KSRTC: ಕೆಎಸ್ಆರ್ಟಿಸಿ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ! ರಸ್ತೆಗೆ ಇಳಿಯಲಿದೆ ಸಾವಿರಗಳಷ್ಟು ಹೊಸ ಬಸ್!
KSRTC: ಈಗಾಗಲೇ ಹಲವು ಕಡೆ ದಿನ ನಿತ್ಯ ಅಗತ್ಯ ಪ್ರಯಾಣಕ್ಕೆ ಬಸ್ ಗಳ ಕೊರತೆ ಇದ್ದು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಂದ ಹೆಚ್ಚಿನ ಬಸ್‌ಗಳ ನಿಯೋಜನೆಗೆ ಸರ್ಕಾರಕ್ಕೆ ಬೇಡಿಕೆ ಬಂದಿರುವ ಹಿನ್ನೆಲೆ ಇದರಿಂದ 300ಕ್ಕೂ ಹೆಚ್ಚಿನ ಹೊಸ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸೇವೆ ಆರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ನಿರ್ಧಾರ ಮಾಡಿದೆ. ಹೌದು, ಕೆಎಸ್ಆರ್ಟಿಸಿ ಅಂಬಾರಿ, ಐರಾವತ, ಪಲ್ಲಕ್ಕಿ ಸೇರಿದಂತೆ ಸಾವಿರ ಬಸ್‌ಗಳನ್ನು ರೋಡಿಗಿಳಿಸಲು ಸರ್ಕಾರ ಪ್ಲಾನ್ ಮಾಡುತ್ತಿದೆ.
ಈಗಾಗಲೇ ಶಾಲೆ-ಕಾಲೇಜುಗಳು ಹೆಚ್ಚಿರುವ ಮಾರ್ಗಗಳನ್ನು ಕೆಎಸ್ಆರ್ಟಿಸಿ ಗುರುತಿಸಿ, ಅಂತಹ ಭಾಗಗಳಿಗೆ ಹೆಚ್ಚುವರಿ ಅಥವಾ ಹೊಸದಾಗಿ ಬಸ್ ಸೇವೆ ಆರಂಭಿಸಲು ಸಿದ್ದತೆ ನಡೆಸಿದೆ. ಕೆಎಸ್ಆರ್ಟಿಸಿಗೆ ಸೇರ್ಪಡೆಯಾಗಿರುವ 814 ಬಸ್‌ಗಳ ಪೈಕಿ 500 ಬಸ್‌ಗಳನ್ನು ನಿಯೋಜಿಸಲು ನಿರ್ಧಾರ ಮಾಡಲಾಗಿದೆ.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಈ ಕುರಿತು, ವಿಭಾಗೀಯ ಮಟ್ಟದಲ್ಲಿ ಗುರುತಿಸಲಾಗಿರುವ ಹೊಸ ಮಾರ್ಗಗಳಲ್ಲಿ ಮುಂದಿನ 3 ತಿಂಗಳಲ್ಲಿ ಸೇವೆ ಆರಂಭ ಮಾಡಲಾಗುತ್ತದೆ. ಸದ್ಯ ಬಸ್ ಸೇವೆ ಅವಶ್ಯಕತೆಯಿರುವ ಮಾರ್ಗಗಳ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಕೆಎಸ್ಆರ್ಟಿಸಿ ವ್ಯಾಪ್ತಿಯಲ್ಲಿ ಬಸ್‌ಗಳ ಕೊರತೆ ನೀಗಿಸುವ ಸಲುವಾಗಿ ಹೊಸ ಬಸ್ ಖರೀದಿ ಮಾಡಲಾಗುತ್ತಿದ್ದು, ಸದ್ಯ 814 ಹೊಸ ಬಸ್‌ಗಳ ಸೇರ್ಪಡೆ ಜತೆಗೆ 977 ಹಳೇ ಬಸ್‌ಗಳನ್ನು ಪುನಶ್ಚೇತನ ಮಾಡಲಾಗುತ್ತದೆ. 100 ಹೊಸ ಪಲ್ಲಕ್ಕಿ ಸ್ಲೀಪರ್ ಬಸ್‌ಗಳ ಸೇರ್ಪಡೆಗೆ ಸರ್ಕಾರ ಅನುಮತಿ ನೀಡಿದ್ದು, 20 ಅಂಬಾರಿ, 20 ಐರಾವತ ಉತ್ಸವ ಬಸ್‌ಗಳ ಖರೀದಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಕೂಡ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದೆ.
Crime News: ಪತಿಯನ್ನು ಕೊಲ್ಲಲು ಎರಡೆರಡು ಪ್ಲಾನ್ ! ಬದುಕುಳಿದ ಪತಿಯನ್ನು ಕೊನೆಗೂ ಭೀಕರವಾಗಿ ಕೊಂದ ಪತ್ನಿ!