Karkala: 6,500 ರೂ ಬೆಲೆಯ ಅಂಜಲ್ ಮೀನು ಕದ್ದು 140 ರೂ ಗೆ ಮಾರಿದ ಕುಡುಕ – ಕೊನೆಗೆ ಮೀನು ಮಾಲಿಕ, ಕದ್ದವ ಹಾಗೂ ತಿಂದವನ ನಡುವೆ ನಡೆಯಿತು ರಾಜಿ ಸಂಧಾನ !!

Karkala: ಕುಡಿತದ ಚಟ ಏನೆಲ್ಲಾ ಮಾಡಿಸುತ್ತದೆ ಎಂದು ನಿಮಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಎಲ್ಲಾತರದ ಅವಾಂತರಗಳನ್ನು ನೀವು ನೋಡಿರುತ್ತೀರಿ ಬಿಡಿ. ಅಂತೆಯೇ ಇದೀಗ ಉಡುಪಿಯಲ್ಲೊಬ್ಬ ಎಡವಟ್ಟು ಕುಡುಕ ಸಾವಿರಾರು ರೂಪಾಯಿ ಬೆಲೆ ಬಾಳೋ ಮೀನನ್ನು ಕದ್ದು ಬರೀ 140ರೂ ಗೆ ಮಾರಾಟಮಾಡಿ, ಕಂಠ ಪೂರ್ತಿ ಎಣ್ಣೆ ಹೀರಿದ್ದಾನೆ.

Government Jobs For 10th Pass Students: SSLC ಆದವರಿಗೆ ಕರ್ನಾಟಕ ಸರ್ಕಾರದ ಹುದ್ದೆಗಳಲ್ಲಿ ಅವಕಾಶ! ಯಾವೆಲ್ಲಾ ಹುದ್ದೆಗೆ ಅರ್ಜಿ ಹಾಕಬಹುದು ಇಲ್ಲಿದೆ ಮಾಹಿತಿ!

ಹೌದು, ಉಡುಪಿ(Udupi) ಜಿಲ್ಲೆಯ ಕಾರ್ಕಳದಲ್ಲಿ(Karkala) ಸೂರಜ್ ಎಂಬಾತನು ಕುಡಿತಕ್ಕಾಗಿ ಅಂಜಲ್ ಮೀನನ್ನು ಕಳ್ಳತನ ಮಾಡಿ ಕದ್ದ 6500 ರೂ ಮೌಲ್ಯದ ಆ ಮೀನನ್ನು ಮದ್ಯಕ್ಕಾಗಿ ಕೇವಲ 140 ರೂ ಗೆ ಮಾರ್ಕೆಟ್ ಬಳಿಯ ಹೂವಿನ ವ್ಯಾಪಾರಿ ವಿಶಾಲ್ ಎಂಬಾತನಿಗೆ ಮಾರಾಟ ಮಾಡಿದ್ದಾನೆ. ಈ ಪ್ರಕರಣ ಪೋಲೀಸ್ ಠಾಣೆ ಮೆಟ್ಟಿಲೇರಿದ್ದು, ಬಳಿಕ ಅಂಜಲ್ ಮೀನು(Anjal Fish) ಮಾಲಕ, ಕದ್ದವನು ಹಾಗೂ ಅದನ್ನು ತಿಂದವನ ನಡುವೆ ರಾಜಿ ಸಂಧಾನ ನಡೆದು ವಿವಾದ ಬಗೆಹರಿದ ವಿಚಿತ್ರ ಘಟನೆ ನಡೆದಿದೆ.

ಏನಿದು ಘಟನೆ?
ಜೂನ್‌ 9ರಂದು ಕಾರ್ಕಳದ ಮೀನು ಮಾರುಕಟ್ಟೆಯ ವ್ಯಾಪಾರಿ ಮಾಲಾ ಎಂಬವರ ಬಳಿ ಗ್ರಾಹಕರೊಬ್ಬರು, ದುಬಾರಿ ಅಂಜಲ್‌ ಮೀನು ಬೇಕು ಎಂದು ಬುಕ್‌ ಮಾಡಿದ್ದರು. ಹೀಗಾಗಿ ಮಾಲಾ ಅವರು ಮರುದಿನ, 6.5 ಕೆ.ಜಿ. ತೂಕದ 6500 ರು. ಮೌಲ್ಯದ ಅಂಜಲ್ ಮೀನನ್ನು ಪಡೆದು ಫ್ರಿಡ್ಜ್‌ನಲ್ಲಿಟ್ಟಿದ್ದರು. ಮರುದಿನ ಫ್ರಿಡ್ಜ್‌ನಲ್ಲಿಟ್ಟಿದ್ದ ಮೀನು ತೆಗೆಯಲು ಹೋದಾಗ ಮೀನು ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಲಾ ಅವರ ಪುತ್ರ ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದರು.

ಕೊನೆಗೆ ಅನುಮಾನ ಬಂದ ಪೋಲೀಸರು ಸೂರಜ್(Suraj) ಎಂಬಾತನನ್ನು ಕರೆದು ವಿಚಾರಿಸಿದರು. ಆಗ ಆತ ಕುಡಿತಕ್ಕಾಗಿ ಅಂಜಲ್ ಮೀನನ್ನು ಕಳ್ಳತನ ಮಾಡಿ ಕದ್ದ 6500 ರೂ ಮೌಲ್ಯದ ಆ ಮೀನನ್ನು ಮದ್ಯಕ್ಕಾಗಿ ಕೇವಲ 140 ರೂ ಗೆ ಮಾರ್ಕೆಟ್ ಬಳಿಯ ಹೂವಿನ ವ್ಯಾಪಾರಿ ವಿಶಾಲ್ ಎಂಬಾತನಿಗೆ ಮಾರಾಟ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಆಗ ವಿಚಾರಣೆ ನಡೆಸಿದಾಗ ತಾನು ಕದ್ದ 6500 ರು. ಮೌಲ್ಯದ ಅಂಜಲ್ ಮೀನನ್ನು ಮದ್ಯಕ್ಕಾಗಿ ಕೇವಲ 140 ರು.ಗೆ ಮಾರ್ಕೆಟ್ ಬಳಿಯ ಹೂವಿನ ವ್ಯಾಪಾರಿ ವಿಶಾಲ್ ಎಂಬಾತನಿಗೆ ಮಾರಾಟ ಮಾಡಿದ್ದಾನೆ. ಈತನ ಹೇಳಿಕೆ ಆಧರಿಸಿ ಪೊಲೀಸರು ಮೀನು ಖರೀದಿಸಿದ್ದ ಹೂವಿನ ವ್ಯಾಪಾರಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು, ಆತ ಕೂಡ ಸತ್ಯ ಒಪ್ಪಿಕೊಂಡಿದ್ದಾನೆ. ಬಳಿಕ ಮೀನು ವ್ಯಾಪಾರಿ ಮಾಲಾ ಅವರಿಗೆ ಅಂಜಲ್ ಮೀನಿನ ನಿಜವಾದ ಮೌಲ್ಯವನ್ನು ನೀಡಲು ಒಪ್ಪಿಕೊಂಡಿದ್ದಾನೆ.

ಬಳಿಕ ಪೊಲೀಸರು ಮುಚ್ಚಳಿಕೆ ಬರೆಸಿ ಈ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿದ್ದಾರೆ. ಒಟ್ಟಿನಲ್ಲಿ ಅಂಜಲ್ ಮೀನು ಮಾಲಕ, ಕದ್ದವನು ಹಾಗೂ ಅದನ್ನು ತಿಂದವನ ನಡುವೆ ರಾಜಿ ಸಂಧಾನ ನಡೆದು ವಿವಾದ ಬಗೆಹರಿದ ವಿಚಿತ್ರ ಘಟನೆ ನಡೆದಿದೆ.

ಆಷಾಡ ಮಾಸದಲ್ಲಿ ಈ ನಿಯಮಗಳನ್ನು ತಪ್ಪದೇ ಪಾಲಿಸಿ!

Leave A Reply

Your email address will not be published.