Home Crime Renuka Swamy: ರೇಣುಕಾಸ್ವಾಮಿ ಕೊಲೆ ಪ್ರಕರಣ; ಸ್ವಇಚ್ಛಾ ಹೇಳಿಕೆ ದಾಖಲು ಮಾಡಿದ ನಟ ದರ್ಶನ್‌

Renuka Swamy: ರೇಣುಕಾಸ್ವಾಮಿ ಕೊಲೆ ಪ್ರಕರಣ; ಸ್ವಇಚ್ಛಾ ಹೇಳಿಕೆ ದಾಖಲು ಮಾಡಿದ ನಟ ದರ್ಶನ್‌

Agriculture department Ambassador

Hindu neighbor gifts plot of land

Hindu neighbour gifts land to Muslim journalist

Renuka Swamy: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರು ಕಾಮಾಕ್ಷಿಪಾಳ್ಯ ಪೊಲೀಸರ ವಶದಲ್ಲಿದ್ದಾರೆ. ಒಂದು ವಾರದಿಂದ ಈ ಕೊಲೆ ಪ್ರಕರಣದ ಕುರಿತು ಸತತ ವಿಚಾರಣೆ, ತನಿಖೆಗಳು ನಡೆಯುತ್ತಲೇ ಇದೆ. ನ್ಯಾಯಾಲಯದ ಆದೇಶದಂತೆ ದರ್ಶನ್‌ ಪೊಲೀಸ್‌ ಠಾಣೆಯಲ್ಲಿ ಭೇಟಿ ಮಾಡಿ ಪ್ರಕರಣದ ಕುರಿತು ಮಾತನಾಡಿದ್ದಾರೆ. ಈ ನಡುವೆ ದರ್ಶನ್‌ ಪೊಲೀಸರ ಮುಂದೆ ಸ್ಚ-ಇಚ್ಛಾ ಹೇಳಿಕೆ ದಾಖಲು ಮಾಡಿದ್ದಾರೆ ಎನ್ನಲಾಗುತ್ತಿದೆ.

Puttur: ಕಾಂತಮಂಗಲದಲ್ಲಿ ವ್ಯಕ್ತಿಯ ಕೊಲೆ : ಆರೋಪಿ ಎಡಮಂಗಲ ನಿವಾಸಿಯ ಬಂಧನ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಮ್ಮ ಪಾತ್ರದ ಬಗ್ಗೆ ಇಂಚಿಂಚೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಕೊಲೆಯಲ್ಲಿ ತಾವು ಭಾಗಿ ಆಗಿರುವ ವಿಷಯದಿಂದ ಹಿಡಿದು ತಮ್ಮ ಹೆಸರು ಈ ಪ್ರಕರಣದಲ್ಲಿ ಬರಬಾರದು ಎಂದು ತಡೆಯಲು ಮಾಡಿದ್ದ ಪ್ರಯತ್ನ, ಪ್ರದೋಶ್‌ಗೆ 30 ಲಕ್ಷ ರೂಪಾಯಿ ಅನಂತರ ಪ್ರಭಾವಿಗಳನ್ನು ಸಂಪರ್ಕ ಮಾಡಿದ್ದು, ಈ ಕುರಿತು ಎಲ್ಲವನ್ನೂ ಹೇಳಿರುವ ಕುರಿತು ವರದಿಯಾಗಿದೆ.

ಸ್ವಇಚ್ಛಾ ಹೇಳಿಕೆ ದಾಖಲು ಮಾಡಿದರೆ ಶಿಕ್ಷೆಯ ಪ್ರಮಾಣ ಕಡಿಮೆ ಆಗಬಹುದು ಎಂಬ ನಿರೀಕ್ಷೆಯಿಂದ ಪೊಲೀಸ್‌ ಕಸ್ಟಡಿ ಆದಷ್ಟು ಬೇಗ ಕೊನೆಗೊಳಿಸುವ ನಿಟ್ಟಿನಲ್ಲಿ ನಟ ದರ್ಶನ್‌ ಈ ರೀತಿ ಮಾಡಿಬಹುದು ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ಬಂಧಿತರ ಸಂಖ್ಯೆ 20ಕ್ಕೆ ಏರಿದೆ. ದರ್ಶನ್‌ ಹಾಗೂ ಇತರೆ ಆರೋಪಿಗಳ ಪೊಲೀಸ್‌ ಕಸ್ಟಡಿ ಜೂನ್‌ 20 ಕ್ಕೆ (ನಾಳೆ) ಅಂತ್ಯವಾಗಲಿದೆ. ನಾಳೆ ನ್ಯಾಯಾಲಯದ ಆದೇಶದಂತೆ ದರ್ಶನ್‌ ಹಾಗೂ ಇತರ ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ಒಳಪಡಬೇಕಾಗಬಹುದು.

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ತನಿಖೆಯಲ್ಲಿ ಬಯಲಾಯ್ತು ರೌಡಿಗಳ ಸಂಪರ್ಕದ ಲಿಂಕ್‌