Centipede: ಶತಪದಿ ಹುಳು ಮನೆಯ ಈ ದಿಕ್ಕಿನಲ್ಲಿ ಕಾಣಿಸಿದರೆ ಶುಭವೋ, ಅಶುಭವೋ ಎಂದು ಇಲ್ಲಿ ತಿಳಿಯಿರಿ!

Centipede: ಶತಪದಿ ಅಥವಾ ಜರಿ ಹುಳದ ಬಗ್ಗೆ ಕೇಳಿರಬಹುದು, ನೋಡಿರಬಹುದು. ಈ ಜೀವಿಯು ಆಗಾಗ ಮನೆ ಒಳಗೆ, ಸುತ್ತಮುತ್ತ ಕಾಣಸಿಗುತ್ತದೆ. ಈ ಜೀವಿಯನ್ನು ಕಂಡಾಗ ಅನೇಕ ಜನರು  ಭಯಪಡುವುದೇ ಹೆಚ್ಚು. ಪಕ್ಕನೆ ನೋಡಿದಾಗ ಮೈ ಜುಮ್ ಎನ್ನುತ್ತೆ. ಆದರೆ ವಾಸ್ತು ಪ್ರಕಾರ ಶತಪದಿ (Centipede) ಅದೃಷ್ಟ ಅಥವಾ ದುರಾದೃಷ್ಟ ಎರೆಡರ ಸಂಕೇತವಾಗಿದೆ.

ಅಲ್ಲದೇ ಶತಪದಿ ಕೀಟವನ್ನ ಲಕ್ಷ್ಮಚೇಳುಗಳು ಎಂದೂ ಸಹ ಕರೆಯಲಾಗುತ್ತದೆ.

ನಂಬಿಕೆಗಳ ಪ್ರಕಾರ ಶತಪದಿ ಹುಳವನ್ನು ರಾಹುವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದ ಅದು ಮನೆಯಲ್ಲಿ ಕಂಡು ಬಂದರೆ ಅದನ್ನು ಕೊಲ್ಲದೆ ಮನೆಯಿಂದ ಹೊರಗೆ ಎಸೆಯಬೇಕು ಎನ್ನಲಾಗುತ್ತದೆ. ಏಕೆಂದರೆ ಶತಪದಿವನ್ನು ಕೊಲ್ಲುವುದರಿಂದ ಜಾತಕದಲ್ಲಿ ರಾಹುವಿನ ಸ್ಥಾನ ದುರ್ಬಲವಾಗುತ್ತದೆ. ಅಲ್ಲದೇ, ಇದು ಕಷ್ಟಗಳನ್ನ ಜಾಸ್ತಿ ಮಾಡುತ್ತದೆ ಎನ್ನಲಾಗುತ್ತದೆ.

ಮನೆಯ ಕೆಲ ಭಾಗದಲ್ಲಿ ಈ ಶತಪದಿ ಕಂಡರೆ ಅದೃಷ್ಟ ಎನ್ನಲಾಗುತ್ತದೆ, ಇನ್ನೂ ಕೆಲವೆಡೆ ಇದ್ದರೆ ಅದು ಬಹಳ ಅಶುಭದ ಸಂಕೇತ ಎಂದೂ ಸಹ ಹೇಳಲಾಗುತ್ತದೆ. ಇನ್ನು ವಾಸ್ತು ಪ್ರಕಾರ ಮನೆಯ ನೆಲದ ಮೇಲೆ ಶತಪದಿ ಹರಿದಾಡುತ್ತಿರುವುದನ್ನು ನೋಡಿದರೆ ಮನೆಯಲ್ಲಿ ವಾಸ್ತು ದೋಷವಿದೆ ಎಂದು ಅರ್ಥ. ಪದೇ ಪದೇ ಮನೆಯ ಒಳಗೆ ನೆಲದ ಮೇಲೆ ಇದ್ದರೆ, ಅದನ್ನು ಎತ್ತಿ ಮನೆಯ ಹೊರಗೆ ಎಸೆಯಿರಿ.

ಇನ್ನು ನಿಮ್ಮ ಪೂಜೆಯ ಮನೆಯಲ್ಲಿ ಶತಪದಿ ಹರಿದಾಡುವುದು ಬಹಳ ಒಳ್ಳೆಯ ಸಂಕೇತ ಎನ್ನಲಾಗುತ್ತದೆ. ಇದು ಅದೃಷ್ಟವನ್ನ ಹೆಚ್ಚು ಮಾಡುತ್ತದೆ ಎನ್ನುವ ನಂಬಿಕೆ ಇದೆ. ಇದರ ಜೊತೆಗೆ ಬೆಳಗ್ಗೆ ಕಾಣಿಸಿದ ಶತಪದಿ ಕೆಲ ಹೊತ್ತಿನಲ್ಲೇ ಮಾಯವಾದರೆ ನಿಂತು ಹೋಗಿದ್ದ ಕೆಲಸಗಳು ಪೂರ್ಣವಾಗುತ್ತದೆ ಹಾಗೂ ಯಶಸ್ಸು ಸಿಗುತ್ತದೆ ಎನ್ನಲಾಗುತ್ತದೆ.

ಇನ್ನು ಅಡುಗೆ ಮನೆಯಲ್ಲಿ ಈ ಹುಳು ಕಾಣಿಸಿದರೆ ಅದೂ ಸಹ ಅಶುಭದ ಸಂಕೇತ ಎನ್ನಲಾಗುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ಹಾಗೂ ವಾಸ್ತು ಸಂಬಂಧಿತ ತೊಂದರೆಗಳು ಸಹ ಬರುತ್ತದೆ ಎನ್ನಲಾಗುತ್ತದೆ. ಹಾಗಾಗಿ ಅಡುಗೆ ಮನೆಯಲ್ಲಿ ಈ ಹುಳು ಕಾಣಿಸಿದರೆ ಅದನ್ನ ಎಸೆಯುವುದು ಮಾತ್ರವಲ್ಲದೇ, ಅಡುಗೆ ಮನೆಯನ್ನು ಸಹ ಒಮ್ಮೆ ಸ್ವಚ್ಛ ಮಾಡುವುದು ಉತ್ತಮ.

ವಾಸ್ತು ಪ್ರಕಾರ, ಮುಖ್ಯ ಬಾಗಿಲು, ಶೌಚಾಲಯ ಅಥವಾ ಮೆಟ್ಟಿಲುಗಳ ಹೊಸ್ತಿಲಲ್ಲಿ ಶತಪದಿ ಓಡಾಡುತ್ತಿದ್ದರೆ ಇದು ರಾಹುವಿನ ಕೆಟ್ಟ ಸೂಚನೆಯ ಸಂಕೇತವಾಗಿದೆ. ಹಾಗಾಗಿ ಈ ರೀತಿ ಲಕ್ಷಣಗಳು ಕಾಣಿಸಿದ್ರೆ ಮುಂದಿನ ದಿನಗಳಲ್ಲಿ ನಿಮ್ಮ ಆರೋಗ್ಯ ಏರುಪೇರು ಆಗುವ ಸಂಭವ ಇರುತ್ತದೆ.

 

Leave A Reply

Your email address will not be published.