Home News 7th Pay Commission: ಸರ್ಕಾರಿ ನೌಕರರಿಗೆ ಮತ್ತೆ ಕೈ ಕೊಟ್ಟ ಸರ್ಕಾರ – 7ನೇ...

7th Pay Commission: ಸರ್ಕಾರಿ ನೌಕರರಿಗೆ ಮತ್ತೆ ಕೈ ಕೊಟ್ಟ ಸರ್ಕಾರ – 7ನೇ ವೇತನ ಆಯೋಗದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಆಗಲಿಲ್ಲ ಯಾವುದೇ ತೀರ್ಮಾನ !!

7th Pay Commission

Hindu neighbor gifts plot of land

Hindu neighbour gifts land to Muslim journalist

7th Pay Commission: ಲೋಕಸಭಾ ಚುನಾವಣೆ ಬಳಿಕ ಗುರುವಾರ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿಂದು ಮೊದಲ ಸಂಪುಟ ಸಭೆ (Cabinet Meeting) ನಡೆದಿದ್ದು ಸರ್ಕಾರಿ ನೌಕರರಿಗೆ ಭಾರೀ ನಿರಾಶೆ ಆಗಿದೆ. ಯಾಕೆಂದರೆ ಸರ್ಕಾರ ಈ ಸಭೆಯಲ್ಲಿ 7ನೇ ವೇತನ ಆಯೋಗ( 7th Pay Commission) ಜಾರಿ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ಹೌದು, ಸಿಎಂ(CM) ನೇತೃತ್ವದ ಸಂಪುಟ ಸಭೆಯಲ್ಲಿ ಏಳನೇ ವೇತನ ಆಯೋಗದ (7th Pay Commission) ಶಿಫಾರಸುಗಳ ಜಾರಿ ವಿಚಾರವಾಗಿ ಚರ್ಚೆ ನಡೆದಿದೆ. ಆದರೆ ಯಾವುದೇ ನಿರ್ಣಯ ಹೊರಬೀಳಲಿಲ್ಲ. ಇದರಿಂದಾಗಿ ಈಸಲವಾದರೂ 7ನೇ ವೇತನ ಆಯೋಗ ಜಾರಿಯಾಗಬಹುದೆಂಬ ಭಾರಿ ನಿರೀಕ್ಷೆಯಲ್ಲಿದ್ದ ನೌಕರರಿಗೆ ನಿರಾಸೆಯಾದಂತಾಗಿದೆ.

DMK’s Maran Brings North- South Into NEET UG-2024 Controversy: In North India, Students Copy…!

ಅಂದಹಾಗೆ ಸರ್ಕಾರಿ ನೌಕಕರು ಲೋಕಸಭಾ ಚುನಾವಣೆಗೂ(Parliament Election)ಮೊದಲೇ 7 ನೇ ವೇತನ ಆಯೋಗದ ಜಾರಿ ಕುರಿತು ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದು, ಸರ್ಕಾರದ ವಿರುದ್ಧ ಹಲವಾರು ಭಾರಿ ಹೋರಾಟವನ್ನೂ ಕೂಡ ನಡೆಸಿದ್ದರು. ಅಂತೆಯೇ ಚುನಾವಣೆ ಆರಂಭವಾಗುವ ಸಮಯದಲ್ಲಿ ಸಲ್ಲಿಕೆಯಾಗಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಸ್ವೀಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರು, ಕೂಲಂಕಶವಾಗಿ ಅಧ್ಯಯನ ಮಾಡಿ ಸಲಹೆ ನೀಡಲು ಹಣಕಾಸು ಇಲಾಖೆಗೆ ಸೂಚಿಸಿದ್ದರು. ಹೀಗಾಗಿ ಈ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಎಲ್ಲದೂ ತೀರ್ಮಾನ ಆಗಿ ಬೇಡಿಕೆ ಈಡೇರುತ್ತದೆ ಎಂದು ನೌಕರರು ನಿರೀಕ್ಷಿಸಿದ್ದರು.

ಸಂಪುಟ ಸಭೆಯ ಬಳಿಕ ಕಾನೂನು, ನ್ಯಾಯ, ಮಾನವಹಕ್ಕುಗಳು, ಸಂಸದೀಯ ವ್ಯವಹಾರ ಮತ್ತು ಶಾಸನರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಅವರು ಸುದ್ದಿಗೋಷ್ಠಿ ನಡೆಸಿ, ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ತೀರ್ಮಾನಗಳ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಚರ್ಚಿಸಿದ, ಕೈಗೊಂಡ ಕೆಲವು ನಿರ್ಣಯಗಳು:
* ತುರ್ತು ಕಾಮಗಾರಿಗಳಿಗೆ ಸಂಬಂಧಿಸಿ ಆಡಳಿತಾತ್ಮಕ ಅನುಮೋದನೆ ನೀಡಿದ್ದ 147 ಟೆಂಡರ್ ಪೈಕಿ 53ಕ್ಕೆ ಇನ್ನೂ ಟೆಂಡರ್ ಕರೆಯದಿರುವುದನ್ನು ಸಂಪುಟ ಗಂಭೀರವಾಗಿ ಪರಿಗಣಿಸಿದೆ.
* ಮುಂದಿನ ತಿಂಗಳಲ್ಲಿ ಕಾಮಗಾರಿ ಆರಂಭಿಸಲು ಸಿಎಂ ಸೂಚನೆ ನೀಡಿದ್ದಾರೆ. ಫೆ.12ರಿಂದ 14ರ ವರೆಗೆ ಬೆಂಗಳೂರಿನಲ್ಲಿ `ಇನ್ವೆಸ್ಟ್ ಕರ್ನಾಟಕ’ ಆಯೋಜಿಸಲು ಸಂಪುಟ ಒಪ್ಪಿಗೆ ಸೂಚಿಸಿದ್ದು, ಇದಕ್ಕೆ 85 ಕೋಟಿ ಮೀಸಲಿರಿಸಿದೆ.
* ಕಲ್ಯಾಣ ಕರ್ನಾಟಕ ಹಾಗೂ ವಾಯುವ್ಯ ಸಾರಿಗೆ ನಿಗಮಕ್ಕೆ 112 ವೇಗದೂತ ಬಸ್ ನೀಡಲು ಒಪ್ಪಿಗೆ ಸೂಚಿಸಿದೆ.
* ಮುಂಗಾರು ಪ್ರಾರಂಭವಾಗಿರುವ ಹಿನ್ನೆಲೆ ಕೆಲವು ಭಾಗಗಳಲ್ಲಿ ಅತಿವೃಷ್ಠಿಯಿಂದ ಪ್ರವಾಸ ಸಾಧ್ಯತೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಈ ಕುರಿತು ಮುಂಜಾಗ್ರತೆಗಳ ಬಗ್ಗೆಯೂ ಸಚಿವರೊಟ್ಟಿಗೆ ಮಾತುಕತೆ ನಡೆಸಿದ್ದಾರೆ.
* ರೈತರ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಬಗ್ಗೆಯೂ ಚರ್ಚೆ ನಡೆದಿದೆ.
ಇನ್ನು ಹಲವು ವಿಚಾರಗಳು ಚರ್ಚೆಯಾಗಿವೆ.

Bangalore News: ರೋಗಿಯ ಬಟ್ಟೆ ಮೇಲಕ್ಕೆತ್ತಿ, ಎದೆಗೆ ಕೈ ಹಾಕಿ ಸ್ತನಕ್ಕೆ ಮುತ್ತಿಟ್ಟ ವೈದ್ಯ, ಹೈಕೋರ್ಟ್ ಈ ಬಗ್ಗೆ ಕೊಡ್ತು ಹೊಸ ಆದೇಶ !