HSRP Number Plate: ವಾಹನ ಸವಾರರಿಗೆ ಗುಡ್‌ ನ್ಯೂಸ್! ಇನ್ನೂ HSRP ನಂಬರ್‌ ಪ್ಲೇಟ್‌ ಅಳವಡಿಕೆ ಮಾಡದವರಿಗೆ ಕೊನೆಯದಾಗಿ ಗಡುವು ವಿಸ್ತರಣೆ!

HSRP Number Plate: ಹಲವು ತಾಂತ್ರಿಕ ಕಾರಣಗಳಿಂದಾಗಿ ಇನ್ನೂ HSRP ನಂಬರ್​ಪ್ಲೇಟ್​ ಅಳವಡಿಸದ ವಾಹನಗಳ ಮಾಲೀಕರಿಗೆ ತುಸು ನಿರಾಳ ಸಿಕ್ಕಿದೆ. ಹೌದು, 2019ಕ್ಕಿಂತ ಹಿಂದೆ ಮಾರುಕಟ್ಟೆಗೆ ಇಳಿದ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಸಂಖ್ಯೆ ಫಲಕ (HSRP Number Plate) ಕಡ್ಡಾಯವಾಗಿ ಅಳವಡಿಸಬೇಕೆಂಬ ಗಡುವನ್ನು ಸೆಪ್ಟೆಂಬರ್‌ 15ರವರೆಗೆ ವಿಸ್ತರಣೆ ಮಾಡಲಾಗಿದೆ. ಜುಲೈ 4ರವರೆಗೆ ವಿಸ್ತರಣೆ ಮಾಡಲಾಗಿದ್ದ ಅವಧಿಯನ್ನು ಈಗ ರಾಜ್ಯ ಸರ್ಕಾರವು (Karnataka Government) ಮತ್ತೆ ವಿಸ್ತರಣೆ (HSRP Number Plate Deadline) ಮಾಡಿದೆ.

“ಒಳಉಡುಪಿನಿಂದ ಗಂಡನನ್ನು ಸುಲಭವಾಗಿ ವಶೀಕರಣ ಮಾಡಬಹುದು” ಎಕ್ಸ್ ಪರ್ಟ್ ಮಹಿಳೆ ಒಬ್ಬರ ವಶೀಕರಣದ ಟಿಪ್ಸ್!

ಅತಿ ಸುರಕ್ಷಿತ ನೋಂದಣಿ ಸಂಖ್ಯೆ ಫಲಕ ಅಳವಡಿಕೆ ಗಡುವು ಕುರಿತು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು “ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಸೆಪ್ಟೆಂಬರ್‌ 15ರವರೆಗೆ ಕಾಲಾವಕಾಶ ನೀಡಲಾಗಿದೆ. ಸೆಪ್ಟೆಂಬರ್‌ 15ರ ಬಳಿಕ ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಗಡುವನ್ನು ವಿಸ್ತರಣೆ ಮಾಡುವುದಿಲ್ಲ” ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.

Vidyadhan Scholarship: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: 75 ಸಾವಿರ ವಿದ್ಯಾರ್ಥಿ ವೇತನ! ಕೂಡಲೇ ಈ ರೀತಿ ಅರ್ಜಿ ಸಲ್ಲಿಸಿ

ಈಗಾಗಲೇ ರಾಜ್ಯದಲ್ಲಿ 2019ರ ಏಪ್ರಿಲ್‌ 1ಕ್ಕಿಂತ ಮುನ್ನ ನೋಂದಣಿಯಾದ ಎಲ್ಲ ಮಾದರಿಯ ವಾಹನಗಳಿಗೆ ಮೂಲ ಉಪಕರಣ ತಯಾರಕ (ಓಇಎಂ) ಅಧಿಕೃತ ಡೀಲರ್‌ಗಳ ಮೂಲಕ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಲು ರಾಜ್ಯ ಸರಕಾರ 2023ರ ಆಗಸ್ಟ್‌ 17ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ, ವಿತರಣೆ, ಅಳವಡಿಕೆ ಸೇರಿದಂತೆ ನಾನಾ ಸಮಸ್ಯೆಗಳಿಂದ ಈ ಯೋಜನೆಗೆ ಸಮಸ್ಯೆಯಾಗುತ್ತಿದೆ. ಅದಕ್ಕಾಗಿ ಎರಡು ಬಾರಿ ಗಡುವು ವಿಸ್ತರಿಸಿ, ಇದೀಗ ಕೊನೆಯ ಬಾರಿ ಸುರಕ್ಷಿತ ನಂಬರ್​ ಪ್ಲೇಟ್ ಅಳವಡಿಸಲು ಗಡುವು ವಿಸ್ತರಣೆ ಮಾಡಲಾಗಿದೆ.

Leave A Reply

Your email address will not be published.