಿಗೆ ಆರೋಪಿಗಳ ಪರವಾದ ವಕೀಲರು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ನ್ಯಾಯಾಲಯ ಈ ಕುರಿತು ಸೋಮವಾರ ವಿಚಾರಣೆ ನಡೆಯಲಿದೆ.

ಈಗಾಗಲೇ ಒಂದು ಡಿ ಗ್ಯಾಂಗ್‌ನ ಒಂದು ತಂಡ ಈಗಾಗಲೇ ಪರಪ್ಪನ ಅಗ್ರಹಾರದಲ್ಲಿದೆ. ಇದು ಎರಡನೇ ಬ್ಯಾಚ್‌. ಇನ್ನು ಪರಪ್ಪನ ಅಗ್ರಹಾರದಲ್ಲಿರಲಿದೆ. ವಿಚಾರಣಾಧೀನ ಕೈದಿಯಾಗಿ ನಟ ದರ್ಶನ್‌ ಇನ್ನು ಪರಪ್ಪನ ಅಗ್ರಹಾರದಲ್ಲಿರಲಿದ್ದಾರೆ.

ಈ ಮೊದಲೇ ನ್ಯಾಯಾಲಯದ ಬಳಿ ದರ್ಶನ್‌ ಅಭಿಮಾನಿಗಳು ಹೆಚ್ಚಾಗಿ ಸೇರುವ ಕಾರಣ ಸೂಕ್ತ ಬಂದೋಬಸ್ತ್‌ ಮಾಡಲಾಗಿತ್ತು.

ಪರಪ್ಪನ ಅಗ್ರಹಾರಕ್ಕೆ ಹೋಗಲು ವ್ಯಾನ್‌ಗೆ ಹತ್ತಿದ ಸಂದರ್ಭದಲ್ಲಿ ಒಳಗೆ ಕುಳಿತುಕೊಂಡ ದರ್ಶನ್‌ ಅಲ್ಲಿ ನೋಡಲು ಬಂದ ತಮ್ಮ ಫ್ಯಾನ್ಸ್‌ಗಳಿಗೆ ಕೈ  ಎತ್ತಿ ತೋರಿಸಿರುವ ದೃಶ್ಯ ಕೂಡಾ ಸೆರೆಯಾಗಿದೆ.

ಕಸ್ಟಡಿಗೆ ಹೆಚ್ಚು ದಿನ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ ಈ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್‌ ಮತ್ತು ಉಳಿದ ಆರೋಪಿಗಳು ಪರಪ್ಪನ ಅಗ್ರಹಾರಕ್ಕೆ ಹೋಗಲಿದ್ದಾರೆ. ಈ ಮೊದಲೇ ದರ್ಶನ್‌ ಗೆಳತಿ ಪವಿತ್ರಾಗೌಡ ಸೇರಿ ಉಳಿದ 13 ಆರೋಪಿಗಳ ಸೆರೆಮನೆ ವಾಸ ಪ್ರಾರಂಭವಾಗಿದೆ.

ಇಂದು (ಶನಿವಾರ) ಪೊಲೀಸ್‌ ಠಾಣೆಯ ಲಾಕಪ್‌ನಿಂದ ಸೆಂಟ್ರಲ್‌ ಜೈಲ್‌ನ ಕತ್ತಲ ಕೋಣೆಗೆ ಡಿ ಬಾಸ್‌ ಆಂಡ್‌ ಗ್ಯಾಂಗ್‌ ಹೋಗಿದ್ದಾರೆ.

Leave A Reply

Your email address will not be published.