Crime News: ಪತಿಯನ್ನು ಕೊಲ್ಲಲು ಎರಡೆರಡು ಪ್ಲಾನ್ ! ಬದುಕುಳಿದ ಪತಿಯನ್ನು ಕೊನೆಗೂ ಭೀಕರವಾಗಿ ಕೊಂದ ಪತ್ನಿ!

Crime News: ಪತ್ನಿಗೆ ಪತಿಯನ್ನು ಕೊಲ್ಲಲೇ ಬೇಕೆಂಬ ಉದ್ದೇಶ ಬಲವಾಗಿ ಕೂತಿತ್ತು. ಆದ್ರೆ ಕಾನೂನಿನಿಂದ ತಪ್ಪಿಸಲು ಆಕೆ ಮಾಡಿದ ಪ್ಲಾನ್ ಪ್ಲಾಪ್ ಆಗಿದೆ ಎಂದು, ಗುಂಡು ಹಾರಿಸಿ ಪತಿಯನ್ನು ಹತ್ಯೆ ಮಾಡಿದ್ದಾಳೆ. ಹೌದು, ಗೆಳೆಯನ ಜೊತೆ ಸೇರಿಕೊಂಡು ಅಪಘಾತ ನಡೆಸಿ ಪತಿಯನ್ನು ಕೊಲ್ಲುವ ಮೊದಲ ಯತ್ನ ವಿಫಲವಾದ ನಿಟ್ಟಿನಲ್ಲಿ ಕೊನೆಗೆ ಗೆಳೆಯನ ಜೊತೆ ಸೇರಿಕೊಂಡು ಗುಂಡು ಹಾರಿಸಿ ಪತಿಯನ್ನು ಹತ್ಯೆಗೈದ ಭಯಾನಕ ಘಟನೆ (Crime News) ಹರಿಯಾಣದ ಪಾಣಿಪತ್‌ನಲ್ಲಿ ನಡೆದಿದೆ.

ನಿಧಿ ಎಂಬಾಕೆಗೆ ವಿನೋದ್ ಬರಾಡ ಜೊತೆಗೆ ವಿವಾಹ ಆಗಿತ್ತು. ಆದರೆ ನಿಧಿಗೆ ತನ್ನ ಪತಿ ವಿನೋದ್ ಬರಾಡಜೊತೆಗೆ ಬಾಳ್ವೆ ನಡೆಸಲು ಇಷ್ಟವಿರಲಿಲ್ಲ. ಅದಕ್ಕಾಗಿ ಸುಮಿತ್ ಎನ್ನುವ ಗೆಳೆಯನ ಸಹವಾಸ ಮಾಡಿದ್ದು, ಆತ ನಿಧಿ ಜೊತೆ ಸಲುಗೆಯಿಂದ ನಡೆದುಕೊಳ್ಳುತ್ತಿದ್ದ. ಇವರಿಬ್ಬರ ಸಲುಗೆಗೆ ವಿನೋದ್ ಅಡ್ಡಿಯಾಗುತ್ತಾನೆ ಎಂದು ಇವರಿಬ್ಬರು ಸೇರಿ ವಿನೋದ್ ಬರಾಡನನ್ನು ವಾಹನ ಡಿಕ್ಕಿ ಹೊಡೆದು ಸಾಯಿಸುವ ಯೋಜನೆ ಮಾಡಿದ್ದರು.

ಅದರಂತೆ 2021 ರ ಅಕ್ಟೋಬರ್ 5 ರಂದು ಪಂಜಾಬ್ ನೊಂದಾಯಿತ ವಾಹನವೊಂದು ವಿನೋದ್ ಸಂಚರಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ವಿನೋದ್ ತನ್ನೆರಡು ಕಾಲುಗಳನ್ನು ಕಳೆದುಕೊಂಡು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಆದರೂ ಅದೃಷ್ಟ ದಿಂದ ಬದುಕಿಕೊಂಡ ಇದರಿಂದ ಸುಮಿತ್ ಸುಮ್ಮನಾಗಲಿಲ್ಲ ತಾವು ಮಾಡಿದ ಪ್ಲಾನ್ ಕೈ ಕೊಟ್ಟ ಸಿಟ್ಟಿನಲ್ಲಿ ಡಿಸೆಂಬರ್ 15, 2021 ರಂದು ಸುಮಿತ್ ನೇರವಾಗಿ ನಿಧಿ ಅವರ ಮನೆಗೆ ದಾಳಿ ಮಾಡಿ ಬೆಡ್ ರೂಮ್ ನಲ್ಲಿ ಮಲಗಿದ್ದ ನಿಧಿ ಅವರ ಪತಿ ವಿನೋದ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ.

Physical relationship : ಪುರುಷರೆ, ಲೈಂಗಿಕ ಸಾಮರ್ಥ್ಯ ಹೆಚ್ಚಾಗಬೇಕೆ ?! ಇದೊಂದು ಹಣ್ಣು ತಿನ್ನಿ ಸಾಕು !!

ಸದ್ಯ ಘಟನೆ ಸಂಬಂಧ ಹತ್ಯೆಯಾದ ವಿನೋದ್ ಅವರ ಚಿಕ್ಕಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರಂತೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೊದಲು ಅಪಘಾತ ನಡೆಸಿದ ವಾಹನ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಆಗ ಸುಮಿತ್ ಹಣ ನೀಡಿ ವಿನೋದ್ ಅವರನ್ನು ಕೊಲ್ಲಲು ಹೇಳಿದ್ದರು ಎಂದು ಪೊಲೀಸರ ಎದುರು ಸತ್ಯ ಹೇಳಿಕೊಂಡಿದ್ದಾನೆ ಅದರಂತೆ ಪೊಲೀಸರು ಸುಮಿತ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತಾನು ಹಾಗೂ ನಿಧಿ ಪರಸ್ಪರ ಪ್ರೀತಿಸುತ್ತಿದ್ದು ಇದರಿಂದ ಇಬ್ಬರು ಸೇರಿ ವಿನೋದ್ ನನ್ನ ಹತ್ಯೆ ನಡೆಸಲು ಸಂಚು ರೂಪಿಸಿದೆವು ಎಂದು ಹೇಳಿದ್ದಾನೆ.

ಆದರೆ ವಾಹನ ಅಪಘಾತ ನಡೆಸಿದರು ವಿನೋದ್ ಸಾಯದೆ ಇದ್ದಾಗ ನಾನೆ ಮನೆಗೆ ಪ್ರವೇಶಿಸಿ ವಿನೋದ್ ಮೇಲೆ ಗುಂಡು ಹಾರಿಸಿ ಹತ್ಯೆಗೈದಿರುವುದಾಗಿ ಹೇಳಿಕೊಂಡಿದ್ದಾನೆ. ಸದ್ಯ ಕೊಲೆ

ಪ್ರಕರಣಕ್ಕೆ ಸಂಬಂಧಿಸಿ ಇದೀಗ ವಿನೋದ್ ಪತ್ನಿ ನಿಧಿ ಹಾಗೂ ಪ್ರಿಯಕರ ಸುಮಿತ್ ಶಿಕ್ಷೆಗೆ ಗುರಿಯಾಗಿದ್ದಾರೆ.

Darshan property: ಪೋಲೀಸರ ಅತಿಥಿ ಆಗಿರೋ ದರ್ಶನ್ ಎಷ್ಟು ಕೋಟಿ ಒಡೆಯ ?!

Leave A Reply

Your email address will not be published.