Viral Video: ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ ಮುಸ್ಲಿಂ ಕ್ಷೌರಿಕ! ವಿಡಿಯೋ ವೈರಲ್!

Viral Video: ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿ ಕ್ಷೌರದಂಗಡಿಯ ಕ್ಷೌರಿಕನೊಬ್ಬ ತನ್ನ ಗ್ರಾಹಕನಿಗೆ ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ್ದು, ಈತನ ಈ ಹೇಯ  ಕೃತ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Eye Care: ಇನ್ಮೇಲೆ ಕಣ್ಣಿನ ಸಮಸ್ಯೆ ಬರೋದೇ ಇಲ್ಲ! ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು!

ಇತ್ತೀಚಿಗೆ ಯುವಕರು ಕೂಡಾ ಹೇರ್‌ ಕಟ್‌ ಜೊತೆಗೆ  ಫೇಶಿಯಲ್‌, ಫೇಸ್‌ ಮಸಾಜ್‌ ಮಾಡಿಸಿಕೊಳ್ಳುವುದು ಕಾಮನ್ ಆಗಿರುವ ವಿಷಯ. ಆಶ್ಚರ್ಯ ಅಂದ್ರೆ ಇಲ್ಲೊಬ್ಬ ಯುವಕ ಕೂಡಾ ತನ್ನ ಸೌಂದರ್ಯವನ್ನು ಹೆಚ್ಚಿಸಲು ಕ್ಷೌರದಂಗಡಿಯಲ್ಲಿ ಫೇಸ್ ಮಸಾಜ್ ಮಾಡಿಕೊಂಡಿದ್ದಾನೆ. ಆದರೆ ಫೇಸ್ ಮಸಾಜ್ ಮಾಡುತ್ತಿರುವ ಜೊತೆಗೆ ಕೈ ಮೇಲೆ ಎಂಜಲು ಉಗಿದು ಅದನ್ನು ಮಿಕ್ಸ್ ಮಾಡಿ ಗ್ರಾಹಕನಿಗೆ ಫೇಸ್ ಮಸಾಜ್  ಮಾಡಿದ್ದಾನೆ. ಈ ಕುರಿತ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಸೆಲೂನ್ ಒಂದರ ಕ್ಷೌರಿಕ ಅಮ್ಜದ್ ಎಂಬಾತ ಎಂಜಲು ಉಗುಳಿ ತನ್ನ ಗ್ರಾಹಕರಿಗೆ ಫೇಸ್ ಮಸಾಜ್ ಮಾಡಿದ್ದಾನೆ. ಈತನ ಕೃತ್ಯದ ವಿಡಿಯೋ ತುಣುಕು ಸದ್ಯ @TruestoryUP ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ವೈರಲ್ ಆಗುತ್ತಿದ್ದಂತೆ ಎಫ್.ಐ.ಆರ್ ದಾಖಲಿಸಿ ಪೊಲೀಸರು ಅಮ್ಜದ್ನನ್ನು ಬಂಧಿಸಿದ್ದಾರೆ.

ಸದ್ಯ ಕ್ಷೌರಿಕನ ಈ ಕೃತ್ಯದಿಂದ ಸ್ಥಳೀಯರು ತೀವ್ರ ಆಕ್ರೋಶಗೊಂಡಿದ್ದು, ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಈತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

 

Leave A Reply

Your email address will not be published.