Muzzaffarnagar: ನಿದ್ರಿಸುತ್ತಿದ್ದಾಗ ಯುವಕನ ಲಿಂಗ ಬದಲಾವಣೆ; ಹುಡುಗನಿಂದ ಹುಡುಗಿಯಾಗಿ ಬದಲಾವಣೆ

Share the Article

Muzzaffarnagar: ಯುವಕನೋರ್ವ ರಾತ್ರಿ ಮಲಗಿ ಬೆಳಗಾಗುವ ಹೊತ್ತಿಗೆ ಹುಡುಗಿಯಾಗಿದ್ದಾನೆ. ಅರೇ ಇದೇಗೆ ಅಂತೀರಾ? ಉತ್ತರ ಪ್ರದೇಶದ ಮುಜಪ್ಪ ರ್‌ನಗರ್‌ನ ಓಂ ಪ್ರಕಾಶ್‌ ಎಂಬಾತನ ಕುತಂತ್ರದಿಂದ ಲಿಂಗ ಬದಲಾವಣೆ ಆಗಿದೆ. ಇದಕ್ಕೆ ಮೆಡಿಕಲ್‌ ಕಾಲೇಜಿನ ವೈದ್ಯರು ಸಾಥ್‌ ನೀಡಿದ್ದಾರೆಂಬ ಆರೋಪವಿದೆ.

ಹುಡುಗಿಯಾಗಿ ಬದಲಾದ ಯುವಕನ ಹೆಸರೇ ಮುಜಾಹಿದ್‌. ಮುಜಾಹಿದ್‌, ನನ್ನ ಒಪ್ಪಿಗೆ ಇಲ್ಲದೇ ಓಂ ಪ್ರಕಾಶ್‌ ಲಿಂಗ ಬದಲಾವಣೆ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾನೆ.

ಓಂ ಪ್ರಕಾಶ್‌ ತನಗೆ ಎರಡು ವರ್ಷಗಳಿಂದ ಬೆದರಿಕೆ ಹಾಕುತ್ತಿದ್ದಾನೆ, ವೈದ್ಯಕೀಯ ಸಮಸ್ಯೆ ಇದೆ ಎಂದು ಸುಳ್ಳು ಹೇಳಿ ನಂಬಿಸಿ, ಆಸ್ಪತ್ರೆಗೆ ಕರೆದೊಯ್ದು ಅರಿವಳಿಕೆ ನೀಡಿ ಲಿಂಗ ಬದಲಾವಣೆಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ನನ್ನನ್ನು ಹೆಣ್ಣಾಗಿ ಬದಲಾಯಿಸಿ, ಆತನೊಂದಿಗೆ ಬಾಳಬೇಕು ಎಂದು ಓಂ ಪ್ರಕಾಶ್‌ ಹೇಳಿದ್ದಾಗಿ ಮುಜಾಹಿದ್‌ ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಕುರಿತು ಪ್ರಕರಣ ದಾಖಲಾಗಿದ್ದು, ತಪ್ಪಿತಸ್ಥರ ವೈದ್ಯರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿಭಟನೆ ಮಾಡಲಾಗಿದೆ.

ಗನ್ ತೋರಿ ಮಹಿಳಾ ಕಾನಿಸ್ಟೇಬಲ್ ಮೇಲೆ ಸಬ್ ಇನ್ಸ್‌ಪೆಕ್ಟರ್‌ ನಿಂದಲೇ ಅತ್ಯಾಚಾರ !!

Leave A Reply

Your email address will not be published.