Indian Railway : ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – ಟಿಕೆಟ್ ಬುಕ್ಕಿಂಗ್ ನಲ್ಲಿ ಇನ್ಮುಂದೆ ಇರೋಲ್ಲ ವೇಟಿಂಗ್‌, ಬರೀ ಕನ್‌ಫರ್ಮ್ !!

 

Indian Railway : ಭಾರತೀಯ ರೈಲ್ವೆ(Indian Railway)ಯು ಪ್ರಪಂಚದ ಅತೀ ದೊಡ್ಡ ರೈಲ್ವೇ ಜಾಲಗಳಲ್ಲಿ ಒಂದು. ಕಳೆದ ಕೆಲವು ವರ್ಷಗಳಿಂದ ಇದರಲ್ಲಿ ಆದ ಸುಧಾರಣೆಗಳು ಊಹೆಗೂ ನಿಲುಕದ್ದು. ಅಲ್ಲದೆ ಇಲಾಖೆಯು ತನ್ನ ಪ್ರಯಾಣಿಕರಿಗೆ ಸಾಕಷ್ಟು ಮಾಡಿಕೊಡುವ ಅನುಕೂಲಗಳು ಕೂಡ ಇಂದು ತುಂಬಾ ಪ್ರಾಮುಖ್ಯತೆ ಪಡೆಯುತ್ತಿವೆ. ಹಲವು ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಅಂತೆಯೇ ಇದೀಗ ಟಿಕೆಟ್ ಬುಕ್ಕಿಂಗ್(Ticket Booking)ವಿಚಾರವಾಗಿ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿರುವ ರೈಲ್ವೆ ಇಲಾಖೆಯು ಬುಕ್ಕಿಂಗ್ ನಲ್ಲಿ ಇನ್ಮುಂದೆ ವೇಟಿಂಗ್‌ ಮಾತೇ ಇಲ್ಲ ಎಂದು ಹೇಳಿದೆ.

 

ಹೌದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌(Ashwini Vaishnav) ಅವರು ದೇಶದ ರೈಲು ಮಂತ್ರಿ ಆದಾಗಿಂದ ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿದ್ದಾರೆ. ಪ್ರಧಾನಿ ಮೋದಿಯವರ ಎರಡನೇ ಅವಧಿಯಲ್ಲಿ ರೈಲ್ವೆ ಸಚಿವರಾಗಿದದ ಅವರು ಇದೀಗ ಮೂರನೇ ಅವಧಿಗೂ ಅವರೇ ಮಂತ್ರಿಯಾಗಿ ಮುಂದುವರಿದಿದ್ದಾರೆ. ಹೀಗಾಗಿ ಇಲಾಖೆಯ ಕಾರ್ಯಗಳು, ಅಭಿವೃದ್ಧಿಗಳು ದೊಡ್ಡ ಮಟ್ಟದಲ್ಲಿ ಆಗುವ ನಿರೀಕ್ಷೆ ಇದೆ.

 

ಇದೀಗ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಲ್ಲೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವ ಅವರು ಮುಂದಿನ ಐದು ವರ್ಷಗಳಲ್ಲಿ ರೈಲ್ವೆ ಇಲಾಖೆಯಲ್ಲಿ ಮತ್ತಷ್ಟು ಕ್ರಾಂತಿಕಾರಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದಾಗಿ  ತಿಳಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಿ, ಪ್ರತಿಯೊಬ್ಬರಿಗೂ ಕನ್ಫರ್ಮ್ಡ್‌ ಟಿಕೆಟ್‌ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ಹೀಗಾಗಿ ಮುಂದಿನ ದಿನಗಳಲ್ಲಿ ಟಿಕೆಟ್ ವೇಟಿಂಗ್‌ ಮಾತೇ ಇಲ್ಲ ಎಂದು ತಿಳಿಸಿದ್ದಾರೆ.

 

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಳೆದ 10 ವರ್ಷಗಳಲ್ಲಿ ಭಾರತದ ರೈಲ್ವೆಯನ್ನು ನರೇಂದ್ರ ಮೋದಿ ಅವರು ರೂಪಾಂತರಗೊಳಿಸಿದ್ದಾರೆ. ಮುಂದಿನ 5 ವರ್ಷಗಳಲ್ಲಿ ದೇಶದ ರೈಲ್ವೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವುದು ನರೇಂದ್ರ ಮೋದಿ ಅವರ ಗ್ಯಾರಂಟಿಯಾಗಿದೆ. ದೇಶಾದ್ಯಂತ ರೈಲುಗಳನ್ನು ಹೆಚ್ಚಿಸಿ, ಪ್ರತಿಯೊಬ್ಬ ಪ್ರಯಾಣಿಕರಿಗೆ ಕನ್ಫರ್ಮ್ಡ್‌ ಟಿಕೆಟ್‌ ಸಿಗುವಂತೆ ಮಾಡಲಾಗುತ್ತದೆ. ಇದರಿಂದ ಪ್ರಯಾಣಿಕರು ವೇಟಿಂಗ್‌ ಲಿಸ್ಟ್‌ ನೋಡುತ್ತ ಕಾಯುವುದು ತಪ್ಪುತ್ತದೆ. ಎಲ್ಲರಿಗೂ ಸುಲಭವಾಗಿ ರೈಲು ಟಿಕೆಟ್‌ ಕೊಡುವಂತೆ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

 

ಅಲ್ಲದೆ ಪ್ರಯಾಣಿಕರು ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ರೈಲು ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತಿದೆ. ಭಾರತದ ಮೂಲೆ ಮೂಲೆಗೆ ರೈಲು ಸೇವೆಗಳನ್ನು ನೀಡಲಾಗುತ್ತದೆ. ಯಾವುದೇ ವೈಟಿಂಗ್ ಲಿಸ್ಟ್‌ಗೆ ಕಾಯದೇ ಸೀಟುಗಳನ್ನು ರಿಸರ್ವ್ ಮಾಡಲು ಸಾಧ್ಯವಿದೆ. 2032ರ ವೇಳೆಗೆ ಭಾರತೀಯ ರೈಲ್ವೇ ಸಂಪೂರ್ಣ ಬದಲಾಗಲಿದೆ. ಆಧುನಿಕತೆ ಪಡೆದುಕೊಳ್ಳಲಿದೆ ಎಂದಿದ್ದಾರೆ.

 

ಭಾರತೀಯ ರೈಲ್ವೆ: 

ಭಾರತೀಯ ರೈಲ್ವೆ ಇಲಾಖೆ ಬಗ್ಗೆ ಎಲ್ಲರಿಗೂ ತಿಳಿದಿದೆ.  ವಿಶ್ವದಾದ್ಯಂತ ನಾಲ್ಕನೇ ಅತಿ ದೊಡ್ಡ ರೈಲ್ವೆ ಪ್ಲಾಟ್ಫಾರ್ಮ್ ನಮ್ಮ ದೇಶದ್ದು ಎಂಬುದು ಎಲ್ಲರಿಗೂ ಹೆಮ್ಮೆಯ ಸಂಗತಿ. ಲಕ್ಷಾಂತರ ಜನ ದಿನನಿತ್ಯ ಸಂಚರಿಸುತ್ತಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ರೈಲ್ವೆ ಇಲಾಖೆಯು ಬಹಳಷ್ಟು ಮಹತ್ತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಹೈಟೆಕ್  ವ್ಯವಸ್ಥೆಗಳನ್ನು ಕಲ್ಪಿಸಿ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿ ಕೊಡುತ್ತಿದೆ. ಅಲ್ಲದೆ ಇದೀಗ ದೇಶದ ರೈಲ್ವೆ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲಾಗಿದೆ. ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ವಂದೇ ಭಾರತ್‌ನಂತಹ ಅತ್ಯಾಧುನಿಕ ರೈಲುಗಳನ್ನು ಪರಿಚಯಿಸಲಾಗಿದೆ.

Leave A Reply

Your email address will not be published.