Sainika Hulu: ಸೈನಿಕ ಹುಳು ನಿಯಂತ್ರಣಕ್ಕೆ ವಿಜ್ಞಾನಿಗಳಿಂದ ಸೂಕ್ತ ಸಲಹೆ!

Sainika Hulu: ಬೆಳೆ ನಾಶಕ್ಕೆ ಸೈನಿಕ ಹುಳು ಕೂಡ ಒಂದು ಕಾರಣ. ಸೈನಿಕ ಹುಳು ಗಳ ನಿಯಂತ್ರಣಕ್ಕಾಗಿ ರೈತರು ಹಲವಾರು ರೀತಿ ಪ್ರಯತ್ನ ಮಾಡಿ ಸೋತಿದ್ದಾರೆ. ಈಗಾಗಲೇ ಬೆಳೆ ನಾಶದಿಂದ ರೈತರು ಕಣ್ಗೆಟ್ಟಿದ್ದಾರೆ. ಅದಕ್ಕಾಗಿ ಸರಿಯಾದ ಪರಿಹಾರವನ್ನು ಇಲ್ಲಿ ತಿಳಿಸಲಾಗಿದೆ.

ಸೈನಿಕ ಹುಳುವು (Sainika Hulu) 20-25 ದಿನಗಳ ಜೀವನ ಚಕ್ರ ಹೊಂದಿದ್ದು, ಏಕ ಬೆಳೆಯಲ್ಲೇ ಇದರ ಮೂರು ಹಂತಗಳು (ಮೊಟ್ಟೆ/ ಮರಿಹಳು/ ಪ್ರೌಡ ಚಿಟ್ಟೆ) ಕಾಣಿಸಿಕೊಂಡು ಎಲೆಗಳನ್ನು, ಸುಳಿಗಳನ್ನು ತಿಂದು ರಂಧ್ರಗಳನ್ನು ಮಾಡಿ ಹಿಕ್ಕೆಗಳನ್ನು ಎಲೆಯ ಮೇಲೆಯ ಬಿಡುತ್ತದೆ. ಅದಕ್ಕಾಗಿ ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯದ ಕೀಟಶಾಸ್ತ್ರ ವಿಜ್ಞಾನಿ ಡಾ. ಶರಣಬಸಪ್ಪ ಎಸ್. ದೇಶಮುಖ್ ಅವರು, ಬೆಳೆಯ 45 ದಿನಗಳವರೆಗೆ ಈ ಹುಳು ಕಾಣಿಸಿಕೊಂಡು ಶೇ.70-80 ರವರೆಗೆ ಇಳುವರಿ ನಷ್ಟಕ್ಕೆ ಕಾರಣವಾಗುತ್ತದೆ. ರೈತರು ಪರ್ಯಾಯ ಬೆಳೆ ಪದ್ಧತಿ ರಸಾಯನಿಕ ಸಿಂಪರಣೆ ಮೂಲಕ ಈ ರೋಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಜಮೀನುಗಳಲ್ಲಿ ಸೈನಿಕ ಹುಳು ಕಾಟ, ಹತೋಟಿಗೆ ಸಲಹೆಗಳು:

ಬೇಸಾಯ ಶಾಸ್ತ್ರಜ್ಞ ಹೊನ್ನಪ್ಪ ಪ್ರಕಾರ “ಮುಸುಕಿನ ಜೋಳ ಬೆಳೆಯಲ್ಲಿ ಮುಳ್ಳು ಸಜ್ಜೆ ಕಳೆ ನಿರ್ವಹಣೆ ಬಹಳ ಮುಖ್ಯ. ಬಿತ್ತನೆಯಾದ 3 ದಿನಗಳೊಳಗೆ ಅಟ್ರಜಿನ್ 50 WP ಯನ್ನು 1.5 ಕೆ.ಜಿ/ ಒಂದು ಎಕರೆಗೆ ಅಥವಾ ಪೆಂಡಿಮಕಾಲೀನ್ 400 ಎಂ.ಎಲ್/ ಒಂದು ಎಕರೆಗೆ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು . ಹಾಗೆಯೇ 25 ದಿನಗಳ ನಂತರ ಅಂತರ ಬೇಸಾಯ ಮಾಡಿ ಕಳೆ ನಿರ್ವಹಣೆ ಮಾಡಬಹುದು.

Leave A Reply

Your email address will not be published.