Hassan: ಹಾಡಹಗಲೇ ಫೈರಿಂಗ್‌; ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಜಗಳ; ಒಂದು ಕೊಲೆ, ಇನ್ನೊಂದು ಆತ್ಮಹತ್ಯೆ

Share the Article

Hassan: ಹಾಡಹಗಲೇ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ನಡುವೆ ನಡೆದ ಜಗಳದಲ್ಲಿ ಒಬ್ಬ ವ್ಯಕ್ತಿ ಮತ್ತೋರ್ವನಿಗೆ ಶೂಟ್‌ ಮಾಡಿ ಕೊಲೆಗೈದು, ನಂತರ ತಾನೂ ಶೂಟ್‌ ಮಾಡಿಕೊಂಡು ಆತ್ಮಹತ್ಯೆ ಮಾಡಿರುವ ವರದಿಯಾಗಿದೆ.

ಹಾಸನದ ಹೊಯ್ಸಳನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಅಪರಿಚಿತರು ಬಂದು ಖಾಲಿ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ 40 ನಿಮಿಷಗಳ ಕಾಲ ಮಾತನಾಡಿದ್ದಾರೆ. ನಂತರ ಏಕಾಏಕಿ ಕಾರಿನ ಬಂದೂಕಿನಿಂದ ಫೈರಿಂಗ್‌ ಮಾಡಿದ ಸದ್ದು ಕೇಳಿದೆ.

ಬಂದೂಕಿನಿಂದ ಶಬ್ದ ಕೇಳಿದ ಜನರು ಶಾಕ್‌ಗೊಳಗಾಗಿದ್ದು, ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಬಂದು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಬೆಂಗಳೂರಿನ ಆಸಿಫ್‌ ಹಾಗೂ ಹಾಸನ ಶೌಕತ್‌ ಆಲಿ ಮೃತ ವ್ಯಕ್ತಿಗಳು ಎಂದು ಗುರುತಿಸಲಾಗಿದೆ. ಇವರಿಬ್ಬರು ರಿಯಲ್‌ಎಸ್ಟೇಟ್‌ ಉದ್ಯಮಿಗಳು.

ಹಾಸನದಲ್ಲಿ ಸೈಟ್‌ ನೋಡಲೆಂದು ಬಂದ ಇವರು ಕಾರಿನಲ್ಲಿ ಕುಳಿತು ಮಾತನಾಡಿದ್ದು, ನಂತರ ಜಗಳ ಪ್ರಾರಂಭವಾಗಿದೆ. ಬಂದೂಕು ಹೊಂದಿದ್ದ ವ್ಯಕ್ತಿ ಇನ್ನೋರ್ವರ ತಲೆಗೆ ಬಂದೂಕು ಇಟ್ಟು ಗುಂಡು ಹಾರಿಸಿದ್ದು, ನಂತರ ಕಾರಿನೊಳಗೆ ಕುಳಿತು ತಾನೂ ತಲೆಗೆ ಗುಂಡು ಹೊಡೆದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

Leave A Reply