Jio Customers: ಜಿಯೋ ಗ್ರಾಹಕರಿಗೆ ಬಂಪರ್ ಆಫ‌ರ್! ಇಲ್ಲಿದೆ 4 ರೀತಿಯ ನ್ಯೂ ರಿಚಾರ್ಜ್ ಪ್ಲಾನ್!

Jio Customers: ದೇಶದಲ್ಲಿ ರಿಲಯನ್ಸ್ ಜಿಯೋ(Reliance Jio) ಸಂಸ್ಥೆಯು ಆಕರ್ಷಕ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುವ ಮೂಲಕ ತನ್ನ ಇರುವಿಕೆಯನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ. ಹೌದು,  ಇದೀಗ ತನ್ನ ಗ್ರಾಹಕರಿಗಾಗಿ ಮತ್ತೊಂದು ಅದ್ಭುತ ಆಫರ್ ತಂದಿದೆ ಜಿಯೋ ನ ಈ ಪ್ಲಾನ್‌ಗಳು ಅತ್ಯುತ್ತಮ ಡೇಟಾ, ಧ್ವನಿ ಕರೆ ಮತ್ತು SMS ಸೌಲಭ್ಯಗಳನ್ನು ಸಹ ನೀಡುತ್ತವೆ ಇದು ಜಿಯೋ ಗ್ರಾಹಕರಿಗೆ ಉತ್ತಮ ಅವಕಾಶ ಆಗಿದೆ. ಸದ್ಯ ಈ ಕೆಳಗೆ ರಿಚಾರ್ಜ್ ಪ್ಲಾನ್ ಯಾವುದೆಂದು ತಿಳಿಯಿರಿ.

336 ದಿನಗಳ ವ್ಯಾಲಿಡಿಟಿಯ 895 ರೂ. ರೀಚಾರ್ಜ್ ಪ್ಲಾನ್:

ನೀವು ಜಿಯೋ ಸಂಸ್ಥೆಯ 895ರೂ. ರೀಚಾರ್ಜ್ ಮಾಡಿದಲ್ಲಿ ಒಟ್ಟು 336 ದಿನಗಳ ವ್ಯಾಲಿಡಿಟಿ ಲಭ್ಯವಾಗಲಿದೆ. ಜಿಯೋಫೋನ್ ಬಳಕೆದಾರರಿಗೆ ಮಾತ್ರ ಈ ಪ್ಲಾನ್ ಲಭ್ಯವಿದ್ದು,  ಈ ಪ್ಲಾನ್‌ನಲ್ಲಿ ಒಟ್ಟು 24GB ಡೇಟಾ ಸೌಲಭ್ಯ ಲಭ್ಯವಿದ್ದು ಪ್ರತಿ 28 ದಿನಗಳಿಗೆ 2GB ಡೇಟಾ ನೀಡಲಾಗುತ್ತದೆ. ಜೊತೆಗೆ, ಅನಿಯಮಿತ ಧ್ವನಿ ಕರೆಗಳ (Unlimited voice call) ಕೂಡಾ ಲಭ್ಯವಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಯಲ್ಲಿ ಪ್ರತಿ 28 ದಿನಗಳಿಗೊಮ್ಮೆ 50 SMS ಸೌಲಭ್ಯವೂ ಲಭ್ಯವಿದೆ.

Government Jobs For 10th Pass Students: SSLC ಆದವರಿಗೆ ಕರ್ನಾಟಕ ಸರ್ಕಾರದ ಹುದ್ದೆಗಳಲ್ಲಿ ಅವಕಾಶ! ಯಾವೆಲ್ಲಾ ಹುದ್ದೆಗೆ ಅರ್ಜಿ ಹಾಕಬಹುದು ಇಲ್ಲಿದೆ ಮಾಹಿತಿ!

ಇದರ ಜೊತೆಗೆ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ (Jio Customers) ವಿಭಿನ್ನ ಅಗತ್ಯಗಳನ್ನು ಪೂರೈಸುವ ಇತರೆ ಪ್ರಮುಖ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಪ್ರತಿಯೊಂದೂ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡೇಟಾ, ಧ್ವನಿ ಕರೆ, ಮತ್ತು ಎಸ್‌ಎಮ್‌ಎಸ್‌ ಸೌಲಭ್ಯಗಳನ್ನು ಒದಗಿಸುತ್ತವೆ.

28 ದಿನಗಳ ವ್ಯಾಲಿಡಿಟಿಯ 222 ರೂ. ರೀಚಾರ್ಜ್ (222 Rs. Recharge Plan):

222 ರೂ. ರೀಚಾರ್ಜ್ ಮಾಡಿದ ಗ್ರಾಹಕರು 28 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ. ಪ್ರತಿದಿನ 2GB ಡೇಟಾ ನೀಡುವ ಈ ಪ್ಲಾನ್ ಒಟ್ಟು 56 GB ಡೇಟಾ ಸೌಲಭ್ಯಗಳನ್ನು ಒದಗಿಸುತ್ತದೆ. ಜೊತೆಗೆ, ಅನಿಯಮಿತ ಧ್ವನಿ ಕರೆ ಸೌಲಭ್ಯ ಮತ್ತು ಪ್ರತಿ ದಿನ 100 SMS ಗಳನ್ನು ಉಚಿತವಾಗಿ ಕಳುಹಿಸಬಹುದು.

28 ದಿನಗಳ ವ್ಯಾಲಿಡಿಟಿಯ 186 ರೂ. ರೀಚಾರ್ಜ್ ಪ್ಲಾನ್ (186 Rs. Recharge Plan:

186 ರೂ. ರೀಚಾರ್ಜ್ ಮಾಡಿದ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ, ಆದರೆ ಇದು ಪ್ರತಿದಿನ 1GB ಡೇಟಾ ನೀಡುತ್ತದೆ, ಇದು ಒಟ್ಟು 28 GB ಆಗುತ್ತದೆ. ಇಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ಪ್ರತಿದಿನ 100 SMS ಗಳ ಸೌಲಭ್ಯ ಪಡೆಯಬಹುದಾಗಿದೆ.

28 ದಿನಗಳ ವ್ಯಾಲಿಡಿಟಿಯ 152 ರೂ. ರೀಚಾರ್ಜ್ ಪ್ಲಾನ್:

ಕಡಿಮೆ ಡೇಟಾ ಬಳಕೆಯನ್ನು ಬಯಸುವ ಗ್ರಾಹಕರಿಗಾಗಿ 152 ರೂ. ಪ್ಲಾನ್ ಒದಗಿಸಲಾಗಿದ್ದು, ಇದು 28 ದಿನಗಳ ವ್ಯಾಲಿಡಿಟಿಯೊಂದಿಗೆ ಒಟ್ಟು 14 GB ಯಲ್ಲಿ ಪ್ರತಿದಿನ 0.5GB ಡೇಟಾ ಒದಗಿಸುತ್ತದೆ. ಇನ್ನು ಅನಿಯಮಿತ ಧ್ವನಿ ಕರೆಗಳ ಜೊತೆಗೆ 28 ದಿನಗಳ ಅವಧಿಯಲ್ಲಿ 300 SMS ಗಳ ಸೌಲಭ್ಯವನ್ನು ನೀಡುತ್ತದೆ.

Karkala: 6,500 ರೂ ಬೆಲೆಯ ಅಂಜಲ್ ಮೀನು ಕದ್ದು 140 ರೂ ಗೆ ಮಾರಿದ ಕುಡುಕ – ಕೊನೆಗೆ ಮೀನು ಮಾಲಿಕ, ಕದ್ದವ ಹಾಗೂ ತಿಂದವನ ನಡುವೆ ನಡೆಯಿತು ರಾಜಿ ಸಂಧಾನ !!

Leave A Reply

Your email address will not be published.