Viral Video: ಸಿಗರೇಟ್ ಸೇದುತ್ತಾ ಮಗುವಿನ ಜೊತೆ ರೀಲ್ಸ್ ಮಾಡಿದ ಮಹಾತಾಯಿ

Share the Article

Viral Video: ಸೋಷಿಯಲ್‌ ಮೀಡಿಯಾದಲ್ಲಿ ದೊರಕುವ ಹಠಾತ್‌ ಜನಪ್ರಿಯತೆ ಮತ್ತು ಸಂಭಾವನೆಗಾಗಿ ಮಹಿಳೆಯರೇ ಮರುಳಾಗುತ್ತಿರುವುದು ದುರಂತ. ಅದರಲ್ಲೂ ಮನೆಯಲ್ಲಿ ಕುಳಿತ ತಾಯಂದಿರು ಕೂಡಾ ತಮ್ಮ ಮಕ್ಕಳನ್ನು ಬಳಸಿಕೊಂಡು ವಿಧವಿಧವಾದ ರೀಲ್ಸ್‌ ಮೂಲಕ ಎಲ್ಲ ವರ್ಗದವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಈ ವೀಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  ಈ ವಿಡಿಯೋದಲ್ಲಿ ಮಹಿಳೆಯು ಮಗುವನ್ನು ಹೊತ್ತುಕೊಂಡು, ಕೈಯಲ್ಲಿ ಸಿಗರೇಟು ಹಿಡಿದುಕೊಂಡು ಬಾಲಿವುಡ್‌ನ ಹಳೆಯ ಹಾಡಿಗೆ ಡ್ಯಾನ್ಸ್‌ ಮಾಡಿದ್ದಾಳೆ. ಈ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಮಹಿಳೆಯ ವಿರುದ್ಧ ಸೂಕ್ರ ಕ್ರಮಕ್ಕೆ ಜನ ಆಗ್ರಹಿಸಿದ್ದಾರೆ.

ಇದೇ ರೀತಿಯ ಇನ್ನೊಂದು ಘಟನೆಯಲ್ಲಿ,  ಒಂದು ರೀಲ್ಸ್‌ ಘಟನೆಗೆ 20 ತಿಂಗಳ ಪುಟ್ಟ ಕಂದನ ಬಳಕೆ ಮಾಡಿದ ತಾಯಿ ಮಗುವಿಗೆ ಸಿಗರೇಟ್‌, ಮದ್ಯಪಾನ ಮಾಡಲು ಒತ್ತಾಯ ಮಾಡುವ ದೃಶ್ಯ ವೈರಲ್‌ ಆಗಿದೆ.

ಈ ಹೀನಾಯಕರವಾದ, ದುರದೃಷ್ಟ ಘಟನೆ ನಡೆದಿರುವುದು ಅಸ್ಸಾಂನ ಸಿಲ್ಚಾರ್‌ನ ಚೆಂಗ್‌ಕುರಿಯಲ್ಲಿ. ಇದೀಗ ಅಲ್ಲಿನ ಸ್ಥಳೀಯ ಚೈಲ್ಡ್‌ ಹೆಲ್ಪ್‌ ಲೈನ್‌ಸೆಲ್‌ ಫೋಟೋಗಳೊಂದಿಗೆ ಮಹಿಳೆಯ ವಿರುದ್ಧ ದೂರು ದಾಖಲು ಮಾಡಿದೆ. ನಂತರ ಪೊಲೀಸರು ಮಹಿಳೆಯ ಮನೆಗೆ ಹೋಗಿ, ಮಗುವನ್ನು ರಕ್ಷಣೆ ಮಾಡಿ, ವಿಚಾರಣೆಗೆಂದು ತಾಯಿಯನ್ನು ವಶಕ್ಕೆ ಪಡೆದಿದ್ದಾರೆ.

ಮಗುವಿಗೆ ಸಿಗರೇಟ್‌ ಮತ್ತು ಮದ್ಯ ಕುಡಿಸಿ ತಾಯಿಯೊಬ್ಬಳು ಬುಧವಾರ ರಾತ್ರಿ ಈ ಕೃತ್ಯ ಮಾಡಿರುವುದಾಗಿ ಪುಟ್ಟ ಕಂದನ ಮೇಲೆ ದೌರ್ಜನ್ಯ ಎಸಗಿರುವುದರಿಂದ ಪೊಲೀಸರು ಸೂಕ್ತ ಕ್ರಮ ಕೈಗೊಂಡು ಮಗುವನ್ನು ರಕ್ಷಣೆ ಮಾಡಿದ್ದಾರೆ. ದೃಶ್ಯ, ಪುರಾವೆಗಳನ್ನು ಪರಿಶೀಲನೆ ಮಾಡಿ ವಿಚಾರಣೆಗೆ ಒಳಪಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ.

 

Leave A Reply