Renukaswamy Case: ದರ್ಶನ್ ಮತ್ತು ಗ್ಯಾಂಗ್ ಶೇಕ್ ಶೇಕ್ – ರೇಣುಕಾಸ್ವಾಮಿ ಕೇಸಿನ ವಾದಕ್ಕೆ ಸರ್ಕಾರ ಕಳಿಸಿದ ವಕೀಲರ ಹಿನ್ನೆಲೆ ಕೇಳಿದ್ರೇ ನೀವೂ ಶಾಕ್ !!

Renukaswamy Case: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ(Renuka Swamy Case) ಆರೋಪದಡಿ ಬಂಧನವಾಗಿರುವ ಆರೋಪಿ ದರ್ಶನ್ ಅಂಡ್ ಗ್ಯಾಂಗ್ ಅನ್ನು ಪೋಲೀಸರು ಕೋರ್ಟ್(Court) ಗೆ ಹಾಜರು ಪಡಿಸಲು ರೆಡಿಮಾಡಿದ್ದಾರೆ. ಆದರೀಗ ದರ್ಶನ್(Darshan) ಗೆ ಎಲ್ಲಾ ಕಡೆಯಿಂದಲೂ ಮತ್ತೆ ಶಾಕ್ ಆಗಲು ಶುರುವಾಗಿದೆ.

Course Fee Hike : ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಸರ್ಕಾರ – ಇಂಜನಿಯರಿಂಗ್ ಶುಲ್ಕ ಶೇ 10ರಷ್ಟು ಹೆಚ್ಚಳ !!

ಹೌದು,,ರೇಣುಕಾ ಸ್ವಾಮಿ ಕೊಲೆ ಕೇಸಿನ ಬಗ್ಗೆ ವಾದ ಮಂಡಿಸಲು ಸರ್ಕಾರದಿಂದ ಪ್ರಸನ್ನ ಕುಮಾರ್(Prasanna Kumar) ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನಿಯೋಜನೆ ಮಾಡಲಾಗಿದೆ. ಆದರೆ, ಪ್ರಸನ್ನ ಕುಮಾರ್ ಹಿನ್ನೆಲೆ ತಿಳಿದು ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಈಗ ನಡುಕ ಶುರುವಾಗಿದಯಂತೆ. ಯಾಕೆಂದರೆ ಪ್ರಸನ್ನ ಕುಮಾರ್ ಅವರು ಸಾಮಾನ್ಯ ಲಾಯರ್ ಅಲ್ಲ. ಅವರ ಹಿನ್ನೆಲೆ ಏನು ಅಂತ ಗೊತ್ತಾದ್ರೆ ನೀವೂ ನಡುಗುತ್ತೀರಾ !!

ಯಾರು ಈ ಪ್ರಸನ್ನ ಕುಮಾರ್?!
ಪ್ರಸನ್ನ ಕುಮಾರ್ ಸಾಮಾನ್ಯ ವಕೀಲರೇನೂ ಅಲ್ಲ. ಪ್ರಸ್ತುತವಾಗಿ ಕೇಂದ್ರೀಯ ತನಿಖಾ ದಳ (CBI), ಜಾರಿ ನಿರ್ದೇಶನಾಲಯ (ಇಡಿ) ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿಶೇಷ ಅಭಿಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ರೇಣುಕಾಸ್ವಾಮಿ ಕೊಲೆ ಕೇಸಿಗೆ ಎಸ್‌ಪಿಪಿ ಆಗಿ ಸರ್ಕಾರ ನೇಮಕ ಮಾಡಲಾಗಿದ್ದು, ಇದು ಕೊಲೆ ಆರೋಪಿ ದರ್ಶನ್ ಹಾಗೂ ಗ್ಯಾಂಗ್‌ಗೆ ನಡುಕ ಹುಟ್ಟಿಸುವಂತೆ ಮಾಡಿದೆ.

ಜವಾಬ್ದಾರಿ ಮೆರೆದ ಸರ್ಕಾರ:
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರುತ್ತಿದ್ದಂತೆ ಹಲವು ವಕೀಲರು ಬಂದು ಅವರ ಪರವಾಗಿ ವಾದ ಮಂಡಿಸುತ್ತಾ ಪೊಲೀಸ್ ಕಸ್ಟಡಿಗೆ 15 ದಿನ ಒಪ್ಪಿಸುವುದನ್ನು ತಡೆದಿದ್ದರು. ಜೊತೆಗೆ, ಪ್ರತಿನಿತ್ಯ ವಕೀಲರು ಭೇಟಿ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಹತ್ಯೆಗೀಡಾದ ರೇಣುಕಾಸ್ವಾಮಿ ಪರವಾಗಿ ವಾದ ಮಂಡಿಸಲು ಯಾವೊಬ್ಬ ವಕೀಲರೂ ಇರಲಿಲ್ಲ. ಆದರೆ, ಹತ್ಯೆಗೀಡಾದ ರೇಣುಕಾಸ್ವಾಮಿಗೆ ನ್ಯಾಯ ಕೊಡಿಸಲು ಮುಂದಾಗಿರುವ ಸರ್ಕಾರ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ವಾದ ಮಂಡಿಸಲು ವಿಶೇಷ ಅಭೀಯೋಜಕರನ್ನು ನೇಮಿಸಿದೆ.

ಅಂದಹಾಗೆ ಪವಿತ್ರಾ ಗೌಡ(Pavitra Gowda) ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಎಂದು ರೇಣುಕಾಸ್ವಾಮಿಯನ್ನು ಶೆಡ್‌ವೊಂದಕ್ಕೆ ಕರೆತಂದು ಹಲ್ಲೆ ನಡೆಸಲಾಗಿತ್ತು. ಗಂಭೀರ ಹಲ್ಲೆಯಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಹಿನ್ನೆಲೆಯಲ್ಲಿ ಸರ್ಕಾರ ತೀವ್ರ ಕಟ್ಟೆಚ್ಚರವಹಿಸಿ ಕೊಲೆ ಪ್ರಕರಣದ 18 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಒಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ.

ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ ಮುಸ್ಲಿಂ ಕ್ಷೌರಿಕ! ವಿಡಿಯೋ ವೈರಲ್!

Leave A Reply

Your email address will not be published.